ಇಂಜಿನಿಯರ ದಿನಾಚರಣೆ : ಯುವ ಇಂಜಿನಿಯರಗಳಿಗೆ ಸನ್ಮಾನ

ಔರಾದ : ಸೆ.16:ಪಟ್ಟಣದ ಅಮರೇಶ್ವರ ಕನ್ಯಾ ಪ್ರೌಢಶಾಲೆಯಲ್ಲಿ ನೆಹೆರು ಯುವ ಕೇಂದ್ರ ಬೀದರ್ ಸುಭಾಸ್ ಚಂದ್ರ ಭೋಸ್ ಯುವಕ ಸಂಘದ ವತಿಯಿಂದ ಇಂಜಿನಿಯರ ದಿನಾಚರಣೆಯ ಹಾಗೂ ಹಿಂದಿ ದಿವಸ ಆಚರಣೆ ಮಾಡಲಾಯಿತು.

ಈ ಸಂದರ್ಭದಲ್ಲಿ ತಾಲೂಕಿನ ಕಿರಿಯ ಅಭಿಯಂತರರಾದ ಪ್ರವೀಣ ಕಾರಂಜೆ, ಸೋನಿ ದ್ಯಾಡೆ, ವಿಕಾಸ ಕಾಂಬಳೆ, ರಮೇಶ ಜಾಧವ, ಅಮೆರ ಶೇಕ್,ಅವರಿಗೆ ಸನ್ಮಾನಿಸಿ ಗೌರವಿಸಲಾಯಿತು.

ಈ ಸಂದರ್ಭದಲ್ಲಿ ಮುಖ್ಯಗುರು ರಜನಿಗಂಧ ಹಮೀಳಾಪುರೆ, ಬಂಡೆಪ್ಪಾ ಭಂತೆ, ಗುಂಡಪ್ಪಾ,ರಾಹುಲ ಜಾಧವ, ರೋಹಿತ ಕಾಂಬಳೆ ಉಪಸ್ಥಿತರಿದ್ದರು