ಇಂಚಗೇರಿ ಮಠದಲ್ಲಿ ಹುತಾತ್ಮರ 25 ಪುಣ್ಯ ಸ್ಮರಣೋತ್ಸವ ಮಂಗಲ

ಕಲಬುರಗಿ,ಜು.23-ಶ್ರೀ ಕ್ಷೇತ್ರ ಇಂಚಗೇರಿ ಮಠದಲ್ಲಿ ಪ್ರತಿ ವರ್ಷದಂತೆ ಈ ವರ್ಷವು ಕೂಡ ಜು.16 ರಿಂದ 17 ರವರೆಗೆ ಎರಡು ದಿನಗಳ ಕಾಲ ಹುತಾತ್ಮರ 25 ನೇಯ ಪುಣ್ಯಸ್ಮರಣೆ ಸಪ್ತಾಹ ಕಾರ್ಯಕ್ರಮ ಅತ್ಯಂತ ವಿಜೃಂಭಣೆಯಿಂದ ಜರುಗಿತು.
16 ರಂದು ಸಂಜೆ 6=00 ಗಂಟೆಗೆ ಶ್ರೀಮಠದ ಶ್ರೀ ಸದ್ಗುರು ಸಮರ್ಥ ರೇವಣಸಿದ್ಧೇಶ್ವರ ಮಹಾರಾಜರು ಹುತಾತ್ಮರ ಗದ್ದುಗೆಯ ಹಾಗೂ ದಾಸಬೋಧ ಪೂಜೆಯೊಂದಿಗೆ ಪುಣ್ಯಸ್ಮರಣೆ ಸಪ್ತಾಹಕ್ಕೆ ಚಾಲನೆ ನೀಡಿದರು.
ಅಂದು ಸಂಜೆ ಅಭಿಷೇಕ ವಿಶೇಷ ಪೂಜೆ ಪುರಾಣ-ಪ್ರವಚನ, ರಾತ್ರಿ ಜಾಗರಣೆ ನಿಮಿತ್ಯ ಶ್ರೀ ಮಾಧವಾನಂದ ಪ್ರಭೂಜಿ ಭಜನಾ ಮಂಡಳಿಯಿಂದ ಭಜನಾ ಕಾರ್ಯಕ್ರಮ ಜರುಗಿತು.
17 ರಂದು ಬೆಳಿಗ್ಗೆ 11=00 ಗಂಟೆಗೆ ಶ್ರೀ ಸಮರ್ಥ ರಾಮದಾಸ ಮಹಾರಾಜರ ದಾಸಬೋದ ಪಠಣ ಭಜನಾಪದ, ಪುರಾಣ-ಪ್ರವಚನ ಶ್ರೀ ಸದ್ಗುರು ಸಮರ್ಥ ರೇವಣಸಿದ್ದೇಶ್ವರ ಮಹಾರಾಜರ ಆಶೀರ್ವಚನ ಹಾಗೂ ಪುಷ್ಪವೃಷ್ಠಿಯೊಂದಿಗೆ ಮಂಗಲಗೊಂಡಿತು. ಈ ಸಪ್ತಾಹ ಕಾರ್ಯಕ್ರಮದಲ್ಲಿ ಶಂಕರಪ್ಪ ಮಹಾರಾಜರು. ತುಕಾರಾಮ ಮಹಾರಾಜರು ನಂದೇಶ್ವರ, ಭೀಮಣ್ಣ ಮಹರಾಜರು, ಸದಾಶಿವ ಮಹಾರಾಜರು, ವಿವೇಕಾನಂದ ಅರಳಿ, ಭಾಸ್ಕರ ಪೂಜೆರಿ ಹಾಗೂ ವಿವಿಧೆಡೆಯಿಂದ ಆಗಮಿಸಿದ ಶ್ರೀಮಠದ ಸದ್ಭಕ್ತರು ಪಾಲ್ಗೊಂಡಿದ್ದರು.