ಚೆನ್ನೈ,ಮಾ.೨೫-ಕಾರ್ತಿಕಿ ಗೊನ್ಸಾಲ್ವೆಸ್ ನಿರ್ದೇಶನದ ’ದ ಎಲಿಫೆಂಟ್ ವಿಸ್ಪರರ್ಸ್’ ಅತ್ಯುತ್ತಮ ಸಾಕ್ಷ್ಯಚಿತ್ರ ವಿಭಾಗದಲ್ಲಿ ಪ್ರತಿಷ್ಠಿತ ಆಸ್ಕರ್ ಪ್ರಶಸ್ತಿ ಪಡೆದುಕೊಂಡಿದೆ.ಮುಖ್ಯ ಪಾತ್ರಧಾರಿಗಳಾದ ಬೊಮ್ಮನ್ ಮತ್ತು ಬೆಳ್ಳಿಗೆ ಇಂಡಿಗೋ ವಿಮಾನದಲ್ಲಿ ಊಟಿಗೆ ಪ್ರಯಾಣಿಸುತ್ತಿರುವ ವೇಳೆ ವಿಶೇಷ ಸ್ವಾಗತ ನೀಡುವ ಮೂಲಕ ಗೌರವ ನೀಡಲಾಗಿದೆ.
ತಮಿಳುನಾಡಿನ ಸಣ್ಣ ಹಳ್ಳಿಯೊಂದರಿಂದ ಬಂದ ಬೊಮ್ಮನ್, ಬೆಳ್ಳಿ ದಂಪತಿಯನ್ನು ಇಂಡಿಗೋ ಸಿಬ್ಬಂದಿ ಅಭಿನಂದಿಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
ಆಸ್ಕರ್ ಪ್ರಶಸ್ತಿ ವಿಭಾಗದಲ್ಲಿ ಅತ್ಯುತ್ತಮ ಸಾಕ್ಷ್ಯಚಿತ್ರ ಪ್ರಶಸ್ತಿ ’ದ ಎಲಿಫೆಂಟ್ ವಿಸ್ಪರರ್ಸ್’ ಪಡೆದುಕೊಂಡಿದೆ ಮತ್ತು ಈ ಡಾಕ್ಯುಮೆಂಟರಿಯ ಮುಖ್ಯ ಪಾತ್ರದಾರಿಗಳು ನಮ್ಮೊಂದಿಗಿದ್ದಾರೆ. ಅವರಿಗೆ ಚಪ್ಪಾಳೆ ನೀಡಿ” ಎಂದು ಪೈಲೆಟ್ ಹೇಳಿದರು.
ಈ ವೇಳೆ ಪ್ರಯಾಣಿಕರು ಚಪ್ಪಾಳೆ ತಟ್ಟಿ ದಂಪತಿಯನ್ನು ಹುರಿದುಂಬಿಸಿದರು. ಈ ವಿಡಿಯೋ ಅನೇಕ ಹೃದಯಗಳನ್ನು ಗೆದ್ದಿದೆ. ಇಂಡಿಗೋ ಸಿಬ್ಬಂದಿಗಳ ಈ ಕಾರ್ಯಕ್ಕೆ ಎಲ್ಲೆಡೆ ಮೆಚ್ಚುಗೆಗೆ ವ್ಯಕ್ತವಾಗಿದೆ.
“ಇದು ಅತ್ಯುತ್ತಮ ವಿಡಿಯೋಗಳಲ್ಲಿ ಒಂದಾಗಿದೆ. ಬೊಮ್ಮನ್ ಮತ್ತು ಬೆಳ್ಳಿ ಎಲ್ಲಾ ಪ್ರೀತಿಗೂ ಅರ್ಹರು” ಎಂಬುದಾಗಿ ಅನೇಕರು ಕಾಮೆಂಟ್ ಮಾಡಿದ್ದಾರೆ.
‘ದ ಎಲಿಫೆಂಟ್ ವಿಸ್ಪರರ್ಸ್’ ಕಥೆ.. ಆನೆ ಮರಿಯ ಆರೈಕೆಗಾಗಿ ಜೀವನವನ್ನೇ ಮುಡಿಪಾಗಿಟ್ಟ ದಂಪತಿ ಕಥೆ ’ದ ಎಲಿಫೆಂಟ್ ವಿಸ್ಪರರ್ಸ್’ನಲ್ಲಿದೆ. ಆನೆಗಳು ಮತ್ತು ಅವುಗಳ ಪಾಲಕರ ನಡುವಿನ ಅವಿನಾಭಾವ ಸಂಬಂಧವನ್ನು ಮನಸ್ಸಿಗೆ ನಾಟುವಂತೆ ಇದರಲ್ಲಿ ಚಿತ್ರಿಸಲಾಗಿದೆ.
ಭಾವನೆಯ ಜೊತೆಗೆ ಪ್ರಾಣಿಗಳು ಮತ್ತು ಮಾನವನ ನಡುವಿನ ಪ್ರೀತಿಯ ಸೆಳೆತ ಕಣ್ಣಿಗೆ ಕಟ್ಟುವಂತೆ ಸಾಕ್ಷ್ಯಚಿತ್ರದಲ್ಲಿ ಬಿಂಬಿಸಲಾಗಿದೆ. ಒಟ್ಟು ೪೧ ನಿಮಿಷಗಳ ಡಾಕ್ಯುಮೆಂಟರಿ ಇದಾಗಿದ್ದು, ಪ್ರೇಕ್ಷಕರನ್ನು
ಈ ಸಾಕ್ಷ್ಯಚಿತ್ರದ ಚಿತ್ರೀಕರಣಕ್ಕಾಗಿ ನಿರ್ದೇಶಕಿ ಕಾರ್ತಿಕಿ ಗೊನ್ಸಾಲ್ವೆಸ್ ಅವರು ಮುದುಮಲೈ ಹುಲಿ ಸಂರಕ್ಷಿತ ಪ್ರದೇಶದಲ್ಲಿ ೫ ವರ್ಷಗಳ ಕಾಲ ತಂಗಿದ್ದರಂತೆ. ಈ ಕಿರುಚಿತ್ರ ಅನಾಥ ಆನೆ ರಘು ಮತ್ತು ಅದರ ಪಾಲಕರಾದ ಮಾವುತ ದಂಪತಿ ಬೊಮ್ಮನ್ ಮತ್ತು ಬೆಳ್ಳಿ ನಡುವಿನ ಅಮೂಲ್ಯವಾದ ಬಾಂಧವ್ಯವನ್ನು ನಿರೂಪಿಸುತ್ತದೆ. ಇನ್ನು ನೆಟ್‌ಫಿಕ್ಸ್‌ನಲ್ಲಿ ಆಸ್ಕರ್ ಪ್ರಶಸ್ತಿ ವಿಜೇತ ’ದ ಎಲಿಫೆಂಟ್ ವಿಸ್ಪರರ್ಸ್’ ಸಾಕ್ಷ್ಯಚಿತ್ರವನ್ನು ವೀಕ್ಷಿಸಬಹುದಾಗಿದೆ.