ಇಂಡಿಯಲ್ಲಿ ಲಾಕಡೌನದ 3ನೇ ದಿನ-20 ಬೈಕಗಳು ಸೀಜ

ಇಂಡಿ:ಎ.30: ಕೋವಿಡ-19 2ನೇ ಅಲೆ ಹೆಚ್ಚಾಗುತ್ತಿರುವುದರಿಂದ ಸರಕಾರದ ಆದೇಶದಂತೆ ರಾಜ್ಯದಲ್ಲಿ ಕೊರೊನಾ ಸುಂಕು ತಡೆಹೀಡಿಯಲು ರಾಜ್ಯದ್ಯಾಂತ ಲಾಕಡೌನ್ ಹೇರಲಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಇಂಡಿನಗರದಲ್ಲಿ ಬೈಕ ಸವಾರರು ಅಡ್ಡಾ-ದಿಡ್ಡಿ ಓಡಾಡುವುದನ್ನು ಕಂಡು ಡಿ,ವೈ,ಎಸ್,ಪಿ, ಶ್ರೀಧರ ದೊಡ್ಡಿಯವರು ಕಂದಾಯ ಉಪ ವಿಭಗಾಧಿಕಾರಿ ರಾಹುಲ್ ಸಿಂಧೆ ಅವರ ಸಮುಖದಲ್ಲಿ ಕೇಲವೆ ನಿಮಿಷದಲಿ ಮಹಾವೀರ ವೃತ್ತದಲ್ಲಿ ಸುಮಾರು 20 ಬೈಕ್ ಗಳನ್ನು ಹಿಡಿದು ಅವುಗಳನ್ನು ಪೊಲೀಸ ಠಾಣೆಗೆ ಖಳುಹಿಸಿದರು. ಅವುಗಳನ್ನು 24ಘಂಟೆಗಳ ಕಾಲ ಠಾಣೆಯಲ್ಲಿ ಇಟ್ಟು 500ರೂ ದಂಡಕಟ್ಟಿ ಬಿಡಲಾಗುವುದು ಎಂದು ಹೇಳಿದರು. ಇದು ಕೇವಲ ಶಾಂಪಲ್ ಮಾತ್ರ ಮುಂದಿನ ದಿನದಲ್ಲಿ ಕಠೀಣತೆಯು ಅನುಭವಿದಬೇಕಾಗುತ್ತದೆ ಎಂದು ಎಚ್ಚರಿಸಿದರು. ಕೋವಿಡ-2ನೇ ಅಲೆಯು ತುಂಬಾ ಭಯಂಕರವಾಗಿದೆ. ಅನಗತ್ಯವಾಗಿ ಮನೆಯಿಂದ ಆಚೆ ಯಾರುಬರಬಾರದು ನಿಗದಿತ ಸಮಯದಲ್ಲಿ ಅಗತ್ಯ ವಸ್ತುಗಳನ್ನು ಪಡೆದುಕೋಳ್ಳಬೇಕು. ಇಂಡಿಯ ನಾಗರಿಕರು ಪೊಲೀಸ ಇಲಾಖೆಯೊಂದಿ ಸಹಕಾರ ನೀಡಬೇಕು ಎಂದು ವಿನಂತಿಸಿದರು. ಮುಂಜಾಗ್ರತ ಕ್ರಮ ಕಡ್ಡಾಯವಾಗಿ ಮಾಸ್ಕ ಧರಿಸಬೇಕು, ಸನಿಟೈಜರ ಉಪಯೋಗಿಸಬೇಕು, ಸಾಮಾಜೀಕ ಅಂತರ ಕಾಯ್ದುಕೋಳ್ಳಬೇಕು. ಕಾನೂನು ಪಾಲನೇಮಾಡುವುದು ನಾಗರಿಕರ ಕಡ್ಡಾಯ-ಕಡ್ಡಾಯ ಎಂದು ಡಿ,ವೈ,ಎಸ್,ಪಿ, ಶ್ರೀಧರ ದೊಡ್ಡಿ ಅವರು ತಮ್ಮ ಕಛೇರಿಯಲ್ಲಿ ಪತ್ರಕರ್ತರಿಗೆ ಹೇಳಿದರು.