ಇಂಜಿನಿಯರ್ ಮೇಲಿನ ಹಲ್ಲೆ ಖಂಡಿಸಿ ಪ್ರತಿಭಟನೆ


ಸಂಜೆವಾಣಿ ವಾರ್ತೆ
ಹರಪನಹಳ್ಳಿ:ಜ,5-  ರಾಮನಗರ ಜಿಲ್ಲೆಯ ಕನಕಪುರ ತಾಲೂಕಿನ ರಾಂಪುರ ಗ್ರಾಮದಲ್ಲಿ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಸಿಬ್ಬಂದಿ ಮೇಲೆ ಇತ್ತೀಚೆಗೆ ನಡೆದ ಹಲ್ಲೆ ಖಂಡಿಸಿ ಹರಪನಹಳ್ಳಿ ತಾಲೂಕು ಪಂಚಾಯಿತಿ ಮುಂಭಾಗ ಇಲ್ಲಿನ ನರೇಗಾ ನೌಕರರು ಕಪ್ಪುಪಟ್ಟಿ ಕಟ್ಟಿಕೊಂಡು  ಶಾಂತಿಯುತ ಪ್ರತಿಭಟನೆ ನಡೆಸಿದರು.
ಕಳೆದ ಡಿ.31 ರಂದು ನರೇಗಾ ಯೋಜನೆಯಡಿ ನಿರ್ಮಿಸಲಾದ ಕುರಿಶೆಡ್ ಕಾಮಗಾರಿಯ ಅಳತೆ ಮಾಡಲು ತೆರಳಿದ್ದ ತಾಂತ್ರಿಕ ಸಹಾಯಕ ವಿ.ಟಿ ರೋಹಿತ್ ಗೌಡ (ಹೊರಗುತ್ತಿಗೆ ನೌಕರ) ಮೇಲೆ ವ್ಯಕ್ತಿಯೊಬ್ಬ ಹಲ್ಲೆ ನಡೆಸಿರುವ ಘಟನೆಯನ್ನು ನರೇಗಾ ನೌಕರರು ರಾಜ್ಯದಾದ್ಯಂತ ಖಂಡಿಸಿದರು. ಇದೇ ರೀತಿ ನರೇಗಾ ಕ್ಷೇಮಾಭಿವೃದ್ಧಿ ಸಂಘದ ಸಿಬ್ಬಂದಿ ಹರಪನಹಳ್ಳಿ ತಾಲೂಕಿನಲ್ಲಿ ಸಹ ಕೆಲಸ ನಿರ್ವಹಿಸುತ್ತಲೇ ಕಪ್ಪುಪಟ್ಟಿ ಕಟ್ಟಿ ಹಲ್ಲೆ ಮಾಡಿದವರ ವಿರುದ್ದ ಕೂಡಲೇ ಕಾನೂನು ಕ್ರಮ ಕೈಗೊಳ್ಳುವಂತೆ ಶಾಂತಿಯುತ ಪ್ರತಿಭಟನೆ ನಡೆಸಿದರು. ನೌಕರರಾದ ನಾಗರಾಜ ನಾಯ್ಕ, ವಸಿಗೇರಪ್ಪ ಕೆ ಚಾಗನೂರು,  ಮೈಲಾರಿ ಗೌಡ, ಕೊಟ್ರೇಶ್ ಎಚ್, ಮಲ್ಲೇಶ್ ನಾಯ್ಕ, ಮಲ್ಲಿಕಾರ್ಜುನ ಪೂಜಾರ್, ಮಹಂತೇಶ್ ಎಂ, ಯೋಗೀಶ್, ರವಿ ಹಲಗೇರಿ, ಪ್ರಕಾಶ್, ಮರಿಸ್ವಾಮಿ, ರಮೇಶ್, ಚನ್ನಪ್ಪ, ಬಸವರಾಜ್ ಸೇರಿ  ಇತರರಿದ್ದರು.