ಇಂಗ್ಲೆಂಡ್ ಭಾರತೀಯ ರಾಯಭಾರಿ ಕಚೇರಿಗೆ ಭದ್ರತೆ

ಖಾಲಿಸ್ತಾನ್ ಬೆಂಬಲಿಗರಿಂದ ಕಳೆದ ಮೂರು ದಿನಗಳಲ್ಲಿ ಎರಡು ಬಾರಿ ಕಾನೂನು ಉಲ್ಲಂಘಿಸಿ ಪ್ರತಿಭಟನೆ ನಡೆಸಿದ ಹಿನ್ನೆಲೆಯಲ್ಲಿ ಇಂಗ್ಲೆಂಡ್‌ನಲ್ಲಿರುವ ಭಾರತೀಯ ರಾಯಭಾರಿ ಕಚೇರಿಗೆ ಹೆಚ್ಚಿನ ಬಿಗಿ ಭದ್ರತೆ ಒದಗಿಸಲಾಗಿದೆ ಎಂದು ವಿದೇಶಾಂಗ ಕಾರ್ಯದರ್ಶಿ ಜೇಮ್ಸ್ ಕ್ಲೆವರ್ಲಿ ತಿಳಿಸಿದ್ದಾರೆ. ಭಾರತೀಯ ರಾಯಭಾರ ಕಚೇ ಸಿಬ್ಬಂದಿ ಮೇಲಿನ ಹಿಂಸಾಚಾರದ ಕೃತ್ಯಗಳು “ಸ್ವೀಕಾರಾರ್ಹವಲ್ಲ. ಈ ಹಿನ್ನೆಲೆಯಲ್ಲಿ ಭದ್ರತೆಯನ್ನು ಹೆಚ್ಚಳ ಮಾಡಲಾಗಿದೆ ಎಂದು ಹೇಳಿದ್ದಾರೆ.
“ಭಾರತೀಯ ರಾಯಭಾರ ಕಚೇರಿ ಬಳಿ ಭದ್ರತೆಯನ್ನು ಪರಿಶೀಲಿಸಲು ಟ್ರೋಪಾಲಿಟನ್ ಪೊ?ಲೀಸ್‌ನೊಂದಿಗೆ ಕೆಲಸ ಮಾಡುತ್ತಿದ್ದೇವೆ ಮತ್ತು ರಾಯಭಾರ ಕಛೇರಿಯ ಸಿಬ್ಬಂದಿಯ ಸುರಕ್ಷತೆ ಖಚಿತಪಡಿಸಿಕೊಳ್ಳಲು ಅಗತ್ಯವಿರುವ ಬದಲಾವಣೆಗಳನ್ನು ಮಾಡುತ್ತೇವೆ” ಎಂದಿದ್ದಾರೆ. ಸದಾ ರಾಯಭಾರ ಕಚೇರಿಯ ಭದ್ರತೆಗೆ ಆದ್ಯತೆ ನೀಡಲಾಗಿದೆ. ಎಲ್ಲಾ ವಿದೇಶಿ ಕಾರ್ಯಾಚರಣೆಗಳನ್ನು ಅತ್ಯಂತ ಗಂಭೀರವಾಗಿ ಪರಿಗಣಿಸುತ್ತೇವೆ ಮತ್ತು ಈ ರೀತಿಯ ಘಟನೆಗಳನ್ನು ನಡೆಯುವುದನ್ನು ತಡೆಯುತ್ತೇವೆ ಎಂದು ಅವರು ತಿಳಿಸಿದ್ದಾರೆ.
ಭಾರತೀಯ ರಾಯಭಾರ ಕಚೇರಿ ಬಳಿ ಖಾಲಿಸ್ತಾನ್ ಪರ ಬೆಂಬಲಿಗರು ಹೌಸ್ ಆಫ್ ಕಾಮನ್ಸ್‌ನಲ್ಲೂ ವಿಧ್ವಂಸಕ ಕೃತ್ಯಗಳನ್ನು ನಡೆಸಿದ್ದರು. “ಖಲಿಸ್ತಾನಿ ಗೂಂಡಾಗಳ” ವಿರುದ್ಧ ಕ್ರಮದ ಜೊತೆಗೆ ಭಾರತದ ರಾಜತಾಂತ್ರಿಕ ಸಿಬ್ಬಂದಿಯ ಸುರಕ್ಷತೆಗೂ ಆದ್ಯತೆ ನೀಡಲಾಗಿದೆ ಎಂದರು. ಬ್ರಿಟನ್‌ನಲ್ಲಿ ಎಲ್ಲಾ ಖಲಿಸ್ತಾನಿ ಸಂಘಟನೆಗಳನ್ನು ನಿಷೇಧಿಸುವ ಅಗತ್ಯವಿದೆ ಎಂದಿರುವ ಲೇಬರ್ ಸಂಸದ ಗರೆಥ್ ಥಾಮಸ್ ಅವರು “ಪುನರಾವರ್ತನೆಯಾಗದಂತೆ ನೋಡಿಕೊಳ್ಳಲು ಏನು ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದಾರೆ ಎಂದು ಅವರು ಪ್ರಶ್ನಿಸಿದ್ದಾರೆ. ಭಾರತೀಯ ಧ್ವಜವನ್ನು ಕಿತ್ತುಹಾಕಲು ಪ್ರಯತ್ನಿಸಿದ ಖಲಿಸ್ತಾನ್ ಪರ ಪ್ರತಿಭಟನಾಕಾರರೊಂದಿಗೆ ಹೊಡೆದಾಟದ ನಂತರ ಕಾರ್ಯಾಚರಣೆಯಲ್ಲಿ ಇಬ್ಬರು ಭದ್ರತಾ ಸಿಬ್ಬಂದಿ ಗಾಯಗೊಂಡರು. ಧ್ವಜಸ್ತಂಭಗಳನ್ನು ಬಳಸಿ ಕಿಟಕಿಗಳನ್ನು ಒಡೆದು ಹಾಕಲಾಯಿತು. ಪ್ರತಿಭಟನೆಯಲ್ಲಿ ಕಟ್ಟಡಕ್ಕೆ ಬಣ್ಣ ಮತ್ತು ಮೊಟ್ಟೆಗಳನ್ನು ಎಸೆದು ಅಕ್ರೋಶ ಹೊರಹಾಕಿದ್ದರು.