ಇಂಜಿನಿಯರಿಂಗ್ ಕ್ಷೇತ್ರದಲ್ಲಿ  ವಿಶ್ವೇಶ್ವರಯ್ಯ ಹೆಸರು ಅಮರ


(ಸಂಜೆವಾಣಿ ವಾರ್ತೆ)
ಬಳ್ಳಾರಿ, ಸೆ.15: ಕನ್ನಂಬಾಡಿ ಅಣೆಕಟ್ಟು ಕಟ್ಟಿ ಮಂಡ್ಯ ಮೈಸೂರು ಭಾಗದ ಬೀಳುಭೂಮಿಗಳಿಗೆ ನೀರೊದಗಿಸುವ ಮೂಲಕ ರೈತರ ಜೀವನಾಡಿಯಾದವರು ಸರ್.ಎಂ.ವಿಶ್ವೇಶ್ವರಯ್ಯ ಅವರು ಎಂದು ಕರ್ನಾಟಕ ರಾಜ್ಯ ಕ್ರಿಯಾಶೀಲ ಶಿಕ್ಷಕರ ವೇದಿಕೆ ಬಳ್ಳಾರಿ ಜಿಲ್ಲಾ ಘಟಕದ ಅಧ್ಯಕ್ಷ ರವಿಚೇಳ್ಳಗುರ್ಕಿ ಹೇಳಿದರು.
ಅವರು ಇಂದು
ತಾಲ್ಲೂಕಿನ ಸಂಜೀವರಾಯನಕೋಟೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಸರ್.ಎಂ.ವಿ ಅವರ 162ನೇ ಜಯಂತಿಯಲ್ಲಿ ಪಾಲ್ಗೊಂಡು ಮಾತನಾಡಿದರು. 1912 ರಿಂದ 1918 ರವರಗೆ ಮೈಸೂರು ರಾಜ್ಯದ ದಿವಾನರಾಗಿ  ಮೈಸೂರು ಬ್ಯಾಂಕ್, ಮೈಸೂರು ಶ್ಯಾಂಡಲ್ ಸೋಪ್, ಕರ್ನಾಟಕ ಸಾಹಿತ್ಯ ಪರಿಷತ್ ಸ್ಥಾಪಿಸುವುದರೊಂದಿಗೆ ಹಲವಾರು ಮಹತ್ತರ ಕೆಲಸಗಳನ್ನು ಮಾಡಿ ಬ್ರಿಟಿಷ್ ಸರ್ಕಾರದಿಂದ ಸರ್ ಪದವಿ ಹಾಗೂ ಭಾರತ ಸರ್ಕಾರದಿಂದ ಭಾರತ ರತ್ನ ಪ್ರಶಸ್ತಿ ಪಡೆದವರು ಎಂದು ಹೇಳಿದರು.
ಶಾಲೆಯ ಪ್ರತಿಭಾವಂತ ಮಕ್ಕಳಾದ ಉಮಾ ವಾಲ್ಮೀಕಿ, ಇಂದು, ಅಗಸರ ಮೇಘನಾ, ಕುರುಬರ ಮಣಿಕಂಠ,ಚೈತ್ರ, ಕೀರ್ತನ,ಸುಪ್ರಿಯಾ ಇವರಿಗೆ ಬಹುಮಾನ ವಿತರಿಸಲಾಯಿತು.
ಶಿಕ್ಷಕರಾದ ಮುನಾವರ ಸುಲ್ತಾನ,ದಿಲ್ಷಾದ್ ಬೇಗಂ, ಮೋದಿನ್ ಸಾಬ್,ಚನ್ನಮ್ಮ, ಸುಮತಿ, ದೈಹಿಕ ಶಿಕ್ಷಣ ಶಿಕ್ಷಕಿ ಸುಧಾ,ವೈಶಾಲಿ ಶ್ವೇತಾ, ಉಮ್ಮೆಹಾನಿ, ಶಶಮ್ಮ,ರಾಮಾಂಜಿನೇಯ ಮುಂತಾದವರು ಉಪಸ್ಥಿತರಿದ್ದರು