ಇಂಡಿಯನ್ ರಾಯಲ್ ಅಕಾಡೆಮಿ ಪ್ರಶಸ್ತಿ ಪುರಸ್ಕೃತರಾದ ಲಕ್ಷ್ಮಿ ಪೋದ್ದಾರ

ಕಲಬುರಗಿ:ಮಾ.27:ಕು.ಲಕ್ಷ್ಮಿ. ಪೋದ್ದಾರ ಅವರಿಗೆ ಎಂ.ಎಫ್. ಹುಸೇನ್ ಶತಮಾನೋತ್ಸವ ರಾಷ್ಟ್ರೀಯ ಪುರಸ್ಕಾರ, ಇಂಡಿಯನ್ ರಾಯಲ್ ಅಕಾಡೆಮಿ ಪ್ರಶಸ್ತಿ ಲಭಿಸಿದಕ್ಕೆ ಅವರ ಸ್ವಹ ಗ್ರಹದಲ್ಲಿ ಕಲಬುರ್ಗಿ ನಗರ ಜಿಲ್ಲೆ ಬಿಜೆಪಿ ಓಬಿಸಿ ಮೋರ್ಚಾ ಅಧ್ಯಕ್ಷರಾದ ಶ್ರೀ ಅರವಿಂದ್ ಎಮ್ ಪೋದ್ದಾರ ಬೆಣ್ಣಿಶಿರೂರ ಅವರು ಸತ್ಕರಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು ಕುಂಚದಲ್ಲಿ ಅರಳಿದ ಚಿತ್ರ ದ್ರಶ್ಯ ಕಾವ್ಯ ಕಲೆಯ ಸಾಧನೆ ಮಾಡಿದ ಜಿಲ್ಲೆಯ ಮೊದಲ ಯುವ ಕಲಾವಿದೆಯಾಗಿ ಹೊರಹೊಮ್ಮಿದ್ದಾಳೆ ಎಂದರು.

ಜಿಲ್ಲೆಗೆ ಅಷ್ಟೇ ಅಲ್ಲ ಇಡಿ ನಾಡಿಗೇ ಕೀರ್ತಿ ತಂದ ಶ್ರೇಯಸ್ಸು ಆಕೆಗೆ ಸಂದಿದೆ ವಿಶ್ವಕರ್ಮ ಸಮಾಜದಲ್ಲಿ ರಕ್ತಗತವಾಗಿ ಬಂದದ್ದು ಅದರಲ್ಲೂ ಡಾ. S ಒ ಪಂಡಿತ್ ಅವರ ಸಂಬಂಧಿಕರು ಹಾಗೂ ಲಕ್ಷ್ಮಿ ಪೋದ್ದಾರ ಅವರ ಕಾಕಾ ರಾಜಶೇಖರ ಪೋದ್ದಾರ ಅವರು ಕಲಬುರ್ಗಿ ಕೇಂದ್ರ ಯ ವಿದ್ಯಾಲಯ ದಲ್ಲಿ ಚಿತ್ರಕಲಾ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ ಅವರ ಪ್ರೇರಣೆಯಿಂದ
ಲಕ್ಷ್ಮಿ ಪೋದ್ದಾರ ಅವರಿಗೆ ಕರ್ನಾಟಕ ಲಲಿತಕಲಾ ಅಕಾಡಮಿಯ ಶಿಷ್ಯ ವೇತನ ಸೇರಿದಂತೆ ಅನೇಕ ಪ್ರಶಸ್ತಿ, ಪುರಸ್ಕಾರ ಪಡೆದಿದ್ದಾರೆ. ಜಿಲ್ಲೆ, ರಾಜ್ಯ ಹಾಗೂ ರಾಷ್ಟ್ರ ಮಟ್ಟದಲ್ಲಿ ತಮ್ಮ ಕಲಾ ಪ್ರತಿಭೆ ಮೆರೆದಿದ್ದಾರೆ. ಇನ್ನೂ ವಿಶ್ವ ಮಟ್ಟದಲ್ಲಿ ಪ್ರತಿಭೆ ಹೊರಹೊಮ್ಮಲಿ ಎಂದು ಹಾರೈಸಿದರು.
ಈ ಸಂದರ್ಭದಲ್ಲಿ ದಶರಥ ಪೋದ್ದಾರ , ರಾಕೇಶ್, ಇತರರು ಇದ್ದರು.