ಇಂಗ್ಲೆಂಡ್ ಅಬ್ಬರ, ಶ್ರೀಲಂಕಾ ತತ್ತರ, ಬಟ್ಲರ್ ಭರ್ಜರಿ ಶತಕ

ಶಾರ್ಜಾ,ನ 1- ಟಿ-20 ವಿಶ್ವಕಪ್ ಟೂರ್ನಿಯಲ್ಲಿಂದು ಶ್ರೀಲಂಕಾ ವಿರುದ್ಧ ಇಂಗ್ಲೆಂಡ್ 26 ರನ್ ಗಳಿಂದ ಜಯಗಳಿಸಿತು.
164 ರನ್ ಗಳ ಗುರಿಯನ್ನು ಬೆನ್ನಹತ್ತಿದ ಶ್ರೀಲಂಕಾ 19 ಓವರ್ ಗಳಲ್ಲಿ 137 ರನ್ ಗಳಿಗೆ ತನ್ನೆಲ್ಲಾ ವಿಕೆಟ್ ಕಳೆದುಕೊಂಡು ಸೋಲು ಅನುಭವಿಸಿತು.
ಲಂಕಾ ಪರ ರಾಜಪಕ್ಸಾ 26, ಶನಕಾ 26 ವನಿಂದು 34 ರನ್ ಗಳಿಸಿದ್ದನ್ನು ಹೊರತುಪಡಿಸಿ ಇಂಗ್ಲೆಂಡ್ ಬೌಲಿಂಗ್ ದಾಳಿಗೆ ದಿಟ್ಡ ಉತ್ತರ ‌ನೀಡಲು ವಿಫಲರಾದರು.
ಮೊಯಿನ್ ಅಲಿ , ರಶೀದ್, ಜೋರ್ಡಾನ್ ತಲಾ ಎರಡು ವಿಕೆಟ್ ಪಡೆದು ಮಿಂಚಿದರು.
ಟಾಸ್ ಸೋತು ಮೊದಲು ಇಂಗ್ಲೆಂಡ್ ಮೊದಲು ಬ್ಯಾಟ್ ಮಾಡಿತು.ಆರಂಭಿಕ ಆಟಗಾರ ಜೋಸ್ ಬಟ್ಲರ್ ಅಜೇಯ ಭರ್ಜರಿ ಶತಕದ ನೆರವಿನಿಂದ 20 ಓವರ್‌ಗಳಲ್ಲಿ ನಾಲ್ಕು ವಿಕೆಟ್ ಕಳೆದುಕೊಂಡು 163 ರನ್ ಗಳಿಸಿತು.
ಈ ಮೂಲಕ ಟಿ-20 ಕ್ರಿಕಟ್ ನಲ್ಲಿ ಮೊದಲ‌ ಶತಕ ಬಾರಿಸಿದರು. ಅಷ್ಟೇ ಅಲ್ಲ ಎಲ್ಲ ಮಾದರಿಯಲ್ಲೂ ಶತಕ ಬಾರಿಸಿದ ಇಂಗ್ಲೆಂಡ್ ನ ಮೊದಲ ಆಟಗಾರ ಎನಿಸಿದರು.
ಬಟ್ಲರ್ 67 ಎಸೆತಗಳಲ್ಲಿ ಆರು ಬೌಂಡರಿ ಆರು ಸಿಕ್ಸರ್ ನೆರವಿನಿಂದ ಅಜೇಯ 101 ರನ್ ಬಾರಿಸಿದರು.
ಮಲಾನ್ 6 ರನ್ ಗಳಿಸಿದರೆ, ಬೈರ್ ಸ್ಟೋ ಶೂನ್ಯ ನಿರ್ಗಮಿಸಿದರು. ಮೊರ್ಗನ್ 40 ರನ್ ಗಳಿಸಿದ್ದರಿಂದ ಇಂಗ್ಲೆಂಡ್ ಸವಾಲಿನ ಮೊತ್ತ ದಾಖಲಿಸಲು ಸಾಧ್ಯವಾಯಿತು.