ಇಂಡಿಯಾ ಬುಕ್ ಆಫ್ ರೆಕಾಡ್ರ್ಸ್‍ನಲ್ಲಿ ದಾಖಲುಕಾಲು ಬೆರಳುಗಳ ಮೇಲೆ ನಡಿಗೆ: ಅನನ್ಯಾ ಸಾಧನೆ

????????????????????????????????????

ಬೀದರ್: ಜು.25:ನಗರದ ಆದರ್ಶ ಕಾಲೊನಿಯ ಮೂರು ವರ್ಷದ ಬಾಲಕಿ ಅನನ್ಯಾ ಬಿರಾದಾರ ಕಾಲು ಬೆರಳುಗಳ ಮೇಲೆ 13 ಸೆಕೆಂಡ್‍ಗಳಲ್ಲೇ 7.62 ಮೀಟರ್ ದೂರ ನಡೆದು ಸಾಧನೆ ಮಾಡಿದ್ದಾಳೆ.

ಇಂಡಿಯಾ ಬುಕ್ ಆಫ್ ರೆಕಾಡ್ರ್ಸ್ ಬಾಲಕಿ ಸಾಧನೆ ದಾಖಲಿಸಿಕೊಂಡು, ಪ್ರಶಂಸಾ ಪತ್ರ ನೀಡಿ, ಪ್ರೋತ್ಸಾಹಿಸಿದೆ. ಒಂದೂವರೆ ವರ್ಷದವಳು ಆಗಿದ್ದಾಗಿನಿಂದಲೇ ಅನನ್ಯಾ ಕಾಲು ಬೆರಳುಗಳ ಮೇಲೆ ನಡೆಯುವುದನ್ನು ರೂಢಿಸಿಕೊಂಡಿದ್ದಾಳೆ.

ಮಗಳ ಸಾಧನೆ ಇಂಡಿಯಾ ಬುಕ್ ಆಫ್ ರೆಕಾಡ್ರ್ಸ್‍ನಲ್ಲಿ ದಾಖಲಾಗಿದ್ದಕ್ಕೆ ಸಂತಸ ವ್ಯಕ್ತಪಡಿಸಿರುವ ಪಾಲಕರು, ಅನನ್ಯಾ ಕಾಲು ಬೆರಳುಗಳ ಮೇಲಿನ ವಿಶಿಷ್ಟ ನಡಿಗೆಯ ಛಾಯಾಚಿತ್ರ ಹಾಗೂ ವಿಡಿಯೊ ಗಿನ್ನಿಸ್ ವಲ್ರ್ಡ್ ರೆಕಾಡ್ರ್ಸ್‍ಗೂ ಕಳುಹಿಸಿಕೊಡಲಾಗಿದೆ. ಅದರಲ್ಲೂ ದಾಖಲಾಗುವ ನಿರೀಕ್ಷೆ ಇದೆ ಎಂದು ಹೇಳಿದ್ದಾರೆ.

ಅನನ್ಯಾ ರೋಟರಿ ಕ್ಲಬ್ ಆಫ್ ಬೀದರ್ ನ್ಯೂ ಸೆಂಚುರಿಯ ನಿಕಟಪೂರ್ವ ಅಧ್ಯಕ್ಷ ಡಾ. ನಿತೇಶಕುಮಾರ ಬಿರಾದಾರ ಹಾಗೂ ಪ್ರಣಿತಾ ದಂಪತಿಯ ಪುತ್ರಿಯಾಗಿದ್ದಾಳೆ.