ಇಂಡಿಯನ್ ಬುಕ್ ಆಫ್ ರೆಕಾರ್ಡ್‌ಗೆ ಸೇರಿದ ಹೃಷಿಕಾ ಕುರ್ಡಿ ಹೆಸರು

ರಾಯಚೂರು.ಮಾ.೨೭- ಮಾನ್ವಿ ತಾಲೂಕಿನ ಕುರ್ಡಿ ಗ್ರಾಮದ ಹೃಷಿಕಾ ಹಿನ್ನೆಲೆಯಲ್ಲಿ ಅತಿ ಸಣ್ಣ ವಯಸ್ಸಿನಲ್ಲಿ ೨೦೨೧ ರ ಇಂಡಿಯನ್ ಬುಕ್ ಆಫ್ ರೆಕಾರ್ಡ್‌ನಲ್ಲಿ ಹೆಸರು ಸೇರ್ಪಡೆಗೊಂಡಿದೆ.
ಈ ವಿಷಯವನ್ನು ಫೆಬ್ರವರಿ ೨೬ ರಂದು ಖಚಿತಪಡಿಸಲಾಗಿದೆ. ಎರಡು ವರ್ಷ ನಾಲ್ಕು ತಿಂಗಳ ಹೃಷಿಕಾ ಜಗತ್ತಿನ ಏಳನೇ ಅದ್ಭುತವೆಂದೇ ಈ ಬುಕ್‌ನಲ್ಲಿ ಗುರುತಿಸಿಕೊಂಡಿದ್ದಾರೆ. ೩೧ ಪ್ರಾಣಿ, ೨೧ ಪಕ್ಷಿ, ೭ ಹೂವು, ೨೧ ತರಕಾರಿ, ೧೨ ನಾಯಕರ, ೧೧ ಬಣ್ಣಗಳ, ೨೧ ವಾಹನಗಳ, ೫೯ ವಸ್ತುಗಳು, ೨೫ ಹಣ್ಣು, ೧೫ ರಾಷ್ಟ್ರೀಯ ಲಾಂಛನ, ಸೇರಿದಂತೆ ಇತರೆ ವಿಷಯಗಳನ್ನು ನಿರ್ಗಗಳವಾಗಿ ಹೇಳಬಲ್ಲ ಸಾಮರ್ಥ್ಯವನ್ನು ಗುರುತಿಸಿ, ಹೃಷಿಕಾ ಕುರ್ಡಿ ಅವರ ಹೆಸರನ್ನು ಇಂಡಿಯನ್ ಬುಕ್ ಆಫ್ ರೆಕಾರ್ಡ್‌ನಲ್ಲಿ ಸೇರಿಸಲಾಗಿದೆ.
೨೪ ಅಕ್ಟೋಬರ್ ೨೦೧೮ ರಂದು ಈ ಪುಟಾಣಿ ಜನಿಸಿದೆ. ಪಾಲಕರ ಪ್ರೋತ್ಸಾಹದಿಂದ ಈ ಮಗು ಬಾಲ್ಯದಲ್ಲಿಯೇ ಅತ್ಯುತ್ತಮ ಸಾಮರ್ಥ್ಯವನ್ನು ಹೊಂದಿದೆ. ಇಂಡಿಯನ್ ಬುಕ್ ಆಫ್ ರೆಕಾರ್ಡ್‌ಗೆ ಇವರು ದಾಖಲೆಗಳನ್ನು ನೀಡಲಾಗಿತ್ತು.