ಇಂಡಿ ಕಲರಫುಲ್ ರಂಗಪಂಚಮಿ

ಇಂಡಿ:ಮಾ.31:ಎಲ್ಲಿ ನೋಡಿದರೆಲ್ಲಿ ಹಲಗೆ ನಾದ, ಹಾಗೂ ರಂಗು ರಂಗು ಬಣ್ಣಗಳ ಓಕುಳಿಯಾಟ, ಅಲ್ಲಲ್ಲಿ ಅಬ್ಬರದ ಡಿಜೆ ಮ್ಯೂಜಿಕ್, ರೇಸ್ ಡಾನ್ಸ ನಲ್ಲಿ ಯುವ ಜನತೆ ಕುಣಿದು ಕುಪ್ಪಳಿಸಿದರು
ಚಿಕ್ಕಮಕ್ಕಳಿಂದ ಹಿಡಿದು ವಯೋವೃದ್ಧರ ವರೆಗೂ ರಂಗಪಂಚಮಿಯಲ್ಲಿ ಮಿಂದೆದ್ದ ಇಂಡಿ ಪಟ್ಟಣದ ಜನತೆ.
ಹೋಳಿ ಹುಣ್ಣಿಮೆಯ ನಿಮಿತ್ಯ 5 ನೇ ದಿನವಾದ ಶನಿವಾರ ಪಟ್ಟಣದಲ್ಲಿ ಬೆಳಗ್ಗೆ 7 ರಿಂದ ಆರಂಬವಾದ ರಂಗಪಂಚಮಿಯ ಬಣ್ಣ ದಾಟ ಸಂಜೆಯ ವರೆಗೆ ನಡೆಯಿತು. ಪರಸ್ಪರ ಬಣ್ಣ ಹಚ್ಚುವದು ಹಾಗೂ ಹೋಳಿ ಹಬ್ಬದ ಶುಭಾಶಯ ಕೋರುವ ಮೂಲಕ ಜನರು ಹಬ್ಬದ ಸಂಭ್ರಮದಲ್ಲಿ ಭಾಗಿಯಾದರು.
ಚಿಕ್ಕಮಕ್ಕಳು ಕೈಯಲ್ಲಿ ಪಿಚಕಾರಿ ಹಿಡಿದು ರಂಗಿನಾಟದಲ್ಲಿ ತೊಡಗಿದರು. ಅಕ್ಕ ಪಕ್ಕದ ಮನೆಯವರಿಗೆ ಕುಟುಂಬದ ಸದಸ್ಯರಿಗೆ ಪರಸ್ಪರ ಬಣ್ಣ ಹಚ್ಚುವ ಮೂಲಕ ಸಂಭ್ರಮಿಸಿದರು.
ಪಟ್ಟಣದ ಬಸವ ಸಮಿತಿಯಿಂದ ನಡೆದ ಮೆರವಣೆಗೆ ಬಸವರಾಜೇಂದ್ರ ದೇವಸ್ಥಾನದಿಂದ ಬಸವೇಶ್ವರ, ಅಂಬೇಡಕರ, ಮಹಾವೀರ ವೃತ್ತದ ಮೂಲಕ ನಗರದ ಪ್ರಮುಖ ಬೀದಿಗಳಲ್ಲಿ ಹಾಯ್ದು ಶಾಂತೇಶ್ವರ ದೇವಸ್ಥಾನ ತಲುಪಿ ಅಲ್ಲಿಂದ ಪೋಸ್ಟ ಆಫೀಸು ಹತ್ತಿರ ಕೊನೆಯಾಯಿತು.
ರಂಗಿನಾಟದಲ್ಲಿ ಶಾಂತೇಶ್ವರ ದೇವಸ್ಥಾನ ಸಮಿತಿ ಅಧ್ಯಕ್ಷ ಕಾಸುಗೌಡ ಬಿರಾದಾರ, ಪುರಸಭೆ ಸದಸ್ಯ ಅನೀಲಗೌಡ ಬಿರಾದಾರ, ದೇವೆಂದ್ರ ಕುಂಬಾರ, ಶೀಲವಂತ ಉಮರಾಣಿ, ಅಕ್ಷಯ ಪವಾರ,ರಾಮಸಿಂಗ ಕನ್ನೊಳ್ಳಿ, ಸೋಮು ದೇವರ, ಸೋಮು ನಿಂಬರಗಿಮಠ, ಮಲ್ಲು ವಾಲಿಕಾರ,ಸಂಜಯ ಪವಾರ, ಡಾ|| ಕೋಳಿ, ಸಿದರಾಯ ಮೇತ್ರಿ,ಅಪ್ಪು ಪವಾರ,ರಾಚು ಬಡಿಗೇರ, ಪ್ರತಾಪ ಹಲವಾಯಿ ಮತ್ತಿತರಿದ್ದರು.