ಇಂಗ್ಲೆಂಡ್ ನ ಶಾಲೆಗಳ ಮ್ಯೂಸಿಕ್ ಶಿಕ್ಷಣದ ಪಠ್ಯಕ್ರಮದಲ್ಲಿ ಮಲೈಕಾ ಅರೋರಾ ರ ’ಮುನ್ನಿ ಬದ್ನಾಮ್ ಹುಯೀ’ ಹಾಡೂ ಸೇರ್ಪಡೆ

ಇಂಗ್ಲೆಂಡ್ ನ ’ಡಿಪಾರ್ಟ್ ಮೆಂಟ್ ಆಫ್ ಎಜುಕೇಶನ್’ ಒಂದು ಹೊಸ ಮ್ಯೂಸಿಕ್ ಪಠ್ಯಕ್ರಮವನ್ನು ಲಾಂಚ್ ಮಾಡಿದೆ.
ಅದರಲ್ಲಿ ಭಾರತೀಯ ಸಂಗೀತ ಜಗತ್ತಿನ ಕೆಲವು ಹಾಡುಗಳನ್ನು ರೆಫರೆನ್ಸ್ ರೂಪದಲ್ಲಿ ಉಲ್ಲೇಖಿಸಿದೆ. ಇದರಲ್ಲಿ ಮಲೈಕಾ ಅರೋರರ ಚಾರ್ಟ್ ಬಸ್ಟರ್ ಸಾಂಗ್ ಮುನ್ನಿ ಬದ್ನಾಮ್ ಹುಯೀ ಕೂಡ ಸೇರಿಸಲ್ಪಟ್ಟಿದೆ.
ಈ ಎಲ್ಲಾ ಪಠ್ಯಕ್ರಮವನ್ನು ಯುನೈಟೆಡ್ ಕಿಂಗ್ಡಮ್ ನ ೧೫ ಮ್ಯೂಸಿಕ್ ಎಜುಕೇಶನ್ ಸ್ಪೆಷಲಿಸ್ಟ್, ಟೀಚರ್ಸ್, ಎಜುಕೇಶನ್ ಲೀಡರ್ಸ್, ಸಂಗೀತಗಾರರು ಸೇರಿ ರೆಡಿ ಮಾಡಿದ್ದಾರೆ. ಶಾಲೆಗಳಲ್ಲಿ ಹೈಕ್ವಾಲಿಟಿ ಮ್ಯೂಸಿಕ್ ಎಜುಕೇಶನ್ ನೀಡುವುದಕ್ಕೆ ಇವನ್ನೆಲ್ಲ ಡಿಸೈನ್ ಮಾಡಲಾಗಿದೆ.
ಸಲ್ಮಾನ್ ಖಾನ್ ರ ಫಿಲ್ಮ್ ದಬಂಗ್ ಇದರ ಹಾಡು ಮುನ್ನೀ ಬದ್ನಾಮ್ ಹುಯೀ ಹೊರತಾಗಿ ಎ ಆರ್ ರಹಮಾನ್ ಕಂಪೋಸ್ ಮಾಡಿದ ಜೈ ಹೋ, ಅನುಷ್ಕಾ ಶಂಕರ್ ಅವರ ಇಂಡಿಯನ್ ಸಮರ್ ಮತ್ತು ಕಿಶೋರಿ ಅಮೋನ್ಕರ್ ಅವರ ಸಹೇಲೀ ರೆ ಪಠ್ಯಕ್ರಮದಲ್ಲಿ ಸೇರಿದೆ.
ಮುನ್ನೀ ಬದ್ನಾಮ್ ಹುಯೀ ಕುರಿತು ಪಠ್ಯಕ್ರಮದಲ್ಲಿ ಇದರ ನೋಟ್ ಬರೆಯುತ್ತಾ ಬಾಲಿವುಡ್ ಫಿಲ್ಮ್ ಗಳಲ್ಲಿ ಐಟಮ್ ನಂಬರನ್ನು ಯಾವುದೇ ಫ್ಲಾಟ್ ಇಲ್ಲದೆ ಸೇರಿಸಲಾಗುತ್ತದೆ ಎಂದು ಹೇಳಿದ್ದಾರೆ.

ಗಂಗೂಬಾಯಿ ಕಾಠಿಯಾವಾಡಿ ಫಿಲ್ಮ್ ಮುಂದಿಟ್ಟು ಸಂಜಯ್ ಲೀಲಾ ಬನ್ಸಾಲಿ ಮತ್ತು ದೀಪಿಕಾ ಪಡುಕೋಣೆ ನಡುವೆ ಕೋಲ್ಡ್ ವಾರ್ ಇಲ್ಲವಂತೆ!

ಇತ್ತೀಚೆಗೆ ಒಂದು ಸುದ್ದಿ ಕೇಳಿ ಬಂದಿತ್ತು. ಏನೆಂದರೆ ನಟಿ ದೀಪಿಕಾ ಪಡುಕೋಣೆ ಮತ್ತು ಸಂಜಯ್ ಲೀಲಾ ಬನ್ಸಾಲಿ ಅವರ ನಡುವೆ ಕೋಲ್ಡ್ ವಾರ್ ನಡೆಯುತ್ತಿದೆ ಎಂದು.
ಯಾಕೆಂದರೆ ಬನ್ಸಾಲಿಯವರು ಗಂಗೂಬಾಯಿ ಕಾಠಿಯಾವಾಡಿ ಫಿಲ್ಮ್ ನಲ್ಲಿ ಲೀಡ್ ರೋಲ್ ದೀಪಿಕಾಗೆ ಆಫರ್ ಮಾಡಿಲ್ಲ ,ಅದನ್ನು ಆಲಿಯಾ ಭಟ್ಟ್ ಗೆ ನೀಡಿದ್ದ ಕಾರಣ ಈ ಕೋಲ್ಡ್ ವಾರ್ ಎನ್ನಲಾಗಿತ್ತು.
ಈ ಕಾರಣ ದೀಪಿಕಾ ಅವರ ಬೇಸರವನ್ನು ತಣಿಸಲು ಸಂಜಯ್ ಲೀಲಾ ಬನ್ಸಾಲಿ ಅವರು ದೀಪಿಕಾರಿಗೆ ಫಿಲ್ಮ್ ನಲ್ಲಿ ಒಂದು ಡ್ಯಾನ್ಸ್ ನಂಬರ್ ಆಫರ್ ಮಾಡಿದ್ದರಂತೆ. ದೀಪಿಕಾ ಪಡುಕೋಣೆ ಇದನ್ನು ತಿರಸ್ಕರಿಸಿದ್ದರು ಎನ್ನಲಾಗಿತ್ತು.

ಆದರೆ ಈಗ ಈ ಕೋಲ್ಡ್ ವಾರ್ ವದಂತಿ ಪೂರ್ಣವಾಗಿ ತಿರಸ್ಕರಿಸಲ್ಪಟ್ಟಿದೆ. ಯಾಕೆಂದರೆ ರಣವೀರ್ ಮತ್ತು ದೀಪಿಕಾ ನಿರಂತರವಾಗಿ ಸಂಜಯ್ ಲೀಲಾ ಬನ್ಸಾಲಿ ಅವರ ಸಂಪರ್ಕದಲ್ಲಿದ್ದಾರೆ. ಸಂಜಯ್ ಲೀಲಾ ಅವರಿಗೆ ಕೊರೊನಾ ಸೋಂಕು ತಗಲಿದಾಗಲೂ ದೀಪಿಕಾ ಮೆಸೇಜ್ ಮೂಲಕ ಆರೋಗ್ಯ ವಿಚಾರಿಸುತ್ತಿದ್ದು ನಿರಂತರವಾಗಿ ಅವರ ಜೊತೆ ಸಂಪರ್ಕದಲ್ಲಿದ್ದಾರೆ ಎಂದು ಭನ್ಸಾಲಿ ವಲಯ ಹೇಳಿದೆ.

ಒಂದು ವರ್ಷದ ನಂತರ ಅಕ್ಷಯಕುಮಾರ್ ಅಭಿನಯದ ’ಅತರಂಗೀ ರೇ’ ಶೂಟಿಂಗ್ ಪೂರ್ಣ

ಅಕ್ಷಯ್ ಕುಮಾರ್, ಸಾರಾ ಅಲಿಖಾನ್ ಮತ್ತು ಧನುಷ್ ಅಭಿನಯದ ಅತರಂಗೀ ರೇ ಶೂಟಿಂಗ್ ಪೂರ್ಣಗೊಂಡಿದೆ. ಈ ಮಾಹಿತಿ ಯನ್ನು ಸಾರಾ ಅಲಿ ಖಾನ್ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ. ಹಾಗೂ ಅಕ್ಷಯ್ ಧನುಷ್ ಜೊತೆಗಿನ ಕೆಲವು ಫೋಟೋಗಳನ್ನು ಅಭಿಮಾನಿಗಳಿಗಾಗಿ ಪೋಸ್ಟ್ ಮಾಡಿದ್ದಾರೆ .
ಜೊತೆಗೆ ನಿರ್ದೇಶಕ ಆನಂದ್ ಎಲ್ ರಾಯ್ ಅಕ್ಷಯ್, ಧನುಷ್ ಮತ್ತು ಫಿಲ್ಮ್ ನ ಎಲ್ಲರಿಗಾಗಿ ಒಂದು ಸ್ಪೆಷಲ್ ಇಮೋಷನ್ ನೋಟ್ ಕೂಡ ಫೋಟೋಸ್ ಜೊತೆಗೆ ಶೇರ್ ಮಾಡಿದ್ದಾರೆ .
ಈ ಫಿಲ್ಮ್ ನ ಶೂಟಿಂಗ್ ಸುಮಾರು ಒಂದು ವರ್ಷದ ನಂತರ ಪೂರ್ಣಗೊಂಡಿದೆ.


ಸಾರಾ ಬರೆದಿದ್ದಾರೆ- “ಒಂದು ವರ್ಷದ ನಂತರ ಅತರಂಗೀ ರೇ ಶೂಟಿಂಗ್ ಪೂರ್ಣಗೊಂಡಿದೆ. ನನಗೆ ಇದರಲ್ಲಿ ಅವಕಾಶ ನೀಡಿದ್ದಕ್ಕಾಗಿ ಆನಂದ್ ಎಲ್ ರಾಯ್ ಅವರಿಗೆ ಬಹಳ ಬಹಳ ವಂದನೆಗಳು .ಒಂದು ಉತ್ತಮ ಟೀಮಿನ ಜೊತೆ ಸುಂದರ ನೆನಪುಗಳ ಒಂದು ವರ್ಷಕ್ಕಾಗಿ ಎಲ್ಲರಿಗೂ ಶುಕ್ರಿಯ. ನನಗೆ ಸದಾ ಹೆಲ್ಪ್, ಪ್ರೋತ್ಸಾಹ ,ಮಾರ್ಗದರ್ಶನ ನೀಡಿದ್ದಕ್ಕಾಗಿ ಧನುಷ್ ಸರ್ ನಿಮಗೆ ಧನ್ಯವಾದ. ಈ ಜರ್ನಿಯಲ್ಲಿ ನಿಮಗಿಂತ ಒಳ್ಳೆಯ ಪಾರ್ಟ್ನರ್ ಬೇರೆ ಯಾರೂ ಆಗಿರಲು ಸಾಧ್ಯವಿರಲಿಲ್ಲ. ಸೌತ್ ಇಂಡಿಯಾ ಫುಡ್ ಗಾಗಿಯೂ ನಿಮಗೆ ಶುಕ್ರಿಯಾ…” ಎಂದಿದ್ದಾರೆ.
ಅತ್ತ ಅಕ್ಷಯ್ ಕೂಡ ಅತರಂಗೀ ರೇ ಶೂಟಿಂಗ್ ಪೂರ್ಣಗೊಂಡ ಪ್ರಯುಕ್ತ ತನ್ನ ಫೋಟೋಸ್ ಶೇರ್ ಮಾಡಿದ್ದಾರೆ. ಈ ಫೋಟೋದಲ್ಲಿ ಜಾದೂಗಾರ್ ಫೋಸ್ ನಲ್ಲಿ ಒಂದು ಕೈಯಲ್ಲಿ ಇಸ್ಪಿಟ್ ಎಲೆ ಹಿಡಿದಿದ್ದಾರೆ.
ಅಕ್ಷಯ ಬರೆದಿದ್ದಾರೆ- ಇಂದು ಅತರಂಗೀ ರೇ ಫಿಲ್ಮ್ ನ ಕೊನೆಯ ದಿನ. ನಾನು ಆನಂದ್ ರಾಯ್ ತಯಾರಿಸಿದ ಈ ಜಾದುಗಾಗಿ ನಿಮ್ಮನ್ನು ಇನ್ನೂ ಹೆಚ್ಚಿನ ನಿರೀಕ್ಷೆ ಮಾಡಿಸುವುದಕ್ಕೆ ಸಾಧ್ಯವಿಲ್ಲ. ನನ್ನ ಕೋ ಸ್ಟಾರ್ ಸಾರಾ ಅಲಿ ಖಾನ್ ಮತ್ತು ಧನುಷ್ ಕೂಡ ಈ ಸುಂದರ ಫಿಲ್ಮ್ ನ ಭಾಗವಾಗಿ ಇರುವುದಕ್ಕಾಗಿ ಅವರಿಗೂ ಶುಕ್ರಿಯ ಎಂದಿದ್ದಾರೆ.

ಈ ಫಿಲ್ಮ್ ನಲ್ಲಿ ಅಕ್ಷಯ್ ಮತ್ತು ಧನುಷ್ ಮೊದಲ ಬಾರಿಗೆ ಜೊತೆಯಾಗಿ ಅಭಿನಯಿಸಿದ್ದಾರೆ.