ಇಂಗ್ಲೆಂಡ್ ಪ್ರಧಾನಿಯಾಗಿ ಲಿಜ್ ಟ್ರಸ್ ಆಯ್ಕೆ ಖಚಿತ

ಲಂಡನ್, ಸೆ.೫-ಇಂಗ್ಲೆಂಡ್‌ನ ಪ್ರಧಾನಿಯಾಗಿ ಲಿಜ್ ಟ್ರಸ್ ಆಯ್ಕೆಯಾಗುವುದು ಬಹುತೇಕ ಖಚಿತವಾಗಿದೆ.
ಪ್ರಧಾನಿ ಸ್ಥಾನಕ್ಕೆ ಭಾರತೀಯ ಸಂಜಾತ ರಿಷಿ ಸುನಕ್ ಹಾಗೂ ಟ್ರಸ್ ಮಧ್ಯೆ ಪೈಪೋಟಿ ನಡೆದಿತ್ತು. ಪ್ರತಿ ಹಂತದ ಲಿಜ್ ಟ್ರಸ್‌ರವರು ರಿಷಿಗಿಂತ ಮುನ್ನಡೆ ಸಾಧಿಸಿದ್ದರು. ಇಂದು ಸಂಜೆ ವೇಳೆಗೆ ಅಧಿಕೃತ ಫಲಿತಾಂಶ ಹೊರಬೀಳಲಿದೆ.
ಭಾರತೀಯ ಮೂಲದ ರಿಷಿ ಸುನಕ್ ಅವರಿಗಿಂತ ಮುಂದೆ ಇರುವ ಲಿಜ್ ಟ್ರಸ್ ಪ್ರಧಾನಿಯಾಗಿ ಆಯ್ಕೆಯಾದರೆ ಥೆರೆಸಾ ಮೇ ಮತ್ತು ಮಾರ್ಗರೆಟ್ ಥ್ಯಾಚರ್ ನಂತರ ಯುಕೆಯ ಮೂರನೇ ಮಹಿಳಾ ಪ್ರಧಾನ ಮಂತ್ರಿ ಎನ್ನುವ ಹಿರಿಮೆಗೆ ಪಾತ್ರರಾಗಲಿದ್ದಾರೆ.
ಬೋರಿಸ್ ಜಾನ್ಸನ್ ಉತ್ತರಾಧಿಕಾರಿ ಆಯ್ಕೆಗೆ ಕನ್ಸರ್ವೇಟಿವ್ ಪಕ್ಷದ ಸದಸ್ಯರು ಚಲಾವಣೆ ಮಾಡಿದ ಫಲಿತಾಶಂವನ್ನು ಇಂದು ಪ್ರಕಟವಾಗಲಿದ್ದು ಬಹುತೇಕ ಲಿಜ್ ಟೆಸ್ ಅವರ ಆಯ್ಕೆ ಖಚಿತ ಎನ್ನಲಾಗಿದೆ.
ಇಂಗ್ಲೆಂಡ್ ಪ್ರಸ್ತುತ ಜೀವನ ನಿರ್ವಹಣೆ ವೆಚ್ಚ ಮತ್ತು ಆರ್ಥಿಕ ಬಿಕ್ಕಟ್ಟು ಎದುರಿಸುತ್ತಿರುವ ಸಮಯದಲ್ಲಿ ನೂತನ ಪ್ರಧಾನಿಯಾಗಿ ಅಧಿಕಾರ ವಹಿಸಿಕೊಳ್ಳುವವರ ಮೇಲೆ ಹೆಚ್ಚಿನ ಜವಾಬ್ದಾರಿ ಬಿದ್ದಿದೆ.
೪೭ ವರ್ಷ ವಯಸ್ಸಿನ ಲಿಜ್ ಟ್ರಸ್ ಅವರು ಚಲಾವಣೆಯಾಗಿರುವ ಒಟ್ಟು ಮತದಾನದಲ್ಲಿ ೪೨ ವರ್ಷದ ಶ್ರೀ ಸುನಕ್ ಅವರಿಗಿಂತ ಸತತವಾಗಿ ಮುಂದಿದ್ದಾರೆ.
ಬೋರಿಸ್ ಜಾನ್ಸನ್ ಸರ್ಕಾರ, ಹಗರಣಗಳು ಮತ್ತು ರಾಜೀನಾಮೆಗಳ ನಂತರ ಪ್ರಧಾನಿ ಸ್ಥಾನಕ್ಕೆ ರಾಜೀನಾಮೆ ಘೋಷಿಸಿದ ನಂತರ, ಜುಲೈನಲ್ಲಿ ಮುಂದಿನ ಪ್ರಧಾನಿ ಅಯ್ಕೆಗೆ ಸ್ಪರ್ಧೆ ಪ್ರಾರಂಭವಾಗಿತ್ತು,ಎಂಟು ವಾರಗಳ ಪ್ರಚಾರದ ನಂತರ ಅಂಚೆ ಮತ್ತು ಆನ್‌ಲೈನ್ ಮತದಾನ ಮುಚ್ಚಲಾಗಿತ್ತು.