ಇಂಡಿಗೋ ಏರ್ ಲೈನ್ಸ್‌ಗೆ 30 ಲಕ್ಷ ರೂ.ದಂಡ

ನವದೆಹಲಿ,ಜು.೨೯- ತರಬೇತಿ, ಎಂಜಿನಿಯರಿಂಗ್ ಕಾರ್ಯವಿಧಾನಗಳಿಗೆ ಸಂಬಂಧಿಸಿದ ದಾಖಲಾತಿಗಳಿಗೆ ಸಂಬಂಧಿಸಿದ ನ್ಯೂನ್ಯತೆಗಳಿಗಾಗಿ ಇಂಡಿಗೋ ವಿಮಾನಯಾನ ಸಂಸ್ಥೆಗೆ ಕೇಂದ್ರ ನಾಗರಿಕ ವಿಮಾನಯಾನ ಮಹಾ ನಿರ್ದೇಶನಾಲಯ ೩೦ ಲಕ್ಷ ರೂಪಾಯಿ ದಂಡ ವಿಧಿಸಿದೆ.
ಇಂಡಿಗೋ ವಿಮಾನಯಾನ ಸಂಸ್ಥೆಯಕಾರ್ಯಾಚರಣೆಗಳು, ತರಬೇತಿ ಮತ್ತು ಎಂಜಿನಿಯರಿಂಗ್ ಕಾರ್ಯವಿಧಾನಗಳಿಗೆ ಸಂಬಂಧಿಸಿದ ದಾಖಲಾತಿಗಳಲ್ಲಿ ಪಾರದರ್ಶಕತೆ ಕಾಪಾಡಿಕೊಳ್ಳದಿರುವ ಹಿನ್ನೆಲೆಯಲ್ಲಿ ಈ ದಂಡ ವಿಧಿಸಲಾಗಿದೆ ಎಂದು ಡಿಜಿಸಿಎ ತಿಳಿಸಿದೆ.
ಇಂಡಿಗೋ ವಿಮಾನಯಾನ ಸಂಸ್ಥೆ ಈ ವರ್ಷ ಕಳೆದ ಆರು ತಿಂಗಳ ಅವಧಿಯಲ್ಲಿ ಆಕಾಶದಲ್ಲಿ ನಾಲ್ಕು ಬಾರಿ ಸಣ್ಣ ಪುಟ್ಟ ಅವಘಡಗಳಿಗೆ ಕಾರಣವಾಗಿದೆ. ಈ ಹಿನ್ನೆಲೆಯಲ್ಲಿ ಡಿಜಿಸಿಎ ವಿಮಾನಯಾನ ಸಂಸ್ಥೆಯ ವಿಶೇಷ ಆಡಿಟ್ ನಡೆಸಿದ ದಂಡ ವಿಧಿಸುವ ನಿರ್ಧಾರ ಕೈಗೊಂಡಿದೆ.
ಆಡಿಟ್ ಸಮಯದಲ್ಲಿ, ಕಾರ್ಯಾಚರಣೆಗಳು, ತರಬೇತಿ, ಇಂಜಿನಿಯರಿಂಗ್ ಮತ್ತು ಎಫ್‌ಡಿಎಂ ಕಾರ್ಯಕ್ರಮಗಳ ಕುರಿತು ವಿಮಾನ ಯಾನ ದಾಖಲಾತಿ ಮತ್ತು ಕಾರ್ಯವಿಧಾನ ಪರಿಶೀಲಿಸಿದ ವೇಳೆ ಪಾರದರ್ಶಕತೆ ಕಾಪಾಡಿಕೊಂಡಿಲ್ಲ ಎಂದು ಡಿಜಿಸಿಎ ಹೇಳಿಕೆಯಲ್ಲಿ ತಿಳಿಸಿದೆ.
ಶೋಕಾಸ್ ನೋಟೀಸ್:
ಇಂಡಿಗೋ ವಿಮಾನಯಾನ ಸಂಸ್ಥೆಯಲ್ಲಿ ಲೋಪದೋಷ ಕಂಡು ಬಂದ ಹಿನ್ನೆಲೆಯಲ್ಲಿ ವಿಮಾನಯಾನ ಸಂಸ್ಥೆಗೆ
ಶೋಕಾಸ್ ನೋಟಿಸ್ ನೀಡಲಾಗಿದೆ ಎಂದು ಡಿಜಿಸಿಎ ತಿಳಿಸಿದೆ.
ಇದೇ ವೇಳೆಸಂಸ್ಥೆಗೆ ೩೦ ಲಕ್ಷ ರೂಪಾಯಿಗಳ ಆರ್ಥಿಕ ದಂದ ವಿಧಿಸಿದೆ. ಇದೇ ರೀತಿಯ ನ್ಯೂನ್ಯತೆ ಕಂಡು ಬಂದರೆ ಅಗತ್ಯ ಕ್ರಮಕೈಗೊಳ್ಳುವ ಎಚ್ಚರಿಕೆಯನ್ನೂ ನೀಡಲಾಗಿದೆ.