ಇಂಡಿ ಜಿಲ್ಲೆ ಕೂಗು : 29 ಸಂಘ ಸಂಸ್ಥೆಗಳಿಂದ ಪ್ರತಿಭಟನೆ

ಇಂಡಿ:ಡಿ.31:ಇಂಡಿ ಜಿಲ್ಲೆ ಮಾಡಬೇಕೆಂದು ಆಗ್ರಹಿಸಿ 29 ಸಂಘ ಸಂಸ್ಥೆಗಳು ಪ್ರತಿಭಟನೆ ನಡೆಸಿ ಮಿನಿ ವಿಧಾನಸೌಧ ತೆರಳಿ ಕಂದಾಯ ಉಪವಿಭಾಗಾಧಿಕಾರಿ ಅಬೀದ್ ಗದ್ಯಾಳ ಇವರಿಗೆ ಮನವಿ ಅರ್ಪಿಸಿದರು.
ಪ್ರತಿಭಟನೆ ಪಟ್ಟಣದ ಕುಂಬಾರ ಓಣಿಯಿಂದ ಪ್ರಾರಂಭವಾಗಿ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಹಾಯ್ದು ಮಿನಿ ವಿಧಾನಸೌಧ ತಲುಪಿ ಅಲ್ಲಿ ಬೃಹತ್ ಪ್ರತಿಭಟನೆ ನಡೆಯಿತು.
ಅಲ್ಲಿ ಮಾತನಾಡಿದ ಸಾಹಿತ್ಯ ಮತ್ತು ಸಾಂಸ್ಕøತಿಕ ವೇದಿಕೆಯ ಕಾಂತು ಇಂಡಿ,ರಾಜು ಕುಲಕರ್ಣಿ,ಶ್ರೀ ಶಾಂತೇಶ್ವರ ವಿದ್ಯಾವರ್ಧಕ ಸಂಘದ ಸಿದ್ದಣ್ಣ ತಾಂಬೆ,ಕನ್ನಡ ಸಾಹಿತ್ಯ ಪರಿಷತ್ತಿನ ಅಂಬಣ್ಣ ಸುಣಗಾರ,ಶರಣ ಸಾಹಿತ್ಯ ಪರಿಷತ್ತಿನ ಬಿ.ಎಸ್.ಪಾಟೀಲ, ಖಾಸಗಿ ವೈದ್ಯಾಧಿಕಾರಿಗಳ ಸಂಘದ ಡಾ|| ಬಿ.ಎಸ್.ಅಂಕಲಗಿ, ಪುರಸಭೆ ಮಾಜಿ ಅಧ್ಯಕ್ಷ ಸಂಘದ ಶ್ರೀಕಾಂತ ಕುಡಿಗನೂರ,ಅಶೋಕ ಪಾಟೀಲ, ಮರಾಠಾ ಯುವ ಘಟಕ ಸಂಘದ ಯಮುನಾಜಿ ಸಾಳುಂಕೆ,ಗ್ರಾ.ಪಂ ಅಧ್ಯಕ್ಷರ ಸಂಘದ ಶೈಲಜಾ ಜಾಧವ, ಕದಳಿ ವೇದಿಕೆಯ ಶಶಿಕಲಾ ಬೇಟಗೇರಿ, ಕುಂಬಾರ ಸಮಾಜದ ಸಂಘದಿಂದ ಸತೀಶ ಕುಂಬಾರ, ಮತ್ತು ಕಾಂಗ್ರೆಸ್ ಮಹಿಳಾ ಘಟಕದ ನಿರ್ಮಲಾ ತಳಕೇರಿ, ಮಾತನಾಡಿ ಇಂಡಿ ಜಿಲ್ಲೆಯಾಗಲು ಸರ್ವ ಅರ್ಹತೆಗಳಿವೆ. ಇಂಡಿ ಜಿಲ್ಲೆ ಯಾದರೆ ಪ್ರವಾಸೋದ್ಯಮ, ನಿಂಬೆ ಅಭಿವೃದ್ದಿ ಮಂಡಳಿ,ನೀರಾವರಿ ಸೇರಿದಂತೆ ಎಲ್ಲ ವಿಧದಲ್ಲೂ ಅಭಿವೃದ್ಧಿ ಯಾಗುತ್ತದೆ ಎಂದರು.ನಾವು ಟೀಕೆ ಮಾಡುವದಿಲ್ಲ, ಪಕ್ಷಾತೀತ,ಜಾತ್ಯಾತೀತ ಹೋರಾಟಮಾಡುತ್ತೇವೆ ಎಂದರು.
ಪ್ರತಿಭಟನೆಯಲ್ಲಿ ಇಂಡಿ ಪಿಕೆಪಿಎಸ್, ಅಂಜುಟಗಿ ಪಿಕೆಪಿಎಸ್, ನಿವೃತ್ತ ನೌಕರರ ಸಂಘ, ಅಂಜುಮನ್ ಇಸ್ಲಾಂ ಸಮಿತಿ, ಧರ್ಮಸ್ಥಳ ಮಂಜುನಾಥ ಮಹಿಳಾ ವಿವಿಧ ಉದ್ದೇಶಗಳ ಸಂಘ, ಹೋಟೆಲ್ ಮಾಲಿಕರ ಸಂಘ, ಕೃಷಿ ಮಾರುಕಟ್ಟೆ ಸಮಿತಿ ಒಕ್ಕೂಟ, ಹೂಗಾರ ಸಮಾಜ, ವಿಠ್ಠಲ ರುಕಮಾಯಿ ದೇವಸ್ಥಾನ ಸಮಿತಿ, ಕನಕ ಸೇನೆ, ಸಂಗೊಳ್ಳಿ ರಾಯಣ್ಣ ಬ್ರೀಗೆಡ್, ಅಂಬಾಭವಾನಿ ದೇವಸ್ಥಾನ ಸಮಿತಿ, ಹಡಪದ ಅಪ್ಪಣ್ಣ ವಿವಿಧ ಉದ್ದೇಶ ಸಂಘ ಸೇರಿದಂತೆ 29 ಕ್ಕೂ ಹೆಚ್ಚು ಸಂಘ ಸಂಸ್ಥೆಗಳು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದವು.
ಪ್ರತಿಭಟನೆಯಲ್ಲಿ ಜಿ.ಜಿ.ಬರಡೋಲ, ಪ್ರಕಾಶ ಕಂಬಾರ, ಇಲಿಯಾಸ ಬೋರಾಮಣಿ, ರಾಜು ಪಡಗಾನೂರ, ಪ್ರಶಾಂತ ಕಾಳೆ, ಭೀಮಣ್ಣ ಕವಲಗಿ, ನಿವೃತ್ತ ನೌಕರರ ಸಂಘದ ಉಪಾಧ್ಯಕ್ಷ ಎರ್.ಎಸ್.ಮೇತ್ರಿ, ರಾಯಿಸ್ ಅಷ್ಟೇಕರ, ನೀಲಕಂಠಗೌಡ ಪಾಟೀಲ, ಫಿರದೋಶ ಸುನ್ನೆವಾಲೆ, ಸುಗಂದಾ ಪಾಟೀಲ, ಶೋಭಾ ಚವ್ಹಾಣ, ಲಕ್ಷ್ಮೀ ನಾಯಿಕೊಡಿ, ಭಾರತಿ ಕಟ್ಟಿಮನಿ, ಸವಿತಾ ಕಾಂಬಳೆ, ಚಂದ್ರಾಮ ಕುಡಿಗನೂರ, ಆನಂದ ಕಂಬಾರ, ಮಲ್ಲು ಬಡಿಗೇರ, ರಾಘು ಕುಡಿಗನೂರ, ಶ್ಯಾಮ ಕಂಬಾರ ಮತ್ತಿತರಿದ್ದರು.