ಇಂಡಿಯಾ ಕಿಡ್ಸ್ ಫ್ಯಾಷನ್ ಶೋ ಫಿನಾಲೆಗೆ ವಿಜಯಪುರದ ವಿಶ್ವ ದಾಖಲೆಯ ಸಾಧಕ ರೇವಣ್ಣ ಆಯ್ಕೆ

ವಿಜಯಪುರ :ನ.4:ಇಂಡಿಯಾ ಕಿಡ್ಸ್ ಫ್ಯಾಷನ್ ಶೋ ಫಿನಾಲೆಗೆ ವಿಜಯಪುರದ ವಿಶ್ವ ದಾಖಲೆಯ ಸಾಧಕ ರೇವಣ್ಣ ಡೊಣಗಿ ಆಯ್ಕೆಯಾಗಿ ವಿಜಯಪುರದ ಕೀರ್ತಿ ಹೆಚ್ಚಿಸಿದ್ದಾರೆ.
ಬೆಂಗಳೂರಿನ ನೆಕ್ಸಸ್ ಶಾಂತಿನಿಕೇತನದಲ್ಲಿ ಜರುಗಿದ ಆಡಿಷನ್ ನಲ್ಲಿ ಮಿಂಚಿದ ರೇವಣ್ಣ ಬಹುಮುಖ ಪ್ರತಿಭಾನ್ವಿತ.ನವೆಂಬರ್ 12 ಮತ್ತು 13 ರಂದು ಬೆಂಗಳೂರಿನ ಶೇಷಾದ್ರಿಪುರಂ ಪ್ರತಿಷ್ಟಿತ ಲಲಿತ್ ಫೈವ್ ಸ್ಟಾರ್ ಹೋಟೆಲ್ ನ ಫಂಕ್ಷನ್ ಹಾಲ್ ನ ವೇದಿಕೆಯಲ್ಲಿ ಜರುಗುವ ಇಂಡಿಯಾ ಕಿಡ್ಸ್ ಫ್ಯಾಷನ್ ಶೋ ಫಿನಾಲೆಯಲ್ಲಿ ರೇವಣ್ಣ ಭಾಗವಹಿಸಲಿದ್ದಾರೆ. ಪ್ರತಿಷ್ಠಿತ ಸೆಲೆಬ್ರಿಟಿ ಗಳ ಜೊತೆ ನಡೆಯುವ ಈ ಸ್ಪರ್ಧೆಯಲ್ಲಿ ಯಶಸ್ಸು ದೊರೆಯಲಿ ಎಂದು ಎಕ್ಸಲೆಂಟ್ ಶಾಲೆಯ ಅಧ್ಯಕ್ಷ ಶಿವಾನಂದ ಕೆಲೂರ್, ವೇದ ಶಾಲೆಯ ಉಪಾಧ್ಯಕ್ಷ ದಯಾನಂದ ಕೆಲೂರ್, ನಿರ್ದೇಶಕಿಯರಾದ ಜ್ಯೋತಿ ದೇಸಾಯಿ, ಎಕ್ಸಲೆಂಟ್ ಶಾಲೆಯ ಆಡಳಿತಧಿಕಾರಿ ಅನಿಲಕುಮಾರ ಅಂಕದ, ಮುಖ್ಯ ಗುರು ಎಸ್ ಬಿ ಹೆಗಳಾಡಿ, ವೇದ ಮುಖ್ಯ ಗುರುಮಾತೆ ರಶ್ಮಿ ಕವಟಗಿಮಠ, ಶಿಕ್ಷಕ ಶಿಕ್ಷಕಿಯರು, ಸಿಬ್ಬಂದಿ ವರ್ಗ ಮತ್ತಿತರು ಅಭಿನಂದಿಸಿದ್ದಾರೆ