ಇಂಡಿ : ಕೃಷ್ಣಾ ಮುಖ್ಯ ಕಾಲುವೆಗೆ ನೀರು

ಇಂಡಿ :ಅ.1:ತಾಲೂಕಿನಲ್ಲಿ ಹರಿಯುವ ಕೃಷ್ಣಾ ಮುಖ್ಯ ಕಾಲುವೆಗೆ ನೀರು ಬಿಡಲಾಗಿದೆ ಎಂದು ಐಬಿಸಿ ಕೆಬಿಜೆಎನ್‍ಎಲ್ ವಿಭಾಗದ ಕಾರ್ಯಪಾಲಕ ಅಭಿಯಂತರರು ಝಳಕಿಯ ಮಠ ಮತ್ತು ಸಹಾಯಕ ಕಾರ್ಯ ನಿರ್ವಾಹಕ ಅಭಿಯಂತರ ಅರವಿಂದ ಪೋಳ ತಿಳಿಸಿದ್ದಾರೆ.
ಈ ನೀರು ಕೆರೆ ತುಂಬಿಸಲು ಮಾತ್ರ ಬಳಸಲಾಗುತ್ತಿದ್ದು ಕೆರೆ ತುಂಬಿದ ನಂತರ ಉಪ ಕಾಲುವೆಗಳಿಗೆ ಮತ್ತು ವಿತರಣಾ ಕಾಲುವೆಗಳಿಗೆ ಬಿಡಲಾಗುತ್ತಿದ್ದು ಅದನ್ನು ರೈತರು ಕೃಷಿಗೆ ಬಳಸಬಹುದು ಎಂದು ಹೇಳಿದ್ದಾರೆ.
ಈಗಾಗಲೇ ಸಂಗೋಗಿ,ಹಂಜಗಿ,ಅರ್ಜನಾಳ ಮತ್ತು ಲೋಣಿ ಬಿ.ಕೆ ಕೆರೆಗಳನ್ನು ತುಂಬವ ಕಾರ್ಯ ಪ್ರಗತಿಯಲ್ಲಿದೆ.
ಸಂಗೋಗಿ ಕೆರೆಯಿಂದ ವಿಜಯಪುರ ತಾಲೂಕಿನ 54 ಗ್ರಾಮಗಳು, ಇಂಡಿ ತಾಲೂಕಿನ 27 ಗ್ರಾಮಗಳು,ಹಂಜಗಿ ಕೆರೆಯಿಂದ ಇಂಡಿ ತಾಲೂಕಿನ 27, ಅರ್ಜನಾಳ ಕೆರೆಯಿಂದ ಇಂಡಿ ತಾಲೂಕಿನ 40 ಮತ್ತು ಲೋಣಿ ಬಿಕೆ ಕೆರೆಯಿಂದ ಇಂಡಿ ಚಡಚಣ ಭಾಗದ 21 ಗ್ರಾಮಗಳ ಜನರಿಗೆ ಕುಡಿಯುವ ನೀರು ಮತ್ತು ಜನ ಜಾನುವಾರುಗಳಿಗೆ ಉಪಯೋಗವಾಗಲಿದೆ ಎಂದು ಗ್ರಾಮೀಣ ಕುಡಿಯುವ ನೀರು ಸರಬರಾಜು ಜಿ.ಪಂ ವಿಭಾಗದ ಎಇಇ ಆರ್.ಎಸ್.ರುದ್ರವಾಡಿ ತಿಳಿಸಿದ್ದಾರೆ. ಕಾಲುವೆಯಲ್ಲಿ ನೀರು ಹರಿಯುತ್ತಿದ್ದರು ರೈತರು ಸಂತಸ ವ್ಯಕ್ತ ಪಡಿಸಿದ್ದಾರೆ.