
ಇಂಡಿ:ಆ.10: ಇಂಡಿ ಶಾಸಕ ಯಶವಂತರಾಯಗೌಡ ಪಾಟೀಲ ಇವರು ಸಣ್ಣ ಕೈಗಾರಿಕಾ ಸಚಿವರಾದ ಶರಣಬಸಪ್ಪ ದರ್ಶನಾಪೂರ ಇವರ ಕಚೇರಿಯಲ್ಲಿ ಇಂಡಿ ಕೈಗಾರಿಕಾ ವಸಾಹುತು ಸ್ಥಾಪಿಸುವ ಕುರಿತು ಮಾನ್ಯ ಸಚಿವರ ಕಚೇರಿಯಲ್ಲಿ ಅಧಿಕಾರಿಗಳ ಸಭೆ ಜರುಗಿತು.
ಈ ಸಂಧರ್ಬದಲ್ಲಿ ಶಾಸಕ ಯಶವಂತರಾಯಗೌಡ ಪಾಟೀಲ ಇಂಡಿ ಮತಕ್ಷೇತ್ರದ ಸ್ಥಳೀಯ ವಾಸ್ತವಿಕ ಪರಸ್ಥಿತಿಗಳು ,ಇಂಡಿ ತಾಲೂಕು ಕರ್ನಾಟಕ ಮಹಾರಾಷ್ಟ್ರ ಗಡಿ ಭಾಗದಲ್ಲಿದ್ದು ನಂಜುಂಡಪ್ಪ ವರದಿಯ ಪ್ರಕಾರ ಅತ್ಯಂತ ಹಿಂದುಳಿದ ಭಾಗ ಶೈಕ್ಷಣಿಕವಾಗಿ ಮತ್ತು ಆರ್ಥಿಕವಾಗಿ ಹಿಂದುಳಿದಿದೆ. ಬ್ರೀಟಿಷರ ಕಾಲದಿಂದಲೂ ಬರಗಾಲ ಎಂದು ಘೋಷಣೆಯಾಗಿದೆ ಹೀಗಾಗಿ ಇಂಡಿ ತಾಲೂಕಿನ ಬೂದಿಹಾಳ ಗ್ರಾಮ ರಿ.ಸ.ನಂ 65ರಲ್ಲಿ ಸಣ್ಣ ಕೈಗಾರಿಕೆ ವಸಹಾತು ನಿರ್ಮಿಸುವ ಕುರಿತು ಈಗಾಗಲೇ ಜಮೀನು ಹಸ್ತಾಂತರಿಸಿ ಹದ್ದು ಬಸ್ತು ಗುರ್ತಿಸಿ ಸಂಬಂದಿಸಿ ಇಲಾಖೆ ನಿಡಲಾಗಿದೆ. ಯಾವುದೇ ಕೈಗಾರಿಕೆ ಸ್ಥಾಪನೆಗೆ ತನ್ನದೆಯಾದ ಮೂಲಭೂತ ಸೌಲಭ್ಯಗಳು ಅವಶ್ಯ ಇಂಡಿ ಮತಕ್ಷೇತ್ರದಲ್ಲಿ ಕೈಗಾರಿಕೆ ಬೇಕಾದ ಸೌಲಭ್ಯಗಳಾದ ಇಂಡಿ ವಸಂತ ನಗರದಲ್ಲಿ 100 ಎಕರೆ ಸರಕಾರಿ ಜಮೀನು ಇದೆ. ಇಂಡಿ ತಾಲೂಕಿನ ತಡವಲಗಾ ಗ್ರಾಮದಲ್ಲಿ 300 ಎಕರೆ ಸರಕಾರಿ ಜಮೀನು ಇದೆ. ಇಂಡಿ ತಾಲೂಕಿನ ಹಳಗುಣಕಿ ಗ್ರಾಮದಲ್ಲಿ 125 ಎಕರೆ ಸರಕಾರಿ ಜಮೀನು ಇದ್ದು ಇದರ ಜೊತೆ ಕುಡಿಯುವ ನೀರು .ವಿದ್ಯುತ ಸೌಲಭ್ಯ, ರೈಲು ಸಾರಿಗೆ, ಮತ್ತು ರಾಷ್ಟ್ರೀಯ ಹೆದ್ದಾರಿ ಹೊಂದಿದ್ದು ಕೈಗಾರಿಕೆಗೆ ಅವಶ್ಯಕತೆ ಇರುವ ಔದ್ಯೋಗಿಕ , ತಾಂತ್ರಿಕ ಶಿಕ್ಷಣ ಸಂಸ್ಥೆಗಳು ಹಾಗೂ ನುರಿತ ಅನುಭವಿ ವಿಧ್ಯಾವಂತ ತಾಂತ್ರಿಕ ವಿಧ್ಯಾರ್ಥಿಗಳು ಮತ್ತು ಮಾನವ ಸಂಪನ್ಮೋಲ ಸಾಕಷ್ಟು ಇದ್ದಾರೆ. ಇಂಡಿ ತಾಲೂಕಿನ ರೈತಾಪಿ ವರ್ಗ ತೋಟಗಾರಿಕೆ ಬೆಳೆಗಳಾದ ಲಿಂಬೆ ,ದಾಳಿಂಬೆ ,ದ್ರಾಕ್ಷಿ ಬೆಳೆಯುವದರಲ್ಲಿ ಅಂತರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡು ಅಂತರಾಷ್ಟ್ರೀಯ ಪ್ರಶ್ತೇಸ್ತಿಗಳು ರೈತರ ಮುಡಿಗೇರಿವೆ .
ಈ ಭಾಗದ ರೈತರ ಅನುಕೂಲತೆಗೆ ( ಕೋಲ್ಡ್ ಸ್ಟೋರೇಜ್)ವಿವಿಧ ಗೃಹ ಕೈಗಾರಿಕೆ ಜೊತೆ ಉದ್ಯೋಗ ಮಿತ್ರ ಯೋಜನೆ ಅಡಿ ಸರಕಾರದಿಂದ ಕೈಗಾರಿಕೆ ಇಲಾಖೆ ಸಂಬಂದಿಸಿದ ವಿಧಯೋಜನೆಯಡಿ ಬೃಹತ್ ಗಾತ್ರದ ಬಂಡವಾಳ ಹೂಡಿಕೆದಾರರಿಂದ ಮತ್ತು ಸರಕಾರದಿಂದ ಇಂಡಿ ತಾಲೂಕಿನಲ್ಲಿ ಸರಕಾರಿ ಜಮೀನುಗಳಿದ್ದ ಪ್ರದೇಶದಲ್ಲಿ ಸಣ್ಣ ಕೈಗಾರಿಕೆಗಳನ್ನು ಸ್ಥಾಪಿಸಿ ಯುವಕರಿಗೆ ನಿರುದ್ಯೋಗ ಸಮಸ್ಯ ನಿವಾರಣೆ ಮಾಡಬೇಕು ಎಂದು ಶಾಸಕ ಯಶವಂತರಾಯಗೌಡ ಪಾಟೀಲ ಸಣ್ಣ ಕೈಗಾರಿಕಾ ಸಚಿವ ಶರಣಬಸಪ್ಪಾ ದರ್ಶನಾಪೂರ ಇವರಿಗೆ ಮನವಿ ಮಾಡಿದರು, ಶಾಸಕರ ಸಂಪೂರ್ಣ ಮಾಹಿತಿಗೆ ಸಚಿವರು ಸಕಾರಾತ್ಮಕ ಸ್ಪಂದನೆ ನೀಡಿ ಕೈಗಾರಿಕಾ ಸ್ಥಾಪನೆಗೆ ಸರಕಾರ ಮತ್ತು ಖಾಸಗಿ ಸಹಭಾಗಿತ್ವದಲ್ಲಿ ಸ್ಥಾಪಿಸಲು ಪ್ರಮಾಣಿಕ ಪ್ರಯತ್ನ ಮಾಡುವ ಭರವಸೆ ನೀಡಿದರು.