ಇಂಡಿ ತಾಲೂಕಿನಲ್ಲಿ ಲಸಿಕೆ ಗುರಿ ಮೀರಿ ಸಾಧನೆ : ಎಸಿ ರಾಹುಲ್ ಶಿಂಧೆ

ಇಂಡಿ:ಸೆ.25: ತಾಲೂಕಿನಲ್ಲಿ ಸ. 17 ರಂದು 20 ಸಾವಿರ ಜನರಿಗೆ ಮತ್ತು ಸ.22 ರಂದು ಏಳು ಸಾವಿರ ಜನರಿಗೆ ಲಸಿಕೆ ಹಾಕುವ ಗುರಿ ಹೊಂದಿದ್ದು ಗುರಿ ಮೀರಿ ಸಾಧನೆ ಮಾಡಲಾಗಿದೆ ಎಂದು ಎಸಿ ರಾಹುಲ್ ಸಿಂಧೆ ತಿಳಿಸಿದ್ದಾರೆ.

ಪಟ್ಟಣದ ಏಳು ಕಡೆ ಮತ್ತು ತಾಲೂಕಿನಲ್ಲಿ 54 ಕಡೆಗೆ ಲಸಿಕಾ ಹಾಕುವ ಕಾರ್ಯಕ್ರಮ ನಡೆಯಿತು. ಇಂಡಿ ತಾಲೂಕಿನಲ್ಲಿ ಸ. 17 ರಂದು 21254 ಜನರಿಗೆ ಶೇ.107.71 ಮತ್ತು ಸೆ. 22 ರಂದು 7110 ಶೇ. 102 ಜನರಿಗೆ ಲಸಿಕೆ ನೀಡಲಾಗಿದೆ ಎಂದು ಹೇಳಿದರು.

ಲಸಿಕೆ ಹಾಕುವ ಕಾರ್ಯಕ್ರಮದಲ್ಲಿ ಟಿಎಚ್‍ಓ ಡಾ. ಅರ್ಚನಾ ಕುಲಕರ್ಣಿ, ಸಿಎಂಓ ಡಾ. ರಾಜೇಶ ಕೋಳೆಕರ್, ಪುರಸಭೆ ಮುಖ್ಯಾಧಿಕಾರಿ ಶಿವಾನಂದ ಪೂಜಾರಿ, ಎಇಇ ಬಸವರಾಜ ಬಿರಾದಾರ, ಅಭಿಯಂತರ ಲಕ್ಷ್ಮೀಶ, ರೇಣುಕಾ ಬಡಿಗೇರ, ಕರ್ಜಗಿ ಡಿ.ಎಸ್, ಎಸ್.ಎಸ್ ಅಂಬಲಗಿ, ಎಲ್.ಎಸ್ ಸೋಮುನಾಯಕ, ಬಿ.ಎಸ್ ಪಾಟೀಲ, ಸೇರಿದಂತೆ ಆರೋಗ್ಯ ಇಲಾಖಾ ಸಿಬ್ಬಂದಿ, ಗ್ರಾ.ಪಂ ಸಿಬ್ಬಂದಿ, ಆಶಾ ಕಾರ್ಯಕರ್ತರು ಹಾಗೂ ಅಂಗನವಾಡಿ ಕಾರ್ಯಕರ್ತರು ಪಾಲ್ಗೊಂಡಿದ್ದರು.