ಇಂಡಿಗನತ್ತ ಮತಗಟ್ಟೆ ದ್ವಂಸ ಪ್ರಕರಣ: ಕಾಡಿನಲ್ಲಿ ಅವಿತಿದ್ದ ಗ್ರಾಮಸ್ಥರು ಮರಳಿ ಸ್ವ ಗ್ರಾಮಕ್ಕೆ

ಸಂಜೆವಾಣಿ ವಾರ್ತೆ
ಹನೂರು ಮೇ 6 :- ಇಂಡಿಗನತ್ತ ಚುನಾವಣಾ ಮತಗಟ್ಟೆ ದ್ವಂಸ ಪ್ರಕರಣದಿಂದ ಭಯಭೀತರಾಗಿ ಕಾಡಿನಲ್ಲಿ ಅವಿತಿದ್ದ ಇಂಡಿಗನತ್ತ ಗ್ರಾಮಸ್ಥರಿಗೆ ಧೈರ್ಯ ತುಂಬಿದ ಅಧಿಕಾರಿಗಳು ಮರಳಿ ಸ್ವ ಗ್ರಾಮಕ್ಕೆ ( ಇಂಡಿಗನತ್ತ ) ಕರೆ ತಂದು ಶಾಂತಿ ಸಭೆ ನಡೆಸಿದ್ದಾರೆ.
ತಾಲೂಕು ಮಲೆ ಮಹದೇಶ್ವರ ಬೆಟ್ಟ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಇಂಡಿಗನತ್ತ ಗ್ರಾಮದಲ್ಲಿ ಇದೇ ತಿಂಗಳ ಏಪ್ರಿಲ್ 26ರ ಲೋಕಸಭಾ ಚುನಾವಣಾ ಮತದಾನ ದಿನದಂದು ಗ್ರಾಮಸ್ಥರು ಮೂಲ ಸೌಕರ್ಯಕ್ಕೆ ಆಗ್ರಹಿಸಿ ಮತಗಟ್ಟೆ ದ್ವಂಸ ಮಾಡಿ ಗಲಾಟೆ ಮಾಡಿರುವುದಲ್ಲದೆ ಹಲ್ಲೆ ನಡೆಸಿದ ಘಟನೆ ನಡೆದಿತ್ತು.
ಚುನಾವಣೆ ನಡೆಸಲು ಆಗಮಿಸಿದ ಚುನಾವಣಾ ಅಧಿಕಾರಿ, ಸಿಬ್ಬಂದಿ ಹಾಗೂ ಮತ ಚಲಾಯಿಸಲು ಆಗಮಿಸಿದ್ದ ಮೆಂದಾರೆ ಗ್ರಾಮದ ಜನರ ಮೇಲೆ ಹಲ್ಲೆ ಮಾಡಿ ಬಳಿಕ ಬಂಧನಕ್ಕೆ ಒಳಗಾಗುವ ಭೀತಿಯಿಂದ ಗ್ರಾಮದಲ್ಲಿನ ಚಿಕ್ಕ ಮಕ್ಕಳು ಹಾಗೂ ವಯಸ್ಸಾದ ಹಿರಿಯರನ್ನು ಹೊರತುಪಡಿಸಿ ಉಳಿದ ಎಲ್ಲರೂ ಊರು ಬಿಟ್ಟು ಕಾಡಿನಲ್ಲಿ ಅವಿತಿದ್ದರು.
ಇದರಿಂದ ಗ್ರಾಮದಲ್ಲಿ ಚಿಕ್ಕಮಕ್ಕಳು ಹಾಗೂ ಹಿರಿಯರು ಮತ್ತು ಜಾನುವಾರು ಗಳನ್ನು ಆರೈಕೆ ಮಾಡುವವರೇ ಇಲ್ಲದಂತಾಗಿ ಗ್ರಾಮದಲ್ಲಿ ಶೂನ್ಯ ಭಾವ ಆವರಿಸಿತ್ತು. ಇದರಿಂದ ಜಾನುವಾರುಗಳು ಮೇವು ನೀರಲ್ಲದೆ ಸಾವನ್ನಪ್ಪಿರುವ ಘಟನೆಗಳು ಕೂಡ ಜರುಗಿತು.
ಇದನ್ನು ಮನಗಂಡ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪೆÇಲೀಸ್ ಅಧಿಕಾರಿಗಳು ವಿಶೇಷ ಕಾಳಜಿ ವಹಿಸಿ ಗ್ರಾಮಸ್ಥರನ್ನು ಮರಳಿ ಊರಿಗೆ ಕರೆತರಲು ಮನವೊಲಿಸುವಂತೆ ಕಿರಿಯ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದರು.
ಈ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾದ ಉಪವಿಭಾಗಾಧಿಕಾರಿ ಶಿವಮೂರ್ತಿ ಹಾಗೂ ಡಿ ವೈ ಎಸ್ ಪಿ ಧರ್ಮೇಂದ್ರ ಮತ್ತು ಇತರೆ ಪೆÇಲೀಸ್ ಆಧಿಕಾರಿಗಳು ಅರಣ್ಯದಲ್ಲಿ ಅವಿತಿದ್ದ ಇಂಡಿಗನತ್ತ ಗ್ರಾಮಸ್ಥರಿಗೆ ಧೈರ್ಯ ತುಂಬಿ ಊರಿಗೆ ಕರೆ ತರುವಲ್ಲಿ ಯಶಸ್ವಿಯಾಗಿದ್ದಾರೆ. ಅಲ್ಲದೆ ಗ್ರಾಮದಲ್ಲಿ ಶಾಂತಿಸಭೆ ನಡೆಸುವಲ್ಲಿ ಸಫಲರಾಗಿದ್ದಾರೆ.