ಇಂಡಿ ಜಿಲ್ಲಾ ಕೂಗು ತೀವ್ರ ಸ್ವರೂಪಬೆಂಗಳೂರು, ದೆಹಲಿಗೆ ನಿಯೋಗಕ್ಕೆ ನಿರ್ಧಾರ

ಸಂಜೆವಾಣಿ ವಾರ್ತೆ
ಇಂಡಿ:ಜ.14: ಜಿಲ್ಲಾ ಮಾಡಬೇಕೆಂದು ಆಗ್ರಹಿಸಿ ಪಟ್ಟಣ ಮತ್ತು ತಾಲೂಕಿನ ಅಂಜುಮನ್ ಇಸ್ಲಾಂ ಸಮಿತಿಯ ಬಂಧುಗಳು ಪಟ್ಟಣದಲ್ಲಿ ಪ್ರತಿಭಟನೆ ನಡೆಸಿ ಕಂದಾಯ ಉಪವಿಭಾಗಾಧಿಕಾರಿ ಅಬೀದ್ ಗದ್ಯಾಳ ಇವರಿಗೆ ಮನವಿ ಸಲ್ಲಿಸಿದರು.
ಇಂಡಿಯ ಅಂಜುಮನ್ ಇಸ್ಲಾಂ ಸಮಿತಿಯ ಅಧ್ಯಕ್ಷ ಅಫಝಲ ಹವಾಲದಾರ ಮಾತನಾಡಿ ಈಗಾಗಲೇ ಇಂಡಿಯ ಶಾಸಕರಾದಿಯಾಗಿ ಝಮೀರ್ ಅಹಮ್ಮದ ಖಾನರವರಿಗೆ ಇಂಡಿ ಜಿಲ್ಲೆ ಮಾಡುವ ಕುರಿತು ಮನವರಿಕೆ ಮಾಡಿದ್ದು ಅವರು ಸಹಕಾರ ನೀಡುವದಾಗಿ ಒಪ್ಪಿದ್ದಾರೆ ಎಂದರು.
ಉಪಾಧ್ಯಕ್ಷ ಹುಸೇನ ಬೇಪಾರಿ ಮಾತನಾಡಿ ಈಗಾಗಲೇ ರಾಜ್ಯದ ಹಲವಾರು ರಾಜಕೀಯ ನಾಯಕರು ಇಂಡಿಗೆ ಚುನಾವಣೆ ಸಮಯದಲ್ಲಿ ಬಂದಾಗ ಮನವರಿಕೆ ಮಾಡಲಾಗಿದೆ. ಅದಲ್ಲದೆ ಮತ್ತೆ ಬೆಂಗಳೂರು ಮತ್ತು ದೆಹಲಿಗೆ ತೆರಳಿ ವರಿಷ್ಠರಿಗೆ ಮತ್ತು ಸಂಬಂದಿತ ಅಧಿಕಾರಿಗಳಿಗೆ ಮನವರಿಕೆ ಮಾಡುತ್ತೇವೆ. ಈಗಾಗಲೇ ಹಲವಾರು ರಾಜ್ಯಗಳಲ್ಲಿ ಹೊಸ ಜಿಲ್ಲೆ ಮಾಡಿದಾಗ ಅಭಿವೃದ್ಧಿ ನೆಪದಲ್ಲಿ ಮಾಡಿದ ಹಲವಾರು ಕಾಗದ ಪತ್ರಗಳನ್ನು ಸಂಗ್ರಹಿಸಲಾಗಿದೆ ಎಂದರು.
ಪ್ರತಿಭಟನೆಯಲ್ಲಿ ಮೌಲಾನಾ ಝೀಯಾ ಉಲ್ ಹಕ್ ಉಮರಿ, ಬಾಗವಾನ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಸತ್ತಾರ ಬಾಗವಾನ, ಪುರಸಭೆ ಸದಸ್ಯ ಜಹಾಂಗೀರ ಸೌದಾಗರ, ಜಬ್ಬಾರ ಅಣ್ಣಾ ಅರಬ್, ಹುಸೇನ ಜಮಾದಾರ, ಅಂಜುಮನ್ ಸಂಸ್ಥೆಯ ಮಾಜಿ ಅಧ್ಯಕ್ಷ ಮಹಮ್ಮದ ಬಾಗವಾನ, ಅಬ್ದುಲ್ ರಹಮಾನ ಅಂತೋಲೆ, ಇಲಿಯಾಸ ಬೋರಾಮಣಿ,ಮುನ್ನಾ ಬಾಗವಾನ, ಯಾಕುಬ ಮಾಶ್ಯಾಳಕರ, ರೈಸ ಅಷ್ಟೇಕರ ಮತ್ತಿತರಿದ್ದರು.