ಅಥಣಿ : ಜೂ.11:ಮಹಾತ್ಮರ ಹಿತ ನುಡಿಗಳಿಂದ ಮಾನವನ ಜೀವನದಲ್ಲಿ ಬದಲಾವಣೆ ಸಾಧ್ಯ, ಮಾನವನಾಗಿ ಬದುಕಿದ ಮೇಲೆ ಅಧಿಕಾರ ಆಯುಷ್ಯ ಅಂತಸ್ತು ಐಶ್ವರ್ಯ ಯಾವುದು ಶಾಶ್ವತವಲ್ಲ, ಇಡೀ ಜೀವನದಲ್ಲಿ ನಾವು ಮಾಡಿದಂತಹ ಪುಣ್ಯ ಕಾರ್ಯಗಳು ಮಾತ್ರ ಶಾಶ್ವತವಾಗಿರಲು ಸಾಧ್ಯ ಎಂದು ಶಾಸಕ ಲಕ್ಷ್ಮಣ ಸವದಿ ಹೇಳಿದರು
ಅವರು ತಾಲೂಕಿನ ನಂದಗಾಂವ ಗ್ರಾಮದ ಭೂ ಕೈಲಾಸ ಮಂದಿರದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಅವಜೀಕರ ಮಹಾರಾಜರ 23ನೇ ಪುಣ್ಯತಿಥಿ ಸಪ್ತಾಹ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡುತ್ತಿದ್ದರು, ಅವರು ಮುಂದೆ ಮಾತನಾಡುತ್ತಾ ಇಂಚಗೇರಿ ಮತ್ತು ಆರೂಢ ಸಂಪ್ರದಾಯ ಕೇವಲ ಒಂದು ಜಾತಿ, ಧರ್ಮಕ್ಕೆ ಮಾತ್ರ ಸೀಮಿತವಾಗದೆ ಇಡೀ ಮಾನವ ಕುಲದ ಉದ್ದಾರಕ್ಕೆ ಶ್ರಮಿಸುತ್ತಿವೆ ಮಾನವ ಜನ್ಮಕ್ಕೆ ಬಂದ ಮೇಲೆ ದಾನಧರ್ಮ ಮಾಡಿ ಸತ್ಕಾರ್ಯಗಳಲ್ಲಿ ತೊಡಗಬೇಕು. ನೊಂದವರ ಕಣ್ಣೀರು ಒರೆಸಲು ಮನ ಮಿಡಿಯುತ್ತಿರಬೇಕು. ಹುಟ್ಟಿದ ಮನುಷ್ಯ ಸಾಯಲೇಬೇಕು. ಜೀವನದಲ್ಲಿ ಎಲ್ಲರೂ ಆಧ್ಯಾತ್ಮದಲ್ಲಿ ಭಾಗಿಯಾಗಿ ನೆಮ್ಮದಿಯ ಜೀವನ ನಡೆಸಬೇಕು ಎಂದ ಅವರು ಈ ಆಶ್ರಮಕ್ಕೆ ಬೇಕಾದ ಮೂಲಭೂತ ಸೌಕರ್ಯಗಳನ್ನು ಒದಗಿಸಲು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಭರವಸೆ ನೀಡಿದರು.
ಕಾರ್ಯಕ್ರಮದ ಸಾನ್ನಿಧ್ಯ ವಹಿಸಿದ್ದ ಇಂಚಗೇರಿಯ ರೇವಣಸಿದ್ದ ಮಹಾರಾಜರು ಮಾತನಾಡಿ ಇಂದಿನ ಯುವಕರು ಆಧ್ಯಾತ್ಮದ ಹಾದಿಯಿಂದ ದೂರ ಸಾಗುತ್ತಿರುವ ಬಗ್ಗೆ ಕಳವಳ ವ್ಯಕ್ತಪಡಿಸಿದರು,
ಶೇಗುಣಸಿಯ ಡಾ.ಮಹಾಂತಪ್ರಭು ಸ್ವಾಮೀಜಿ ಆಶೀರ್ವಚನ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಭೂ ಕೈಲಾಸ ಮಂದಿರ ಮಠದ ಪೀಠಾಧ್ಯಕ್ಷ ಮಹಾದೇವ ಮಹಾರಾಜರು ವಹಿಸಿದ್ದರು.
ಈ ವೇಳೆ ಶೇಗುಣಸಿಯ ಹಣಮಂತ ಮಹಾರಾಜರು, ಯಕ್ಕಂಚಿಯ ಗುರುಪಾದ ಸ್ವಾಮೀಜಿ, ಸಂಜು ಅವಕ್ಕನವರ, ಶ್ರೀಶೈಲ ನಾರಗೊಂಡ ಸೇರಿದಂತೆ ಹಲವರು ಉಪಸ್ಥಿತರಿದ್ದರು