
ಬೀದರ್: ಸೆ.15:ಸರ್. ಎಂ. ವಿಶ್ವೇಶ್ವರಯ್ಯನವರ 162 ಜನ್ಮದಿನದ ಅಂಗವಾಗಿ ನಾಡಿನ ಮೂಕುಟಪ್ರಾಯ ಗಡಿ ಜಿಲ್ಲೆ ಬೀದರ್‍ನಲ್ಲಿ ಇಂದು ಇಂಜಿನಿಯರ್ಸ್ ದಿನಾಚರಣೆಯ ನಿಮಿತ್ಯ ಭವ್ಯ ಮೇರವಣಿಗೆ ಜರುಗಿತು.
ನಗರದ ಬಸವೇಶ್ವರ ವೃತ್ತದಲ್ಲಿ ಕರ್ನಾಟಕ ರಾಷ್ಟ್ರೀಯ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಬಸವರಾಜ ಜಾಬಶೆಟ್ಟಿ ವಿಶ್ವೇಶ್ವರಯ್ಯನವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ಮಾಲಾರ್ಪಣೆಗೈದು ಮೆರವಣಿಗೆಗೆ ಚಾಲನೆ ನೀಡಿದರು.
ನಂತರ ಬಸವೇಶ್ವರ ವೃತ್ತದಿಂದ ಸರ್ ಎಂ ವಿಶ್ವೇಶ್ವರಯ್ಯ ಅವರ ಭಾವಚಿತ್ರದ ಮೆರವಣಿಗೆ ಜರುಗಿತು.
ಈ ಸಂದರ್ಭದಲ್ಲಿ ಅಸೋಷಿಯೆಶನ್ ಆಫ್ ಕನ್ಸಲಟಿಂಗ್ ಸಿವಿಲ್ ಇಂಜಿನಿಯರ್ಸ್, ಬೀದರನ ಅಧ್ಯಕ್ಷ ಹಿರಿಯ ಇಂಜಿನಿಯರರಾದ ಅಶೋಕಕುಮಾರ ಉಪ್ಪೆ, ಉಪಾಧ್ಯಕ್ಷ ಅನೀಲಕುಮಾರ ಔರಾದೆ, ಹಿರಿಯ ಇಂಜಿನಿಯರ್ ಸಲಹಾ ಸಮಿತಿಯ ಸದಸ್ಯ ವೀರಶೆಟ್ಟಿ ಮಣಗೆ, ಅತಿಥಿಯಾಗಿ ಗುರುನಾಥ ಕೊಳ್ಳುರ, ಪ್ರಕಾಶ ಟೊಣ್ಣೆ, ಕಾರ್ಯದರ್ಶಿ ದಿಲೀಪ ನಿಟ್ಟೂರೆ, ಖಜಾಂಚಿ ಓಂಕಾರ ಪಾಟೀಲ್, ಮಹೇಶ ಬುರೇಂದೆ, ಹಾವಶೇಟ್ಟಿ ಪಾಟೀಲ್, ಸಲಹಾ ಸಮಿತಿ ಸದಸ್ಯರಾದ ರಾಜಶೇಖರ ಕರಪೂರ, ಶಾಂತಕುಮಾರ ಚಂದಾ, ಸಚೀನ್ ಕೊಳ್ಳೂರ್, ಸಂದೀಪ ಕಾಡಾದೆ, ಮನೋಹರ ದೀಕ್ಷಿತ್, ಶಿವಕುಮಾರ ಪಾಟೀಲ, ಸಂತೋಷ ಸುಂಕದ ಪ್ರಲ್ಹಾದ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ಮೇರವಣಿಗೆಯೂ ನಗರದ ಗುರುದ್ವಾರಾ ಹತ್ತಿರದ ಲಾವಣ್ಯ ಕಲ್ಯಾಣ ಮಂಟಪಕ್ಕೆ ತಲುಪಿ ಮುಕ್ತಾಯಗೊಂಡಿತ್ತು. ನಂತರ ಸಾಯಂಕಾಲ ವೇದಿಕೆ ಕಾರ್ಯಕ್ರಮ ಜರುಗಿತು.