
(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಸೆ.03: ನಗರದ `ಪೋಲಾ ಪ್ಯಾರಡೈಜ್’ ಹೋಟೆಲ್‍ನಲ್ಲಿ ಪ್ರಖ್ಯಾತ `ಫ್ಯಾಷನ್ ಸ್ಟೋರಿ’ ಸಂಸ್ಥೆಯು ಏರ್ಪಡಿಸಿರುವ ಭಾರತೀಯ ಜೀವನ ಶೈಲಿ ಮತ್ತು ಆಭರಣಗಳ ಪ್ರದರ್ಶನ ಮತ್ತು ಮಾರಾಟ ಮೇಳಕ್ಕೆ ಮೂರನೇಯ ದಿನವಾದ ಇಂದೂ ಸಹ ಉತ್ತಮ ಸ್ಪಂದನೆ ಕಂಡು ಬಂದಿದೆ. ನಾಗರೀಕರು, ಮಹಿಳೆಯರು ಭೇಟಿ ನೀಡಿ, ಭಾರತದ ಪ್ರಖ್ಯಾತ 30 ಸಂಸ್ಥೆಗಳು ಸಾಥ್ ನೀಡಿರುವ, ವಿವಿಧ ಉತ್ಪನ್ನಗಳ ಪ್ರದರ್ಶನವನ್ನು ವೀಕ್ಷಿಸಿ, ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಈ ಎಗ್ಜಿಬಿಷನ್‍ಗೆ ಕನ್ನಡಚಿತ್ರರಂಗದ ಉದಯೋನ್ಮುಖ ತಾರೆ ಯಶಸ್ವಿನಿ ರವೀಂದ್ರ ಅವರು ಭೇಟಿ ನೀಡಿ ವಿವಿಧ ಮಳಿಗೆಗಳನ್ನು ವೀಕ್ಷಿಸಿದರಲ್ಲದೇ, ಮಾರಾಟ ಮೇಳವನ್ನು ಅಚ್ಚುಕಟ್ಟಾಗಿ ಹಮ್ಮಿಕೊಂಡಿರುವುದಕ್ಕೆ ಪ್ರಶಂಸೆ ವ್ಯಕ್ತಪಡಿಸಿದರು.
ಇಂದಿನ ಜೀವನಶೈಲಿ ಮತ್ತು ಫ್ಯಾಷನ್‍ಗೆ ಅನುಗುಣವಾಗಿ ಹೊಸತನದ ವಿನ್ಯಾಸದ ಇಂಡಿಯನ್ ಲೈಫ್‍ಸ್ಟೈಲ್ ಎಗ್ಜಿಬಿಷನ್‍ಗೆ ಸಾರ್ವಜನಿಕರಿಂದ ಉತ್ತಮ ಸ್ಪಂದನೆ ಅದ್ಭುತ ಎನ್ನಬಹುದಾದ ವಿವಿಧ
ಆಭರಣಗಳು, ಸೀರೆಗಳು, ನೂತನ ವಿನ್ಯಾಸದ ರೇಷ್ಮೆ ಸೀರೆಗಳು, ವಿವಾಹ ವಸ್ತ್ರಗಳು, ಕುರ್ತಾಗಳು, ಟಾಪ್ಸ್, ಫ್ಯಾಷನ್ ಜ್ಯೂವೆಲ್ಲರಿ, ಕರಕುಶಲದ
ಹ್ಯಾಂಡಿಕ್ರಾಪ್ಟ್ ಜ್ಯೂವೆಲ್ಲರಿ, ವಿವಿಧ ಬಗೆಯ ಜವಳಿ ಉತ್ಪನ್ನಗಳು, ಬಗೆಬಗೆಯ ಫರ್ನಿಚರ್‍ಗಳು ವಿಶೇಷವಾಗಿ ಸಾರ್ವಜನಿಕರನ್ನು ಅದರಲ್ಲಿಯೂ ಮಹಿಳೆಯರನ್ನು ಆಕರ್ಷಿಸುತ್ತಿವೆ ಎಂದು ತಿಳಿಸಲಾಗಿದೆ.
ದೇಶದ 30ಕ್ಕೂ ಹೆಚ್ಚು ಟಾಪ್ ಡಿಜೈನ್‍ರಗಳ ವಿವಿಧ ಬ್ರಾಂಡ್‍ಗಳು, ಇಂದಿನ ಯುವ ಜನತೆ, ಮಹಿಳೆಯರು ಇಷ್ಟಪಡುವ ವಿವಿಧ `ಫ್ಯಾಷನ್’ ವಸ್ತ್ರಗಳು, ಭಾರತೀಯ ಸಂಪ್ರದಾಯದಂತೆ ರೂಪಿಸಲಾಗಿರುವ ವಸ್ತ್ರಗಳು ಹಾಗೂ ಹೋಂ-ಡೆಕಾರ್‍ಗಳು, ಫರ್ನಿಚರ್‍ಗಳು ಜನರ ಮನ ಸೆಳೆಯುತ್ತಿವೆ ಎಂದು ಫ್ಯಾಷನ್ ಸ್ಟೋರಿಯ ರವಿಕುಮಾರ್ ತಿಳಿಸಿದ್ದಾರೆ.
ಬಗೆ ಬಗೆಯ ವಸ್ತ್ರಗಳು, ಆಭರಣಗಳ ಜೊತೆ-ಜೊತೆಯಲ್ಲಿ ಗೃಹೋಪಯೋಗಿ, ಆಲಂಕಾರಿಕ ವಸ್ತುಗಳು, ಹ್ಯಾಂಡಿಕ್ರಾಫ್ಟ್ ಬ್ಯಾಗ್‍ಗಳು, ಮತ್ತಿತರೆ ಬಹು ಉಪಯೋಗಿ ವಸ್ತುಗಳು ಒಂದೇ ಸೂರಿನಡಿ ಇಲ್ಲಿ ಲಭ್ಯವಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಬಂದು ಪ್ರದರ್ಶನ ವೀಕ್ಷಿಸಿ, ಖರೀದಿಯನ್ನು ಮಾಡುತ್ತಿದ್ದಾರೆ ಎಂದು ಫ್ಯಾಷನ್ ಸ್ಟೋರಿಯ ರವಿಕುಮಾರ್ ತಿಳಿಸಿದ್ದಾರೆ.