ಇಂಚಗೇರಿ ಮಠದಲ್ಲಿ ಮಾಧವಾನಂದ ಪ್ರಭೂಜಿಯವರ 43ನೇ ಪುಣ್ಯತಿಥಿ ಸಪ್ತಾಹ ಮೇ.29ರಿಂದ ಆರಂಭ

ಕಲಬುರಗಿ,ಮೇ.28-ವಿಜಪುರ ಜಿಲ್ಲೆಯ ಚಡಚಣ ತಾಲ್ಲೂಕಿನ ಸುಕ್ಷೇತ್ರ ಇಂಚಗೇರಿ ಮಠದಲ್ಲಿ ಸಮರ್ಥ ಸದ್ಗುರು ಮಾಧವಾನಂದ ಪ್ರಭೂಜಿಯವರ 43ನೇ ಪುಣ್ಯತಿಥಿ ಆಧ್ಯಾತ್ಮ ಸಪ್ತಾಹವು ಮೇ. 29ರಿಂದ 31ರವರೆಗೆ 3 ದಿನಗಳವರೆಗೆ ನಡೆಯಲಿದೆ.
ಮೇ.29ರಂದು ಶ್ರೀಮಠದ ಶ್ರೀ ಸಮರ್ಥ ಸದ್ಗುರು ರೇವಣಸಿದ್ದೇಶ್ವರ ಮಹಾರಾಜರ ಅಮೃತ ಹಸ್ತದಿಂದ ಶ್ರೀಮಾಧವಾನಂದ ಪ್ರಭೂಜಿ ಹಾಗೂ ವಿವಿಧ ಶ್ರೀಗಳ ಗದ್ದುಗೆಗಳ ಶೇಜಾರತಿ ಹಾಗೂ ರಾಮದಾಸ ಮಹಾರಾಜರ ದಾಸಬೋದ ಮತ್ತು ವೀಣಾ ಪೂಜೆಯೊಂದಿಗೆ ಸಪ್ತಾಹ ಆರಂಭವಾಗಲಿದೆ.
ಮೇ.31 ರಂದು ಶ್ರೀ ಸಮರ್ಥ ಸದ್ಗುರು ರೇವಣಸಿದ್ದೇಶ್ವರ ಮಹಾರಾಜರ ಆಶಿರ್ವಚನ ಹಾಗೂ ಪುಷ್ಪ ವೃಷ್ಠಿಯೊಂದಿಗೆ ಮಂಗಲಗೊಳ್ಳುವದು ಸಪ್ತಾಹದ ಅಂಗವಾಗಿ ವಿವಿಧ ಆಧ್ಯಾತ್ಮಿಕ ಕಾರ್ಯಕ್ರಮ ಜರುಗಲಿವೆ. ಈ ಸಪ್ತಾಹದಲ್ಲಿ ವಿವಿಧ ಮಠಾಧೀಶರು,ಸಾಹಿತಿಗಳು, ರಾಜಕೀಯ ಮುಖಂಡರು, ಜನಪದ ಕಲಾವಿದರು, ಸರ್ವೋದಯ ಧುರೀಣರು ಭಾಗವಹಿಸುವ ಪುಣ್ಯಸ್ಮರಣೆ ಸಪ್ತಾಹ ಕಾರ್ಯಕ್ರಮದಲ್ಲಿ ಭಾಗವಹಿಸಲು ಹುಬ್ಬಳ್ಳಿ, ಕಲಬುರ್ಗಿ. ಖವಟಕೊಪ್ಪ, ಆಥಣಿ, ಕನ್ನಾಳ, ಕೊಟ್ಟಲಗಿ, ತೆಲಸಂಗ ಹಾಗೂ ಮಹಾರಾಷ್ಟ್ರದ ಖೋಜಾನವಾಡಿ, ನಂದೇಶ್ವರ, ವಳಸಂಗ, ಜುನೋನಿಯಿಂದ ದಿಂಡಿ ಪಲ್ಲಕ್ಕಿ ಪಾದಯಾತ್ರೆಯ ಮೂಲಕ ಆಗಮಿಸುವರು ಕರ್ನಾಟಕ -ಮಹಾರಾಷ್ಟ್ರದ ಮತ್ತು ವಿವಿಧ ಕಡೆಗಳಿಂದ ಸಹಸ್ರಾರು ಭಕ್ತರು ಆಗಮಿಸುವರು ಎಂದು ಭಾರತೇಶ ಹಾಸಿಲಕರ್ ತಿಳಿಸಿದ್ದಾರೆ.