ಇಂಡಿಗೋ ವಿಮಾನದಲ್ಲಿ ತಾಂತ್ರಿಕ ದೋಷ

ನವದೆಹಲಿ,ಜು.೧೭-ಶಾರ್ಜಾ-ಹೈದರಾಬಾದ್ ಮಾರ್ಗದ ಇಂಡಿಗೋ ವಿಮಾನದಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡ ಬಳಿಕ ಪಾಕಿಸ್ತಾನದ ಕರಾಚಿ ವಿಮಾನ ನಿಲ್ದಾಣಕ್ಕೆ ಮಾರ್ಗ ಬದಲು ಮಾಡಿದ ಘಟನೆ ನಡೆದಿದೆ.
“ಇಂಡಿಗೋ ವಿಮಾನ ೬ಇ-೧೪೦೬ ನ ಇಂಜಿನ್ ನಲ್ಲಿ ತಾಂತ್ರಿಕ ದೋಷ ಕಂಡು ಬಂದ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ ಶಾರ್ಜಾದಿಂದ ಹೈದರಾಬಾದ್‌ಗೆ ಕರಾಚಿಗೆ ತಿರುಗಿಸಲಾಯಿತು ಎಂದು ಇಂಡಿಗೋ ವಿಮಾನಯಾನ ಸಂಸ್ಥೆ ತಿಳಿಸಿದೆ.
ಕರಾಚಿಯಿಂದ ಪ್ರಯಾಣಿಕರನ್ನು ಕರೆತರಲು ಹೆಚ್ಚುವರಿ ವಿಮಾನವನ್ನು ಕಳುಹಿಸಲಾಗುವುದು ಎಂದು ಹೇಳಿದ್ದು ಕಳೆದ ೨ ವಾರಗಳಲ್ಲಿ ಕರಾಚಿಯಲ್ಲಿ ಮುನ್ನೆಚ್ಚರಿಕೆಯಾಗಿ ಲ್ಯಾಂಡಿಂಗ್ ಮಾಡಿದ ಎರಡನೇ ಭಾರತೀಯ ವಿಮಾನವಾಗಿದೆ.
ಇದಕ್ಕೂ ಮುನ್ನ ಜುಲೈ ೫ ರಂದು ನವದೆಹಲಿಯಿಂದ ದುಬೈಗೆ ಹೊರಟಿದ್ದ ಸ್ಪೈಸ್‌ಜೆಟ್ ವಿಮಾನ ಪೈಲಟ್‌ಗೆ ತಾಂತ್ರಿಕ ದೋಷ ಕಾಣಿಸಿಕೊಂಡ ನಂತರ ಪಾಕಿಸ್ತಾನದ ಕರಾಚಿ ವಿಮಾನ ನಿಲ್ದಾಣದಲ್ಲಿ ಮುನ್ನೆಚ್ಚರಿಕೆಯಾಗಿ ಲ್ಯಾಂಡಿಂಗ್ ಮಾಡಲಾಗಿತ್ತು.
“ದೆಹಲಿಯಿಂದ ದುಬೈಗೆ ಹೊರಟಿದ್ದ ಸ್ಪೈಸ್‌ಜೆಟ್ ವಿಮಾನ ಕರಾಚಿಗೆ ತಿರುಗಿಸಿತ್ತು.ಬೋಯಿಂಗ್ ೭೩೭ ಇಂಜಿನ್ ತಾಂತ್ರಿಕ ದೋಷ ಕಂಡು ಬಂದ ಹಿನ್ನೆಲೆಯಲ್ಲಿ. ವಿಮಾನದ ಕ್ಯಾಪ್ಟನ್ ಮುನ್ನೆಚ್ಚರಿಕೆಯಿಂದ ಲ್ಯಾಂಡಿಂಗ್‌ಗೆ ಪ್ರಯತ್ನಿಸಿದರು ಮತ್ತು ಅನುಮತಿ ನೀಡಲಾಗಿತ್ತು. ವಿಮಾನದಲ್ಲಿದ್ದ ಎಲ್ಲಾ ಪ್ರಯಾಣಿಕರು ಸುರಕ್ಷಿತವಾಗಿದ್ದರು.
“ಜುಲೈ ೫,ರಂದು, ಸ್ಪೈಸ್‌ಜೆಟ್ ಬಿ೭೩೭ ವಿಮಾನ Sಉ-೧೧ ಕಾರ್ಯನಿರ್ವಹಣೆಯ ಫ್ಲೈಟ್‌ನಲ್ಲಿ ಸೂಚಕ ಬೆಳಕಿನ ಅಸಮರ್ಪಕ ಕಾರ್ಯದಿಂದಾಗಿ ಕರಾಚಿಗೆ ತಿರುಗಿಸಲಾಗಿತ್ತು. ವಿಮಾನ ಕರಾಚಿಯಲ್ಲಿ ಸುರಕ್ಷಿತವಾಗಿ ಇಳಿಯಿತು” ಎಂದು ಏರ್‌ಲೈನ್‌ನ ವಕ್ತಾರರು ತಿಳಿಸಿದ್ದಾರೆ.