ಇಂಟಿಗ್ರೇಟೆಡ್ ಸಕ್ರ್ಯೂಟ್-ಸಂವಹನ ವ್ಯವಸ್ಥೆಗಳು: ಅಂತರಾಷ್ಟ್ರೀಯ ಸಮ್ಮೇಳನ

ರಾಯಚೂರು,ಮಾ.4-ಹೈದ್ರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಗಳಲ್ಲಿ ಒಂದಾದ ನಗರದ ಪ್ರತಿಷ್ಠಿತ ಎಸ್‍ಎಲ್‍ಎನ್ ತಾಂತ್ರಿಕ ಮಹಾವಿದ್ಯಾಲಯ, ಇನ್ಸ್ಟಿಟ್ಯೂಟ್ ಆಫ್ ಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ಸ್ ಇಂಜಿನಿಯರ್ಸ್(ಐಇಇಇ), ಬೆಂಗಳೂರು ಹಾಗೂ ಉತ್ತರ ಕರ್ನಾಟಕ ಉಪವಿಭಾಗ ಇತ್ತೀಚಿಗೆ ಜಂಟಿಯಾಗಿ ಆಯೋಜಿಸಿದ್ದ “ಇಂಟಿಗ್ರೇಟೆಡ್ ಸಕ್ರ್ಯೂಟ್ಸ್ ಹಾಗೂ ಸಂವಹನ ವ್ಯವಸ್ಥೆಗಳು (ಐಸಿಐಸಿಎಸಿಎಸ್ -2023)”
ವಿಷಯದ ಕುರಿತ ಅಂತರಾಷ್ಟ್ರೀಯ ಸಮ್ಮೇಳನದ ಉದ್ಘಾಟನಾ ಸಮಾರಂಭ ಎಸ್‍ಎಲ್‍ಎನ್ ತಾಂತ್ರಿಕ ಮಹಾವಿದ್ಯಾಲಯದ ಆವರಣದಲ್ಲಿ ಜರುಗಿತು.
ಎಸ್‍ಎಲ್‍ಎನ್ ಕಾಲೇಜಿನ ಸಹ ಪ್ರಾಧ್ಯಾಪಕಿ ರಾಚಮ್ಮ ಪಾಟೀಲ್ ಎಲ್ಲರನ್ನೂ ಸ್ವಾಗತಿಸಿದರು.
ಕಾಲೇಜಿನ ಎಲೆಕ್ಟ್ರಾನಿಕ್ಸ್ ಹಾಗೂ ದೂರಸಂಪರ್ಕ ವಿಭಾಗದ ಮುಖ್ಯಸ್ಥರಾದ ಡಾ. ವಿಶ್ವನಾಥ್ ಪಿ ಅವರು ಮಾತನಾಡುತ್ತ, “ತಂತ್ರಜ್ಞಾನದ ಉದಯೋನ್ಮುಖ ಕ್ಷೇತ್ರಗಳಲ್ಲಿ ನಡೆಯುತ್ತಿರುವ ಸಂಶೋಧನೆಗಳ ಬಗ್ಗೆ ಸ್ಥಳೀಯ ಪ್ರದೇಶಗಳಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಈ ಸಮ್ಮೇಳನವನ್ನು ಆಯೋಜಿಸಲಾಗಿದೆ, ಪ್ರಪಂಚದ ವಿವಿಧ ದೇಶಗಳಿಂದ ಸುಮಾರು 1108 ಸಂಶೋಧನಾಕಾರರು ತಮ್ಮ ಸಂಶೋಧನಾ ಪ್ರಬಂಧಗಳನ್ನು ಈ ಸಮ್ಮೇಳನಕ್ಕೆ ಸಲ್ಲಿಸಿದ್ದರು, ಕಠಿಣ ಪರಿಶೀಲನೆಯ ನಂತರ 270 ನೋಂದಾಯಿತ ಪ್ರಬಂಧಗಳನ್ನು ಮಂಡಿಸಲು ಆಯ್ಕೆ ಮಾಡಲಾಯಿತು ಎಂದು ಹೇಳಿದರು.
ಸಮ್ಮೇಳನಕ್ಕೆÀ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಐಐಟಿ, ಹೈದರಾಬಾದ್‍ನ ಡಾ.ಸಿ ಕೃಷ್ಣ ಮೋಹನ್ ಅವರು ಮಾತನಾಡಿ ” ವಿದ್ಯಾರ್ಥಿಗಳು ಇತ್ತೀಚಿನ ದಿನಗಳಲ್ಲಿ ಅಪಾರ ಪ್ರಾಮುಖ್ಯತೆ ಪಡೆಯುತ್ತಿರುವ ಕಂಟ್ರೋಲ್ ಸಿಸ್ಟಮ್ಸ್, ಮೆಕಾಟ್ರಾನಿಕ್ಸ್, ಇಂಟಲಿಜೆನ್ಸ್ ಸಿಸ್ಟಮ್ಸ್, ಫಾಲ್ಟ್ ಡಯಾಗ್ನೋಸಿಸ್ ವಿಷಯಗಳ ಬಗ್ಗೆ ಹೆಚ್ಚಿನ ತಿಳುವಳಿಕೆ ಪಡೆದು ಕೊಳ್ಳಲು ಪ್ರಯತ್ನಿಸಬೇಕು ಹಾಗೂ ಈ ಡೊಮೇನ್‍ಗಳಿಗೆ ಸಂಬಂಧಿಸಿದಂತೆ ಸ್ಥಳೀಯ ಸಮಸ್ಯೆಗಳಿಗೆ ಪರಿಹಾರಗಳನ್ನು ಸಕ್ರಿಯಗೊಳಿಸಲು ಮೂಲಸೌಕರ್ಯವನ್ನು ಅಭಿವೃದ್ಧಿಪಡಿಸುವ ಪ್ರಯತ್ನಗಳೂ ಕೂಡ ಆಗಬೇಕಾದ ಅವಶ್ಯಕತೆ ಇದೆ ಎಂದು ಅಭಿಪ್ರಾಯಪಟ್ಟರು.
ಸಮ್ಮೇಳನದ ಗೌರವ ಅತಿಥಿಗಳಲೊಬ್ಬರಾದ ಇಟಲಿಯ ಡಾ.ಗ್ಯಾನ್ಫ್ರ್ಯಾನ್ಕೋ ಮಾತನಾಡಿ “ಈ ಮಹತ್ವದ ಹಾಗೂ ಅಚ್ಚುಕಟ್ಟಾದ ಸಮ್ಮೇಳನದ ಹಿಂದಿರುವ ಆಯೋಜಕರ ಶ್ರಮ ಅತ್ಯಂತ ಶ್ಲಾಘನೀಯವಾದದ್ದು” ಎಂದು ಪ್ರಶಂಸಿದರು. ಆನಂತರದ ಸೆಷನ್‍ನಲ್ಲಿ ಡಾ.ಗ್ಯಾನ್ಫ್ರ್ಯಾನ್ಕೋ ಅವರು ಎಲ್ಲ ವಿದ್ಯಾರ್ಥಿಗಳಿಗೆ ಹಾಗೂ ಸಂಶೋಧನಾಕಾರರಿಗೆ ಬಹಳ ಉಪಯುಕ್ತವಾದ “ಇನ್ ಡೋರ್ ಲೋಕಲೈಝೇಶನ್: ಹಿಸ್ಟರಿ, ಟ್ರೆಂಡ್ಸ್ ಎಂಡ್ ಓಪನ್ ಇಶ್ಯೂಸ್” ವಿಷಯದ ಬಗ್ಗೆ ಮಾತನಾಡಿದರು.
ಸಮ್ಮೇಳನದ ಇನ್ನೋರ್ವ ಗೌರವ ಅತಿಥಿ, ಇಟಲಿಯ ಡಾ.ಕೋವಿಲ್ಲೋ ಜ್ಯುಸೆಪ್ ಮಾತನಾಡುತ್ತ, ಇಂದಿನ ದಿನಗಳಲ್ಲಿ ನಾವೆಲ್ಲರೂ ನಿರಂತರವಾಗಿ ನಮ್ಮ ಜ್ಞಾನವನ್ನು ನವೀಕರಿಸಿಕೊಳ್ಳಬೇಕಾದ ತೀವ್ರ ಅವಶ್ಯಕತೆ ಇದೆ, ಇಂತಹ ಸಮ್ಮೇಳನಗಳಲ್ಲಿ ಪಾಲ್ಗೊಂಡು, ದೊರಕುವ ಅಪಾರ ಪ್ರಯೋಜನಗಳನ್ನು ಎಲ್ಲರೂ ಪಡೆದುಕೊಳ್ಳೋಣ ಎಂದು ಅಭಿಪ್ರಾಯಪಟ್ಟರು. ನಂತರ ಅವರು ಇತ್ತೀಚಿನ ದಿನಗಳಲ್ಲಿ ಅತ್ಯಂತ ಪ್ರಾಮುಖ್ಯತೆ ಪಡೆಯುತ್ತಿರುವ “ವೇರೇಬಲ್ ಹಾಗೂ ಇಂಪ್ಲಾಂಟೆಬಲ್ ಸೆನ್ಸರ್‍ಗಳು” ವಿಷಯದ ಕುರಿತು ಮಾತನಾಡಿದರು.
ಇನ್ನೋರ್ವ ಗೌರವ ಅತಿಥಿ, ಡಾ.ಪರಮೇಶಚಾರಿ ಮಾತನಾಡಿ, ವಿದ್ಯಾರ್ಥಿಗಳಲ್ಲಿ ಸೃಜನಶೀಲ ಚಿಂತನೆಯನ್ನು ಹಾಗೂ ವಿಶ್ಲೇಷಣಾ ಕೌಶಲ್ಯಗಳನ್ನು ಹೆಚ್ಚಿಸುವಲ್ಲಿ ಇನ್ಸ್ಟಿಟ್ಯೂಟ್ ಆಫ್ ಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ಸ್ ಇಂಜಿನಿಯರ್ಸ್(ಐಇಇಇ) ಯಾವ ರೀತಿಯಲ್ಲಿ ತನ್ನ ಮಹತ್ವದ ಪಾತ್ರ ವಹಿಸುತ್ತದೆ ಎಂದು ವಿವರಿಸುತ್ತ, ಸಂಶೋಧನೆ ಹಾಗೂ ಹೊಸ ಹೊಸ ಆವಿಷ್ಕಾರಗಳಿಗೆ ಅಪಾರ ಒತ್ತು ನೀಡುವ ‘ರಾಷ್ಟ್ರೀಯ ಶಿಕ್ಷಣ ನೀತಿ’ಯ ಅನುಷ್ಠಾನಕ್ಕೆ ನಮ್ಮ ಕರ್ನಾಟಕ ಯಾವ ರೀತಿಯಲ್ಲಿ ಕೊಡುಗೆ ನೀಡುತ್ತಿದೆ ಎಂಬುದನ್ನೂ ವಿವರಿಸಿದರು.
“ಸಾಕಷ್ಟು ಬದಲಾವಣೆಗಳಾಗುತ್ತಿರುವ ನಮ್ಮ ಇಂದಿನ ಶಿಕ್ಷಣ ಪದ್ಧತಿಯಲ್ಲಿ ವಿದ್ಯಾರ್ಥಿಗಳು ಸೃಜನಾತ್ಮಕ ಚಿಂತನೆ ಹಾಗೂ ವಿಶ್ಲೇಷಣಾತ್ಮಕ ಕೌಶಲ್ಯಗಳನ್ನು ಅಭಿವೃದ್ಧಿಪಡಿಸಿಕೊಳ್ಳಲು ಪ್ರಯತ್ನಿಸಬೇಕು, ಹೊಸ ತಂತ್ರಜ್ಞಾನವನ್ನು ಪಡೆದುಕೊಂಡು ನಮ್ಮ ಸಮಾಜ ಮತ್ತು ಪ್ರಕೃತಿಯ ಪ್ರಯೋಜನಕ್ಕಾಗಿ ಅದನ್ನು ಬಳಸಲು ಕಲಿಯಬೇಕು” ಎಂದು ಒತ್ತು ನೀಡಿದ ಗೌರವ ಅತಿಥಿ ಬೆಂಗಳೂರಿನ ಡಾ. ಹೇಮಲತಾ “ಸಂಶೋಧನೆಗೆ ಬಲವನ್ನೀಯುವ ರಾಷ್ಟ್ರೀಯ ಶಿಕ್ಷಣ ನೀತಿಯ ಅನುಷ್ಠಾನಕ್ಕೆ ನಮ್ಮ ರಾಜ್ಯ ಸಾಕಷ್ಟು ಕೊಡುಗೆ ನೀಡುತ್ತಿದೆ, ಈ ನಿಟ್ಟಿನಲ್ಲಿ ಇಲ್ಲಿ ಆಯೋಜಿಸಿದ ಅಂತರಾಷ್ಟ್ರೀಯ ಸಮ್ಮೇಳನ ಔಚಿತ್ಯ ಪೂರ್ಣವಾದದ್ದು, ಸಂಘಟಕರ ಶ್ರಮ ಅಪಾರವಾದದ್ದು” ಎಂದು ಮಾತನಾಡಿ, ಎಲ್ಲ ಆಯೋಜಕರನ್ನು ಮನಃಪೂರ್ವಕವಾಗಿ ಅಭಿನಂದಿಸಿದರು ಹಾಗೂ ಮುಂದಿನ ದಿನಗಳಲ್ಲೂ ಇಂತಹ ಮಹತ್ವದ ಸಮ್ಮೇಳನಗಳನ್ನು ಆಯೋಜಿಸಲು ಪ್ರೇರೇಪಣೆ ನೀಡಿದರು.
ಇಟಲಿಯ ರೋಮ್ ವಿಶ್ವವಿದ್ಯಾನಿಲಯ ಡಾ. ಲುಕಾ ಡಿ ನುಂಜಿಯೊ ವೀಡಿಯೊ ಸಂದೇಶ ನೀಡಿದರು. ಅವರು ಎಸ್ ಎಲ್ ಎನ್ ಕಾಲೇಜಿನ ಸಿಬ್ಬಂದಿ ಮತ್ತು ಐಇಇಇ ವಿದ್ಯಾರ್ಥಿ ಶಾಖೆಯ ಪ್ರಯತ್ನವನ್ನು ಶ್ಲಾಘಿಸಿದರು ಹಾಗೂ ಮುಂದೆಯೂ ಇಂತಹ ಕಾರ್ಯಕ್ರಮಗಳು ಹೆಚ್ಚು ನಡೆಯಲಿ ಎಂದು ಹಾರೈಸಿದರು.
ಐಬಿಎಮ್, ಅಮೇರಿಕಾದ ಥಾಮಸ್ ವ್ಯಾಟ್ಸನ್ ಸಂಶೋಧನಾ ಕೇಂದ್ರದ ರಾಜೀವ್ ಜೋಶಿ ವೀಡಿಯೊ ಸಂದೇಶವನ್ನು ನೀಡಿ, ತಂತ್ರಜ್ಞಾನ ವಿಭಾಗದಲ್ಲಿನ ಇತ್ತೀಚಿನ ಅಭಿವೃದ್ಧಿಗಳ ಬಗ್ಗೆ ಸ್ಥಳೀಯ ಪ್ರದೇಶಗಳಲ್ಲಿ ಸಾರ್ವಜನಿಕರಿಗೆ ಅರಿವನ್ನು ಹರಡಲು, ಗ್ರಾಮೀಣ ಪ್ರದೇಶದ ಸಮಸ್ಯೆಗಳನ್ನು ಗುರುತಿಸಲು ಹಾಗೂ ನಗರೀಕರಣಕ್ಕೆ ಪರಿಹಾರಗಳನ್ನು ಪ್ರಸ್ತಾಪಿಸಲು ವಿದ್ಯಾರ್ಥಿಗಳನ್ನು ಪ್ರೇರೇಪಿಸಿದರು.
ಕಲಬುರಗಿಯ ಎಚ್ ಕೆ ಇ ಸೊಸೈಟಿಯ ಆಡಳಿತ ಮಂಡಳಿ ಸದಸ್ಯ ಗಿರಿಜಾಶಂಕರ್ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿ ಎಸ್ ಎಲ್ ಎನ್ ಕಾಲೇಜು ಸಿಬ್ಬಂದಿ ಮತ್ತು ಐಇಇಇ ತಂಡದ ಪ್ರಯತ್ನಗಳನ್ನು ಶ್ಲಾಘಿಸುತ್ತ, ಮುಂಬರುವ ದಿನಗಳಲ್ಲಿ ಇಂತಹ ಕಾರ್ಯಕ್ರಮಗಳು ಹೆಚ್ಚು ನಡೆಯಲಿ ಎಂದು ಹಾರೈಸಿದರು.
ಎಚ್ ಕೆ ಇ ಸೊಸೈಟಿ, ಕಲಬುರಗಿಯ ಗೌರವಾಧ್ಯಕ್ಷ ಡಾ.ಭೀಮಾಶಂಕರ ಸಿ.ಬಿಲಗುಂದಿ ಅಧ್ಯಕ್ಷೀಯ ನುಡಿಗಳನ್ನಾಡಿದರು. ಸಂಶೋಧಕರು ತಮ್ಮ ಕೆಲಸವನ್ನು ಪ್ರತಿಷ್ಠಿತವಾದ ಐಇಇಇ ನಿಯತಕಾಲಿಕಗಳಲ್ಲಿ, ಐಇಇಇ ಯ ಪ್ರಕ್ರಿಯೆಗಳಲ್ಲಿ ಅಥವಾ ಎಕ್ಸ್‍ಪೆÇ್ಲೀರರ್ ನಲ್ಲಿ ಪ್ರಕಟಿಸಲು ಬಯಸುತ್ತಾರೆ, ಇದೇ ಕಾರಣಕ್ಕಾಗಿ ಈ ಸಮ್ಮೇಳನವನ್ನು ಆಯೋಜಿಸಲಾಗಿದೆ. ನಮ್ಮ ಸೊಸೈಟಿಯ ಎಸ್.ಎಲ್.ಎನ್. ಎಂಜಿನಿಯರಿಂಗ್ ಕಾಲೇಜು, ರಾಯಚೂರು ಈ ಭಾಗದ ಸಂಶೋಧಕರಿಗೆ ಸಾಕಷ್ಟು ಉತ್ತೇಜನ ನೀಡಿದೆ ಎಂದು ಹೇಳುತ್ತ, ವಿದ್ಯಾರ್ಥಿಗಳ ಬೆಳವಣಿಗೆಗೆ ಸಹಾಯ ಮಾಡುವ ಕೆಲವು ಪ್ರಮುಖ ಅಂಶಗಳನ್ನು ವಿವರಿಸಿದರು.
ಎಸ್‍ಎಲ್‍ಎನ್ ಎಂಜಿನಿಯರಿಂಗ್ ಕಾಲೇಜಿನ ಸಿಎಸ್‍ಇ ವಿಭಾಗದ ಮುಖ್ಯಸ್ಥೆ ಪೆÇ್ರ.ಸುಮಂಗಲಾ ಇಟಗಿ ಕಾರ್ಯಕ್ರಮದ ಯಶಸ್ಸಿಗೆ ನೇರವಾಗಿ ಹಾಗೂ ಪರೋಕ್ಷವಾಗಿ ಬೆಂಬಲಿಸಿದ ಸರ್ವರಿಗೂ ಧನ್ಯವಾದಗಳನ್ನು ಅರ್ಪಿಸಿದರು.