ಕಲಬುರಗಿ:ಸೆ.21: ಶರಣಬಸವ ವಿಶ್ವವಿದ್ಯಾಲಯದ ಇಂಟೆಲ್ ಉನ್ನತಿ ಬಹು ಶಿಸ್ತೀಯ ಪ್ರಯೋಗಾಲಯದಲ್ಲಿ ಗುರುವಾರದಂದು ವಿವಿಯ ಕಂಪ್ಯೂಟರ್ ಸೈನ್ಸ್ ವಿಭಾಗ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಆ್ಯಂಡ್ ಮಷಿನ್ ಲರ್ನಿಂಗ್ ವಿಭಾಗ ಹಾಗೂ ಮಹಿಳಾ ಇಂಜಿನಿಯರಿಂಗ್ ಮತ್ತು ಟೆಕ್ನಾಲಜಿ ವಿಭಾಗ ಆಯೋಜಿಸಿದ ಇಂಟರ್‍ನೆಟ್ ಆಫ್ ಥಿಂಗ್ಸ್ ಕುರಿತಾದ ಐದು ದಿನಗಳ ತರಬೇತಿ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಈ ಕಾರ್ಯಕ್ರಮವನ್ನು ಶರಣಬಸವ ವಿಶ್ವವಿದ್ಯಾಲಯದ ಡೀನ್ ಡಾ. ಲಕ್ಷ್ಮೀ ಪಾಟೀಲ ಮಾಕಾ ದೀಪ ಬೆಳಗಿಸಿ ಉದ್ಘಾಟಿಸಿದರು. ಈ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಕ್ಯಾಡ್‍ಮ್ಯಾಕ್ಸ್ ಎಡ್‍ಟೆಕ್ ಬೆಂಗಳೂರಿನ ಶ್ರೀ ಎಸ್ ಕಾರ್ತಿಕೆಯನ್ ಆಗಮಿಸಿದ್ದರು.
ಈ ತರಬೇತಿ ಕಾರ್ಯಕ್ರಮದಲ್ಲಿ ಕ್ಯಾಡ್‍ಮ್ಯಾಕ್ಸ್‍ನ ವಿಜಯ ಮಹಾಂತೇಶ ಮುಲಗೆ, ವಿವಿಯ ಡಾ. ಶಿವಕುಮಾರ ಜವಳಗಿ, ಡಾ. ಶ್ರೀಕಾಂತ ಪಾಟೀಲ, ಪ್ರೊ. ಶ್ರೀಧರ ಅಣಕಲ್, ಡಾ. ಶಿವಲೀಲಾ ಪಾಟೀಲ, ಡಾ. ಸುಜಾತಾ ಮಲ್ಲಾಪುರ, ಡಾ. ಶಿವಗಂಗಾ ಪಾಟೀಲ, ಪ್ರೊ. ಶುಷ್ಮಾ ಪಾಟೀಲ, ಪ್ರೊ. ಶೀತಲ್ ಬಿರಾದರ, ಪ್ರೊ. ಪುಷ್ಪಲತಾ ಪಾಟೀಲ, ಪ್ರೊ. ನಿರೂಪಮಾ ಸೇರಿದಂತೆ ಇತರರು ಉಪಸ್ಥಿತರಿದ್ದರು.