ಇಂಡಿಯಲ್ಲಿ ಇಂದಿನಿಂದ ಚೌಡೇಶ್ವರಿ ಜಾತ್ರೆ

ಇಂಡಿ:ಮೇ.18: ಪಟ್ಟಣದಲ್ಲಿ ಚೌಡೇಶ್ವರಿ ಜಾತ್ರೆ ಮೇ. 18 ರಿಂದ 20 ರ ವರೆಗೆ ಜರುಗುವದು.

ಗುರುವಾರ ಬೆಳಗ್ಗೆ ಮಹಾಮಂಗಳಾರತಿ ಹಾಗೂ ರಾತ್ರಿ 12 ಗಂಟೆಗೆ ಬಾಳ ಬಟಲ್ ಊರು ಪ್ರದಕ್ಷಣೆ ಹಾಕುವದು.

ಶುಕ್ರವಾರ ಬಾದಮಿ ಅಮವಾಸ್ಯೆಯಂದು ಮಜ್ಜಿಗೆ ಮಾಡುವದು, ಅಗಿ ಹಾಯುವದು ಮತ್ತು ಭಕ್ತರ ಮನೆಯಲ್ಲಿ ಉಡಿ ತುಂಬುವ ಕಾರ್ಯಕ್ರಮ ನೇರವೇರುವದು. ಶನಿವಾರ ಶ್ರೀ ತಾಯಿ ಚೌಡೇಶ್ವರಿ ಯಿಂದ ವಿವಿಧ ಓಣಿಯಲ್ಲಿ ಕೋಲಾಟ ಕಾರ್ಯಕ್ರಮ ಜರಗುವದು ಹಾಗೂ ರಾತ್ರಿ 9 ಗಂಟೆಗೆ ರಸಮಂಜರಿ ಕಾರ್ಯಕ್ರಮ ಜರುಗುವದು ಎಂದು ಸತೀಶ ಕುಂಬಾರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.