ಇಂಟರ್ ಪೋಲ್ : ವಾರ್ಷಿಕ ಮಹಾಧಿವೇಶನ ಇದೇ ಮೊದಲ ಬಾರಿ ಮುಂದೂಡಿಕೆ

ಲಿಯಾನ್ ( ಪ್ರಾನ್ಸ್) ನ. 3- ವಿಶ್ವದಲ್ಲಿ ಕೊರೊನಾ ಸೊಂಕು ಇರುವ ಹಿನ್ನೆಲೆಯಲ್ಲಿ ಇದೇ ಮೊದಲ ಬಾರಿಗೆ ಇಂಟರ್ಪೋಲ್ ತನ್ನ ವಾರ್ಷಿಕ ಮಹಾಧಿವೇಶನವನ್ನು ಮುಂದೂಡಿದೆ.

ವಿಶ್ವದ 194 ದೇಶಗಳು ಸೇರಿ ಭಯೋತ್ಪಾದನೆ ಸಂಘಟಿತ ಅಪರಾಧ, ಸೇರಿದಂತೆ ವಿವಿಧ ವಿಷಯಗಳ ಕುರಿತು ಚರ್ಚಿಸಿ ಪರಸ್ಪರ ಸಹಕಾರಕ್ಕಾಗಿ ಚರ್ಚೆ ನಡೆಸಲು ವಾರ್ಷಿಕ ನಡೆಸುತ್ತವೆ.

ಇಂಟರ್ ಪೋಲ್ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ 89 ನೇ ವಾರ್ಷಿಕ ಮಹಾಧಿವೇಶನ
ಈ ಬಾತಿ ಯುನೈಟೆಡ್ ಅರಬ್ ಎಮಿರೇಟ್ಸ್ ನಲ್ಲಿ ಡಿಸೆಂಬರ್ ನಲ್ಲಿ ಆಯೋಜಿಲಾಗಿತ್ತು. ಜಗತ್ತಿನಾದ್ಯಂತ ಕೊರೊನಾ ಸೋಂಕು ಇರುವ‌ ಹಿನ್ನೆಲೆಯಲ್ಲಿ ಮಹಾಧಿವೇಶನ ಮುಂದೂಡಲಾಗಿದೆ‌

194 ದೇಶಗಳು ಒಂದೆಡೆ ಸೇರಿ ಭಯೋತ್ಪಾದನೆ ವಿರುದ್ದು ಹೋರಾಟಕ್ಕೆ ರೂಪ ರೇಷೆ ಸಿದ್ದ ಪಡಿಸುವ ಕೆಲಸ ಮಾಡುತ್ತಿದ್ದವು.

ಕೊರೋನಾ ಸೋಂಕಿನ ಸಮಯದಲ್ಲಿ ವಿಶ್ವದ ಯಾವುದೇ ಭಾಗದಲ್ಲಿ ಮಾಹಾಧಿವೇಶನ ನಡೆಸಲು ಸಾದ್ಯವಿಲ್ಲದೆ ಹಿನ್ನೆಲೆಯಲ್ಲಿ ಇಂಟರ್ ಪೋಲ್ ಕಾರ್ಯ ನಿರ್ವಾಹಕ‌ ಸಮಿತಿ ಈ ಕ್ರಮ ಕೈಗೊಳ್ಳಲಾಗಿದೆ.

ಸೋಂಕಿನ ಹಿನ್ನೆಲೆಯಲ್ಲಿ ಮಹಾಧಿವೇಶನ ನಡೆಸುವುದು ಕಷ್ಟವಾಗಿದರಮ ಹೀಗಾಗಿ ಅನಿವಾರ್ಯವಾಗಿ ಮುಂದೂಡಲಾಗಿದೆ .ಮುಂದಿನ ದಿನಾಂಕ ಮತ್ತು‌ದೇಶದ ಬಗ್ಗೆ ಮಾಹಿತಿ ನೀಡಲಾಗುವುದು ಎಂದಿದೆ