ಇಂಗ್ಲೆಂಡ್‌ನಿಂದ ಮಂಡ್ಯಕ್ಕೆ ಮತ್ತೆ 9 ಮಂದಿ ಆಗಮನ

ಮಂಡ್ಯ : ಅಮೆರಿಕಾ, ಇಂಗ್ಲೆಂಡ್‌ನಿಂದ ಬಂದಿರುವ ಜಿಲ್ಲೆಯ ಎಂಟು ಜನರ ವರದಿ ನೆಗೆಟಿವ್ ಬಂದಿದೆ. ಅಂತೆಯೆ ಬುಧವಾರ ಮತ್ತೆ ಜಿಲ್ಲೆಯ 9 ಜನರು ಆಗಮಿಸಿದ್ದಾರೆಂದು ಆರೋಗ್ಯ ಇಲಾಖೆಗೆ ಮಾಹಿತಿ ಬಂದಿದೆ.
ಮಳವಳ್ಳಿಯ ಇಬ್ಬರು, ಮಂಡ್ಯ ತಾಲೂಕಿನ ನಾಲ್ವರು ಮತ್ತು ಪಾಂಡವಪುರ ಇಬ್ಬರ ಗಂಟಲ ದ್ರವ ಸಂಗ್ರಹಿಸಿ ಪರೀಕ್ಷೆಗೊಳಪಡಿಸಲಾಗಿತ್ತು. ಈ ಎಲ್ಲರ ವರದಿ ನೆಗೆಟಿವ್ ಬಂದಿದೆ. ಆದರೂ 14 ದಿನ ಕ್ವಾರಂಟೈನ್ ಮಾಡಲಾಗಿದ್ದು, ಪ್ರತಿದಿನ ತಪಾಸಣೆ ನಡೆಯಲಿದೆ.
ಇನ್ನು ಕೇಂದ್ರ ಆರೋಗ್ಯ ಇಲಾಖೆಯಿಂದ ಬಂದಿರುವ ಮಾಹಿತಿಯಂತೆ ವಿದೇಶದಿಂದ ಜಿಲ್ಲೆಯ 9 ಜನರು ಬಂದಿದ್ದಾರೆ. ಈ ಪೈಕಿ ಮೂವರು ಮಂಡ್ಯ ತಾಲೂಕಿನವರಾಗಿದ್ದಾರೆ. ಇವರನ್ನು ಕ್ವಾರಂಟೈನ್ ಮಾಡಲಾಗಿದೆ. ಇಬ್ಬರ ವಿಳಾಸ ಪತ್ತೆಯಾಗಿಲ್ಲ. ಒಬ್ಬರು ವಾಪಾಸ್ ಹೋಗಿದ್ದಾರೆ. ಉಳಿದ ಮೂವರ ಗಂಟಲ ದ್ರವ ಸಂಗ್ರಹಿಸಿ ಪರೀಕ್ಷೆಗೊಳಸಲಾಗಿದೆ.
ಇನ್ನು ಬುಧವಾರ ಜಿಲ್ಲೆಯ 15 ಜನರಿಗೆ ಸೋಂಕು ಕಾಣಿಸಿಕೊಂಡಿದೆ. ಅಂತೆಯೆ 16 ಜನರು ಸೋಂಕಿನಿಂದ ಚೇತರಿಸಿಕೊಂಡು ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. 202 ಸಕ್ರಿಯ ಪ್ರಕರಣಗಳಿವೆ.