ಇಂಡಿಯಾ ಬುಕ್ ಆಫ್ ರೆಕಾರ್ಡ್ ಸಾಧನೆಗೈದ ಪುಟಾಣಿ ಅದ್ವೈತ್

ಮಂಗಳೂರು, ನ.೯ ಎಕ್ಸಲೆಂಟ್ ಮೆಮೊರಿ ಕಿಡ್, ಇಂಡಿಯಾ ಬುಕ್ ಆಫ್ ರೆಕಾರ್ಡ್‌ನಲ್ಲಿ ಭಾಗವಹಿಸಿ ಇಂಡಿಯಾ ಬುಕ್ ಆಫ್ ರೆಕಾರ್ಡ್ ಸಾಧನೆ ಮಾಡಿದ ಕೀರ್ತಿ ಪುಟಾಣಿ ಅದ್ವೈತ್ ಪಿ.ಎನ್.ಗೆ ಸಲ್ಲುತ್ತದೆ. ಈತ ಎಣ್ಮೂರು ಗ್ರಾಮದ ಹೇಮಳ ಜತ್ತಪ್ಪ ಗೌಡ ಅವರ ಪುತ್ರಿ ವಿಪ್ರಿಯ ಮತ್ತು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಯೋಜನಾಧಿಕಾರಿ ಚಾರ್ವಾಕದ ಪೊದ್ದೊಟ್ಟು ಬೈಲು ನಾಗೇಶ್ ಅವರ ಪುತ್ರ.ಮೂರು ವರ್ಷ ಎಂಟು ತಿಂಗಳ ಅದ್ವೈತ್ ೧೫ ಸಂಸ್ಕೃತ ಶ್ಲೋಕ, ೨೯ ರಾಜ್ಯದ ಹೆಸರು, ೧೪ ಪ್ರಧಾನ ಮಂತ್ರಿಗಳ ಹೆಸರು, ೭೦ ವಾಹನಗಳ ನೋಂದಾಣಿ ಸಂಖ್ಯೆ, ಸಾಮಾನ್ಯ ಜ್ಞಾನದ ೧೦೦ ಪ್ರಶ್ನೆಗಳಿಗೆ ಸರಿ ಉತ್ತರ, ದೇಹದ ಭಾಗಗಳು, ಪ್ರಾಣಿಗಳು, ತರಕಾರಿಗಳು, ಹಣ್ಣುಗಳು, ಪಕ್ಷಿಗಳು, ವಾರದ ಏಳು ದಿನಗಳು, ತಿಂಗಳುಗಳು, ದಿಕ್ಕುಗಳು, ಗ್ರಹಗಳು, ಮಾಸಗಳು, ಅಂಕೆಗಳು, ಕನ್ನಡ -ಇಂಗ್ಲೀಷ್ ಬಾಲಗೀತೆಗಳು, ಕನ್ನಡ ಅಕ್ಷರ, ಇಂಗ್ಲೀಷ್ ಅಕ್ಷರ, ಮುಂತಾದುವುಗಳನ್ನು ನಿರರ್ಗಳವಾಗಿ ಹೇಳುವ ಮೂಲಕ ಇಂಡಿಯಾ ಬುಕ್ ಆಫ್ ರೆಕಾರ್ಡ್ ಮಾಡಿದ್ದಾನೆ.