ಇಂಗ್ಲೆಂಡ್‌ನಲ್ಲಿ ನಟಿ ಪೂಜಾ ಸುತ್ತಾಟ

ಮುಂಬೈ, ಜು ೨೩- ಬಾಲಿವುಡ್‌ಟಾಲಿವುಡ್‌ನಲ್ಲಿ ಬ್ಯುಸಿಯಾಗಿರುವ ಬಹುಭಾಷಾ ನಟಿ, ಕರಾವಳಿ ಬೆಡಗಿ ಪೂಜಾ ಹೆಗ್ಡೆ ಸದ್ಯ ಇಂಗ್ಲೆಂಡ್ ನಲ್ಲಿ ಕಾಲಕಳೆಯುತ್ತಿದ್ದಾರೆ.

ನಾಗ ಚೈತನ್ಯ ನಾಯಕನಾಗಿ ನಟಿಸಿದ್ದ ‘ಒಕ ಲೈಲಾ ಕೋಸಂ’ ಚಿತ್ರದ ಮೂಲಕ ಟಾಲಿವುಡ್‌ಗೆ ಲಗ್ಗೆ ಇಟ್ಟ ಪೂಜಾ ಇತ್ತೀಚೆಗೆ ದಳಪತಿ ವಿಜಯ್‌ಜೊತೆ ಬೀಸ್ಟ್ ಜೊತೆ ಪರದೆ ಹಂಚಿಕೊಂಡು ಜನಮನ ಗೆದ್ದಿದ್ದರು. ಅಲ್ಲದೇ ದೊಡ್ಡ ಸ್ಟಾರ್ ನಟರುಗಳ ಜೊತೆ ಸ್ಕ್ರೀನ್ ಹಂಚಿಕೊಳ್ಳುತ್ತಿರುವ ಈ ಚೆಲುವೆ ಸಖತ್‌ಬ್ಯುಸಿಯಾಗಿದ್ದಾರೆ.

ಈ ಮಧ್ಯೆ ತಮ್ಮ ಬಿಡುವಿನ ಸಮಯದಲ್ಲಿ ಪೂಜಾ ತನ್ನ ಕುಟುಂಬದೊಂದಿಗೆ ಇಂಗ್ಲೆಂಡ್‌ಪ್ರವಾಸದಲ್ಲಿದ್ದಾರೆ. ಈ ವೇಳೆ ತೆಗೆದ ಪೋಟೋಗಳನ್ನು ಪೂಜಾ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಸಖತ್ ವೈರಲ್ ಆಗಿದೆ. ಪೂಜಾ ಹೆಗ್ಡೆ ಸದ್ಯ ವಿರಾಮ ದಿನಗಳನ್ನು ಹಾಯಾಗಿ ಕಳೆಯುತ್ತಿದ್ದಾರೆ. ಅಲ್ಲದೇ ಅವರು ತಮ್ಮ ಕುಟುಂಬದ ಜೊತೆ ಇಂಗ್ಲೆಂಡ್ಗೆ ಹಾರಿದ್ದು, ಕುಟುಂಬದ ಜೊತೆಗಿನ ಸಂಸತದ ಕ್ಷಣಗಳನ್ನು ಅಭಿಮಾನಿಗಳ ಜೊತೆ ಶೇರ್ ಮಾಡಿಕೊಳ್ಳುತ್ತಿದ್ದಾರೆ.

ಪೂಜಾ ಹೆಗ್ಡೆ ಅಕ್ಟೋಬರ್ ೧೩, ೧೯೯೦ ರಂದು ಮುಂಬೈನಲ್ಲಿ ಜನಿಸಿದರು. ತಾಯಿ ಮತ್ತು ತಂದೆ ಕರ್ನಾಟಕದ ಮಂಗಳೂರಿನವರಾದರೂ ಮುಂಬೈನಲ್ಲಿ ನೆಲೆಸಿದ್ದರು. ಪೂಜಾ ಹೆಗ್ಡೆ ಅವರ ಮಾತೃಭಾಷೆ ತುಳು ಆದರೆ ಅವರು ಇಂಗ್ಲಿಷ್, ಹಿಂದಿ, ಮರಾಠಿ, ಸ್ವಲ್ಪ ಕನ್ನಡ ಮತ್ತು ತಮಿಳು ಮಾತನಾಡಬಲ್ಲರು. ಪೂಜಾ ಭಾರತೀಯ ನೃತ್ಯದಲ್ಲೂ ತರಬೇತಿ ಪಡೆದಿದ್ದರು. ಮುಂಬೈನ ಎಂಎಂಕೆ ಕಾಲೇಜಿನಲ್ಲಿ ವಾಣಿಜ್ಯ ವಿಷಯದಲ್ಲಿ ಉನ್ನತ ಶಿಕ್ಷಣ ಪಡೆದಿದ್ದಾರೆ. ಇತ್ತೀಚೆಗೆ ರಾಧೆ ಶ್ಯಾಮ್, ಆಚಾರ್ಯ, ಬೀಸ್ಟ್ ಸಿನಿಮಾಗಳಲ್ಲಿ ಪೂಜಾ ಹೆಗ್ಡೆ ನಟಿಸಿದ್ದಾರೆ. ಮೂರು ಸಿನಿಮಾಗಳು ಸೂಲುಂಡು ಬಳಿಕ ಐರನ್ ಲೆಗ್ ಎಂದು ಟ್ರೋಲ್ ಮಾಡಲಾಗುತ್ತಿದೆ.