ಇಂಟ್ರ್ಯಾಕ್ಟ ಕ್ಲಬ್‍ನ ಅಧಿಕಾರಿಗಳ ಪದಗ್ರಹಣ

ಹುಬ್ಬಳ್ಳಿ,ಜು26: 2022-23ನೇ ಸಾಲಿನ ಇಂಟ್ರ್ಯಾಕ್ಟ ಕ್ಲಬ್‍ನ ಅಧಿಕಾರಿಗಳ ಪದಗ್ರಹಣ ಸಮಾರಂಭವನ್ನು ವಿಶ್ವಭಾರತಿ ಬಾಲಿಕೆಯರ ಪ್ರೌಢಶಾಲೆ ವಿದ್ಯಾನಗರ ಹುಬ್ಬಳ್ಳಿ ಇಲ್ಲಿ ರೋಟರಿ ಕ್ಲಬ್ ಹುಬ್ಬಳ್ಳಿ ಪಶ್ಚಿಮ ಇನ್ಸ್ಟಾಲಿಂಗ್ ಅಧಿಕಾರಿಗಳಾದ ರೋ. ನರಸಿಂಹಮೂರ್ತಿ ನಡೆಸಿಕೊಟ್ಟರು.ವಿದ್ಯಾರ್ಥಿಗಳು ತುಂಬಾ ಶ್ರಮವಹಿಸಿ ಶಾಲೆಯ ಸುಧಾರಣೆಗೆ, ಪರಿಸರ ಶುದ್ಧವಾಗಿಡಲು ಆಟ ಪಾಠಗಳಲ್ಲಿ ಆಸಕ್ತಿ ಹೊಂದಬೇಕು. ಎಲ್ಲಾ ವಿಷಯದಲ್ಲೂ ಪ್ರಯತ್ನ ಪಟ್ಟಲ್ಲಿ ಯಶಸ್ಸು ಖಂಡಿತ. ಅದರಂತೆ ಸತ್ಯವಾದದ್ದನ್ನೆ ನಮ್ಮಲ್ಲಿ ಅಳವಡಿಸಿಕೊಂಡು, ಶಿಕ್ಷಕರ ಮಾರ್ಗದರ್ಶನ ಪಡೆದು, ನಂಬಿಕೆಯಿಂದ ಶ್ರದ್ದೆಯಿಂದ ಓದು ಬರಹ ಮುಂತಾದ ಒಳ್ಳೆಯ ಕೆಲಸಗಳನ್ನು ಮಾಡಿ ಶಾಲೆಗೂ, ತಂದೆ-ತಾಯಿಗಳಿಗೂ, ದೇಶಕ್ಕೂ ಕೀರ್ತಿ ತರಬೇಕೆಂದರು.
ಕ್ಲಬ್ ಅಧ್ಯಕ್ಷರಾದ ಚಂದ್ರಕಾಂತ ಮಿಸ್ಕಿನರವರು ಶಾಲಾ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಸಹಾಯವಾಗಲು ಆಯ್ದ ವಿದ್ಯಾರ್ಥಿಗಳಿಗೆ ಸಹಾಯಧನ ವಿತರಿಸಿದರು. ನೂತನ ಪದಾಧಿಕಾರಿಗಳಾಗಿ ಅಧ್ಯಕ್ಷರಾಗಿ ಅಮೃತಾ ವಡೇಕರ, ಕಾರ್ಯದರ್ಶಿ ಚನ್ನಮ್ಮ ಚಲವಾದಿ, ಖಜಾಂಚಿ ಮುಸ್ಕಾನ ಚಳ್ಳಮರದ, ಸದಸ್ಯರಾಗಿ ಗಂಗವ್ವ ಅರಳಿಮಟ್ಟಿ, ಪ್ರಿಯಾ ನೀಲಣ್ಣವರ, ಅಂಕಿತಾ ಎಣಗಿ, ಸಂಜನಿ ಹುಲಿಕಟ್ಟಿ ಅಧಿಕಾರ ಸ್ವೀಕರಿಸಿದರು.
ಕ್ಲಬ್ ಕಾರ್ಯದರ್ಶಿ ಸುಶೀಲಕುಮಾರ ಕಾಟಕರ, ಮುಖ್ಯೋಪಾಧ್ಯಾಯಿನಿ ಶ್ರೀಮತಿ ಭಾರತಿ ವಿ. ಭದ್ರಾಪೂರ ಹಾಗೂ ರೋಟರಿ ಸದಸ್ಯರು ಉಪಸ್ಥಿತರಿದ್ದರು.