ಇಂಗ್ಲೆಂಡ್‌ನಿಂದ ಬಂದಿಳಿದ ೯ ಮಂದಿಗೆ ಸೋಂಕು

ಹೈದರಾಬಾದ್(ತೆಲಂಗಾಣ),ಡಿ.೨೬- ಇಂಗ್ಲೆಂಡ್‌ನಿಂದ ಹೈದರಾಬಾದ್‌ಗೆ ಆಗಮಿಸಿದ ೯ ಮಂದಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ.
ಇಂಗ್ಲೆಂಡ್‌ನಲ್ಲಿ ಕೊರೊನಾ ಸೋಂಕು ರೂಪಾಂತರಗೊಂಡು ಅತ್ಯಂತ ವೇಗವಾಗಿ ಸೋಂಕು ಹರಡುತ್ತಿದ್ದು, ಇಂಗ್ಲೆಂಡ್ ನಿಂದ ಬಂದವರ ಸೋಂಕಿತರ ಸಂಖ್ಯೆ ೧೬ಕ್ಕೆ ಏರಿದೆ.
ಡಿ. ೯ ರಂದು ಇಂಗ್ಲೆಂಡ್‌ನಿಂದ ಆಗಮಿಸಿದ್ದ ಈ ವ್ಯಕ್ತಿಗಳನ್ನು ಪರೀಕ್ಷೆಗೊಳಪಡಿಸಲಾಗಿತ್ತು, ಈಗ ವರದಿ ಬಂದಿದ್ದು, ಸೋಂಕು ತಗುಲಿರುವುದು ಖಚಿತವಾಗಿದೆ. ಇದು ರೂಪಾಂತರಗೊಂಡಿರುವ ಕೊರೊನಾ ಸೋಂಕನ್ನು ಪತ್ತೆ ಹಚ್ಚುವ ಸಲುವಾಗಿ ಹೆಚ್ಚಿನ ಮಾಹಿತಿ ಪಡೆಯಲು ಪ್ರಯೋಗಾಲಯಕ್ಕೆ ರವಾನಿಸಲಾಗಿದೆ.
ಇಂಗ್ಲೆಂಡ್‌ನಿಂದ ೧,೨೦೦ ಮಂದಿ ಇಂಗ್ಲೆಂಡ್‌ಗೆ ವಾಪಸ್ಸಾಗಿದ್ದಾರೆ. ಇದುವರೆಗೆ ೯೨೬ ಮಂದಿಯನ್ನು ಪರೀಕ್ಷೆಗೆ ಗುರಿಪಡಿಸಲಾಗಿದ್ದು, ೧೬ ಮಂದಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ.
ಈ ಜನರ ಜತೆ ಸಂಪರ್ಕ ಹೊಂದಿದ್ದ ಇತರ ೭೬ ಮಂದಿಯನ್ನು ಕ್ವಾರಂಟೈನ್‌ಗೆ ಒಳಪಡಿಸಲಾಗಿದೆ. ೧೬ ಮಂದಿಯ ವರದಿ ೨ ದಿನದಲ್ಲಿ ಲಭ್ಯವಾಗಲಿದ್ದು, ಇದು ಕೊರೊನಾ ಸೋಂಕು ರೂಪಾಂತರಗೊಂಡ ವೈರಾಣು ಎಂಬುದನ್ನು ಖಚಿತಪಡಿಸಲಿದೆ ಎಂದು ತೆಲಂಗಾಣ ಆರೋಗ್ಯ ನಿರ್ದೇಶಕ ಡಾ. ಶ್ರೀನಿವಾಸ ರಾವ್ ತಿಳಿಸಿದ್ದಾರೆ.
ಕಳೆದವಾರ ಇಂಗ್ಲೆಂಡ್‌ನಲ್ಲಿ ರೂಪಾಂತರಗೊಂಡ ಹೊಸ ಕೊರೊನಾ ಸೋಂಕು ಕಾಣಿಸಿಕೊಂಡಿತ್ತು. ಇದು ಸಾರ್ಸ್-ಕೋವಿಡ್-೨ ಗಿಂತ ವೇಗವಾಗಿ ಬೇರೆಯವರಿಗೆ ಸೋಂಕು ತಗುಲಿದೆ ಎಂದು ತಜ್ಞರು ವರದಿ ನೀಡಿದ್ದರು.
ಇದುವರೆಗೆ ತೆಲಂಗಾಣದಲ್ಲಿ ಕಳೆದ ೧ ತಿಂಗಳ ಅವಧಿಯಲ್ಲಿ ೧,೧೪೮ ಮಂದಿ ಇಂಗ್ಲೆಂಡ್‌ನಿಂದ ಆಗಮಿಸಿದ್ದು, ಈ ಪೈಕಿ ೧,೦೪೦ ಜನರನ್ನು ಪತ್ತೆ ಹಚ್ಚಲಾಗಿದೆ. ೯೮೨ ಮಂದಿಯನ್ನು ಕ್ವಾರಂಟೈನ್‌ಗೆ ಒಳಪಡಿಸಲಾಗಿದೆ ಎಂದು ಆಂಧ್ರಪ್ರದೇಶ ಆರೋಗ್ಯ ಇಲಾಖೆ ತಿಳಿಸಿದೆ.