ಇಂಡಿ:ಜು.22:ನೂತನವಾಗಿ ಅಧಿಕಾರ ಸ್ವೀಕರಿಸಿದ ಎಸಿ ಅಬೀದ್ ಗದ್ಯಾಳ ಶುಕ್ರವಾರ ಬೆಳಿಗ್ಗೆ 6 ಗಂಟೆಯಿಂದ ಪಟ್ಟಣದ ವಿವಿಧ ವಾರ್ಡು,ಇಂಡಿರಾ ಕ್ಯಾಂಟೀನು ಮತ್ತು ಘನ ತ್ಯಾಜ್ಯ ವಿಲೇವಾರಿ ಘಟಕ ವಿಕ್ಷಿಸಿದರು.
ಬೆಳೆಗ್ಗೆ ವಾರ್ಡ ನಂ 1 ಅಂಬೇಡ್ಕರ ನಗರಕ್ಕೆ ಭೇಟಿ ನೀಡಿ ಅಲ್ಲಿ ಸ್ವಚ್ಛತೆಯ ಕುರಿತು ಪರಿಶೀಲಿಸಿದರು.
ನಂತರ ಹುಸೇನಬಾಷಾ ದರ್ಗಾ ಹತ್ತಿರ ಬಂದು ಅಲ್ಲಿ ಮೊಹರಮ್ ಕುರಿತು ಕುಡಿಯುವ ನೀರಿನ ವ್ಯವಸ್ಥೆ, ಸ್ವಚ್ಛತೆ ವೀಕ್ಷಿಸಿದರು. ದರ್ಗಾ ಸಮಿತಿಯ ಆರ್.ಕೆ.ಮಕಾನದಾರ,ಮಹಿಬೂಬ ಮೌಲಾಸಾಬ ಮಕಾನದಾರ,ತುಕಾರಾಮ ವಾಲಿಕಾರ,ಅದಿಲ್ ಮಕಾನದಾರ,ಕಮರಲಿ ಮಕಾನದಾರ,ಸಿದ್ದು ಐರೋಡಗಿ ಇವರ ಜೊತೆಗೆ ಮೊಹರಮ ಹಬ್ಬದ ಕುರಿತು ಚರ್ಚಿಸಿದರು.
ನಂತರ ಬಸ್ ನಿಲ್ದಾಣ ಹತ್ತಿರದ ಇಂದಿರಾ ಕ್ಯಾಂಟೀನ್ ಭೇಟಿ ನೀಡಿ ಅಲ್ಲಿ ವಿದ್ಯಾರ್ಥಿಗಳೊಂದಿಗೆ ಉಪಹಾರ ಸೇವಿಸಿದರು. ಗುಣಮಟ್ಟ ಕುರಿತು ಕ್ಯಾಂಟಿನ ಗುತ್ತಿಗೆದಾರರ ಜೊತೆ ಚರ್ಚಿಸಿದರು. ಮತ್ತು ವಿದ್ಯಾರ್ಥಿಗಳ ಮತ್ತು ಸಾರ್ವಜನಿಕರ ಜೊತೆ ಇಂದಿರಾ ಕ್ಯಾಂಟೀನ್ ದಲ್ಲಿ ನೀಡುವ ಆಹಾರದ ಗುಣಮಟ್ಟ ಮತ್ತು ಸ್ವಚ್ಛತೆಯ ಕುರಿತು ಚರ್ಚಿಸಿದರು.
ಪುರಸಭೆಯ ಘನ ತ್ಯಾಜ್ಯ ಘಟಕಕ್ಕೆ ಭೇಟಿ ನೀಡಿ ಪರಿಕ್ಷೀಸಿದರು.
ಪುರಸಭೆಯ ಸೋಮು ನಾಯಕ, ಚಂದು ಕಾಲೆಭಾಗ ಮತ್ತಿತರಿದ್ದರು.