ಇಂಜಿನಿಯರ್ಸ್ ಡೇ ಆಚರಣೆ

ಲಕ್ಷ್ಮೇಶ್ವರ,ಸೆ.17: ಪಟ್ಟಣದ ಬಾಪೂಜಿ ಕೈಗಾರಿಕಾ ತರಬೇತಿ ಕೇಂದ್ರದಲ್ಲಿ ಗುರುವಾರ ಭಾರತ ರತ್ನ
ಸರ್.ಎಂ ವಿಶ್ವೇಶ್ವರಯ್ಯನವರ ಜಯಂತೋತ್ಸವವನ್ನು ಕನ್ನಡ ಸಾಹಿತ್ಯ ಪರಿಷತ್ತು ಮಾಸದ ಮಾತು ಎರಡರ ಕಾರ್ಯಕ್ರಮದ ಅಡಿ ಇಂಜಿನಿಯರ್ಸ್ ದಿನವನ್ನು ಆಚರಿಸಲಾಯಿತು.
ಅಧ್ಯಕ್ಷತೆ ವಹಿಸಿದ್ದ ತಾಲೂಕ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಈಶ್ವರ್ ಮೆಡ್ಲೇರಿಯವರು ಇಡೀ ಜಗತ್ತಿಗೆ ವಿಶ್ವೇಶ್ವರಯ್ಯನವರು ಆದರ್ಶಪ್ರಾಯವಾಗಿದ್ದು ಅವರ ಪ್ರಾಮಾಣಿಕತನ, ದೇಶಾಭಿಮಾನ ಇಂದಿನ ಯುವ ಪೀಳಿಗೆಗೆ ಮಾರ್ಗದರ್ಶನವಾಗಿವೆ. ಯುವಕರು ಯಾವುದೇ ವೃತ್ತಿಯನ್ನು ಕೈಗೊಂಡರು ಆ ವೃತ್ತಿಯಲ್ಲಿ ಪ್ರಾವೀಣ್ಯತೆ ಹೊಂದಲು ಸತತ ಪ್ರಯತ್ನ ಪರಿಶ್ರಮ ಮತ್ತು ಪ್ರಬುದ್ಧತೆಯನ್ನು ಸಾಧಿಸಿ ಅಚಲ ವಿಶ್ವಾಸದೊಂದಿಗೆ ಮುನ್ನಡೆಯಬೇಕು ಎಂದರು.
ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಕ್ಷೇತ್ರ ಶಿಕ್ಷಣಾಧಿಕಾರಿ ಜಿ.ಎಂ ಮುಂದಿನ ಮನಿ ಅವರು ಸರ್.ಎಂ ವಿಶ್ವೇಶ್ವರಯ್ಯನವರು ಅತ್ಯಂತ ಪ್ರಭುದ್ಧರಾಗಿ ತಮ್ಮ ವೃತ್ತಿಯಲ್ಲಿ ಪ್ರಾಮಾಣಿಕವಾಗಿ ಪಾರದರ್ಶಕವಾಗಿ ಕೈಗೊಂಡದ್ದರಿಂದ ಜಗತ್ತಿನ ಶ್ರೇಷ್ಠ ಇಂಜಿನಿಯರ್ ಆಗಿ ದೇಶದ ಕೀರ್ತಿ ಪತಾಕೆಯನ್ನು ಹಾರಿಸಿದರು ಯುವಕರು ಅವರ ಆದರ್ಶಗಳನ್ನು ರೂಡಿಸಿಕೊಳ್ಳಬೇಕು ಎಂದರು.
ಕಾರ್ಯಕ್ರಮದಲ್ಲಿ ಮಹೇಶ ಸೋಮಕ್ಕನವರ ಉಪನ್ಯಾಸ ನೀಡಿದರು. ಇದೆ ಸಂದರ್ಭದಲ್ಲಿ ಸಾಧಕರಾದ ಸೋಮಶೇಖರ ಕೆರಿಮನಿ, ಬಸವರಾಜ ಮಲ್ಲೂರ, ಎಚ್. ಡಿ ನಿಂಗರೆಡ್ಡಿ, ಎ.ಎಫ್ ನೀಲಗುಂದ ಇವರನ್ನು ಸನ್ಮಾನಿಸಲಾಯಿತು. ಪ್ರಾಚಾರ್ಯ ನಾಗರಾಜ ಕೆ, ಸೋಮಣ್ಣ ಉಪನಾಳ ಸೇರಿದಂತೆ ಸಿಬ್ಬಂದಿ ವರ್ಗದವರು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.