ಇಂಡಿ ಜಿಲ್ಲೆಗೆ ಆಗ್ರಹಿಸಿ ಮನವಿ

ಇಂಡಿ:ಡಿ.31: ಇಂಡಿ ಪ್ರತ್ಯೇಕ ಜಿಲ್ಲೆ ಹಾಗೂ 371ಜೆ. ಘೋಷಣೆ ಆಗ್ರಹಿಸಿ ಇಂದು ಸಾಹಿತ್ಯ ಮತ್ತು ಸಂಸ್ಕøತಿಕ ವೇದಿಕೆ ತಾಲೂಕಾ ಘಟಕ ಇಂಡಿ. ಶರಣಸಾಹಿತ್ಯ ಪರಿಷ್ಯತ್ತು, ಕದಳಿ ವೇದಿಕೆ ಪಧಾಧಿಕಾರಿಗಳ ವತಿಯಿಂದ ಹಾಗೂ ಮಾಜಿ ಪುರಸಭೆ ಅಧ್ಯಕ್ಷ ಶ್ರೀಕಾಂತ ಕುಡಿಗನೂರ ನೈತೃತ್ವದಲ್ಲಿ ವಿವಿಧ ಸಂಘಟನೆಗಳ ಪಧಾಧಿಕಾರಿಗಳ ಸಹಯೋಗದಲ್ಲಿ ಹೋರಟ ಜಿಲ್ಲಾ ಹೋರಾಟ ಪ್ರತಿಭಟನಾ ಮೇರವಣಿಗೆ ಪಟ್ಟಣದ ಪ್ರಮುಖ ರಸ್ತೆಗಳ ಮುಖಾಂತರ ಸಂಚರಿಸಿ ಮಿನಿವಿಧಾನಸೌಧಾ ತಲುಪಿ ಉಪವಿಭಾಗಾಧಿಕಾರಿ ಅಬೀದ ಗದ್ಯಾಳ ಇವರ ಮೂಲಕ ಸರಕಾರಕ್ಕೆ ಮನವಿ ಸಲ್ಲಿಸಿದರು.
ಈ ಸಂದರ್ಬದಲ್ಲಿ ಮಾತನಾಡಿ ಕಸಾಪ ನಿಕಟಪೂರ್ವ ಅಧ್ಯಕ್ಷ ಡಾ.ಕಾಂತು ಇಂಡಿ , ಅಂಬಣ್ಣಾ ಸುಣಗಾರ, ಶ್ರೀಕಾಂತ ಕುಡಿಗನೂರ, ಯಮುನಾಜಿ ಸಾಳುಂಕೆ, ನೀಲಕಂಠಗೌಡ ಪಾಟೀಲ, ಜಟ್ಟೆಪ್ಪ ರವಳಿ,ಸಿದ್ದಣಾ ತಾಂಬೆ, ನಿರ್ಮಲಾ ತಳಕೇರಿ, ಶೈಲಜಾ ಜಾಧವ ಮಾತನಾಡಿ ವಿಧಾನ ಸಭೆಯ ಅಧಿವೇಶನದಲ್ಲಿ ಇಂಡಿ ಜಿಲ್ಲೆ ಮಾಡುವಂತೆ ಪ್ರಥಮವಾಗಿ ಒತ್ತಾಯಿಸಿರುವುದು ಶಾಸಕ ಯಶವಂತರಾಯಗೌಡ ಪಾಟೀಲ ಅದು ರೀಕಾರ್ಡ ಕೂಡಾ ಆಗಿದೆ. ರಾಜಕೀಯ ಮಾಡುವುದಾದರೆ ಚುನಾವಣೆ ಬಂದಾಗ ಮಾಡಲಿ ಒಂದು ತಾಲೂಕಿನ ದೂರದೃಷ್ಠಿ ಜನಾಂಗದ ಮುಂಬರುವ ಪಿಳಿಗೆ ಶ್ರೇಯೋಭಿವೃದ್ದಿಗಾಗಿ ದೂರದೃಷ್ಠಿಯಿಂದ ಶಾಸಕರು 371 ಜೆ ಹಾಗೂ ಜಿಲ್ಲಾ ಮಾಡಲು ಹೋರಟಾಗ ಅಡ್ಡಿಪಡಿಸುವುದು ತರವಲ್ಲ. ಇಂಡಿ ಜಿಲ್ಲೆಗೆ ಬೇಕಾದ ಎಲ್ಲಾ ವಾತಾರಣ ಸೃಷ್ಠಿ ಮಾಡಿದ್ದಾರೆ. ಭೋಗೋಳಿಕವಾಗಿ ವಿಸ್ತೀರ್ಣ ಹೊಂದಿದೆ ಜನಸಂಖ್ಯೆ ಹೆಚ್ಚಾಗಿದ್ದು. ರಾಷ್ಟ್ರೀಯ ಹೆದ್ದಾರಿ , ಸರಕುಸಾಗಾಣಿಕೆಗೆ ರೈಲು ನಿಲ್ದಾಣ, ಲಿಂಬೆ ಅಭಿವೃದ್ದಿ ಮಂಡಳಿ ,ಉಪವಿಭಾಗ ಕೃಷಿ ವಿಜ್ಞಾನ ಕೇಂದ್ರ ಹೇಲಿಪ್ಯಾಡ , ಮಿನಿವಿಧಾನಸೌಧಾ ಹೀಗೆ ಜಿಲ್ಲಾ ಕೇಂದ್ರವಾಗಲು ಬೇಕಾದ ಎಲ್ಲಾ ಸೌಲಭ್ಯಗಳು ಇರುವದರಿಂದ ಕೂಡಲೆ ಮುಖ್ಯ ಮಂತ್ರಿಗಳು ಇಂಡಿ ಜಿಲ್ಲೆಯಾಗಿಸಿ ಗಡಿ ಭಾಗ ಮತ್ತಷ್ಟು ಅಭಿವೃದ್ದಿಪಡಿಸಬೇಕು ಎಂದು ವಿವಿಧ ಸಂಘಟನೆಗಳು ಸರಕಾರಕ್ಕೆ ಮನವಿ ಸಲ್ಲಿಸಿದರು.
ಪ್ರಶಾಂತ ಕಾಳೆ, ಭಿಮಣ್ಣಾ ಕೌಲಗಿ, ಜಿ.ಜಿ ಬರಡೋಲ, ರಾಜು ಕುಲಕರ್ಣಿ, ಶರಣಬಸಪ್ಪ ಕಾಂಬಳೆ,ಡಾ. ಅಂಕಲಗಿ,ಬಿ.ಎಸ್ ಪಾಟೀಲ, ಖಾಜು ಸಿಂಗೆಗೋಳ, ಶಾಂತು ರೂಗಿ, ಎಂಪಿ ಬಿರಾದಾರ, ಎಸ್ ಕೆ ರಾವೂರ, ಶಶೀಕಲಾ ಬೆಟಗೇರಿ, ರಾಜೇಶ್ವರಿ ಕ್ಷತ್ರಿ, ಶ್ಯಾಮಲಾ ಬಗಲಿ, ರೈಸ ಅಷ್ಠೇಕರ್,ಇಲಿಯಾಸ ಬೋರಾಮಣಿ, ಸತಾರ ಬಾಗವಾನ,ಜೈನೂದಿನ ಬಾಗವಾನ, ರಾಜು ಪಡಗಾನೂರ,
ನಾಗೇಶ ತಳಕೇರಿ, ನೀಲಕಂಠ ರೂಗಿ, ಹಣಮಂತ ಕೊಡತೆ, ಭೀಮು ಮಸಳಿ, ಚಂದ್ರಕಾಂತ ಹೊಸಮನಿ ಪರಶುರಾಮ ಭಾವಿಕಟ್ಟಿ ಸೇರಿದಂತೆ ನೂರಾರು ಜನರು ಜಿಲ್ಲಾ ಹೋರಾದ ಮನವಿಯಲ್ಲಿ ಭಾಗಿಯಾದರು.