ಇಂಗಳಗಿ ಗ್ರಾಮದಲ್ಲಿ ಎಸಿ ರಾಹುಲ ಶಿಂಧೆ ಗ್ರಾಮ ವಾಸ್ತವ್ಯ

ಇಂಡಿ :ಮಾ.21:ತಾಲೂಕಿನ ಇಂಗಳಗಿ ಗ್ರಾಮದಲ್ಲಿ ಶನಿವಾರ ಎಸಿ ರಾಹುಲ ಶಿಂಧೆ ಗ್ರಾಮವಾಸ್ತವ್ಯ ನಡೆಸಿ ಸಾರ್ವಜನಿಕರಿಂದ ಅಹವಾಲುಗಳನ್ನು ಸ್ವೀಕರಿಸಿದರು.

ಇಂಗಳಗಿ ಗ್ರಾಮದಲ್ಲಿನ ಸಮಸ್ಯೆಗಳಿಗೆ ಸ್ಥಳದಲ್ಲಿಯೇ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಇಡಿ ದಿನ ಸಾರ್ವಜನಿಕರಿಂದ ಕುಂದು ಕೊರತೆಗಳನ್ನು ಆಲಿಸಿ ಜನರಿಂದ ಯಾವ ಸಮಸ್ಯೆಗಳಿವೆ ಎಂಬುದನ್ನು ಕಂಡುಕೊಂಡು ಪರಿಹಾರ ನೀಡಿದರು.ಗ್ರಾಮಕ್ಕೆ ಸರಬರಾಜು ಆಗುವ ಕುಡಿಯುವ ನೀರು ದುರ್ವಾಸನೆಯಿಂದ ಕೂಡಿದೆ, ಗ್ರಾಮದ ಜನತೆಗೆ ಶುದ್ದಕುಡಿಯುವ ನೀರು ಒದಗಿಸಿಕೊಡಲು ಗ್ರಾಮಸ್ಥರು ಎಸಿ ಅವರಲ್ಲಿ ಮನವಿ ಮಾಡಿಕೊಂಡರು.

ಎಸಿ ಅವರ ಜತೆ ತಹಶೀಲ್ದಾರ ಚಿದಂಬರ ಕುಲಕರ್ಣಿ ಅವರು ಜನರಿಂದ ಗ್ರಾಮದಲ್ಲಿನ ಕುಡಿಯುವ ನೀರು,ಮಾವಿಹಳ್ಳಿ ಗ್ರಾಮದಲ್ಲಿನ ಮುಸ್ಲೀಮ ಸ್ಮಶಾನ ಜಾಗ,ಇಂಗಳಗಿ-ಆಳೂರ ನಡುವಿನ ರಸ್ತೆ ಡಾಂಬರಿಕರಣ,ಚರಂಡಿ,ಗ್ರಾಮದಲ್ಲಿನ ಒಳರಸ್ತೆಗಳ ದುರಸ್ತಿ ಸೇರಿದಂತೆ ಗ್ರಾಮಸ್ಥರಿಂದ ಸುಮಾರು 69 ಅರ್ಜಿಗಳನ್ನು ಸ್ವೀಕರಿಸಲಾಯಿತು. ಇದಕ್ಕೆ ಸ್ಥಳದಲ್ಲಿಯೇ ಉಪಸ್ಥಿತರಿದ್ದ ಆಯಾ ಇಲಾಖೆಯ ತಾಲೂಕ ಮಟ್ಟದ ಅ„ಕಾರಿಗಳು ಉತ್ತರಿಸಿ ಸಮಸ್ಯೆಗೆ ಪರಿಹಾರ ಸೂಚಿಸಿದರು.

ದಶಕಗಳಿಂದ ಕಂದಾಯ ಇಲಾಖೆಯ ಕಚೇರಿಗಳಿಗೆ ಅಲೆದಾಡಿ ಸಂಕಷ್ಟ ಪಟ್ಟಿರುವ ಬಡವಜನರಿಗೆ,ವೃದ್ದರಿಗೆ ಅನುಕೂಲ ಕಲ್ಪಿಸಿಕೊಟ್ಟಿರುವ ಈ ಗ್ರಾಮ ವಾಸ್ತವ್ಯದಲ್ಲಿ 3 ಜನರಿಗೆ ಸಂಧ್ಯಾಸುರಕ್ಷಾ ಯೋಜನೆಯ ಪಿಂಚಣಿ ಮಂಜೂರು ಆದೇಶ ಪತ್ರ ನೀಡಲಾಯಿತು.

ತಾಲೂಕ ದಂಡಾ„ಕಾರಿ ಸೇರಿದಂತೆ ಕಂದಾಯ ನಿರೀಕ್ಷಕರು, ಗ್ರಾಮ ಲೆಕ್ಕಾದಿಕಾರಿಗಳು, ತಾಲೂಕ ಮಟ್ಟದ ಅ„ಕಾರಿಗಳು,ಪಿಡಿಒ ಗ್ರಾಮದಲ್ಲಿನ ಸಮಸ್ಯೆ ಆಲಿಸಿ ಅರ್ಜಿ ಸ್ವೀಕರಿಸುವುದರಲ್ಲಿ ಕಾರ್ಯಪ್ರವರ್ತರಾದರು.ಗ್ರಾಮ ವಾಸ್ತವ್ಯ ಸಂದರ್ಭದಲ್ಲಿ ಗ್ರಾಮದಲ್ಲಿನ ರೈತರ ಪಹಣಿಯಲ್ಲಿನ ಲೋಪದೋಷ ಸರಿಪಿಡಿಸುವುದು,ಗ್ರಾಮದ ಎಲ್ಲ ಅರ್ಹವ್ಯಕ್ತಿಗಳಿಗೆ ಪಿಂಚಣಿ ಸೌಲಭ್ಯ ದೊರಿಯುತ್ತಿರುವ ಬಗ್ಗೆ ಖಚಿತಪಡಿಸಿ ಒಂದು ವೇಳೆ ಪಿಂಚಣಿ ಸೌಲಭ್ಯ ಪಡೆಯದೆ ಇರುವ ವ್ಯಕ್ತಿಗಳಿಗೆ ದಾಖಲೆ ಸಂಗ್ರಹಿಸಿ ಸ್ಥಳದಲ್ಲಿಯೇ ಆದೇಶ ನೀಡಲು ಕ್ರಮ ಕೈಗೊಂಡರು.ಹದ್ದುಬಸ್ತು,ಪೆÇೀಡಿ,ಪೆÇೀಡಿಮುಕ್ತ ಗ್ರಾಮ,ಗ್ರಾಮದ ಅಂಗನವಾಡಿ,ಪ್ರಾಥಮಿಕ,ಮಾಧ್ಯಮಿಕ ಶಾಲೆ ಸೇರಿದಂತೆ ಶಿಕ್ಷಣ ವ್ಯವಸ್ಥೆಯ ಬಗ್ಗೆ ಸಮಗ್ರ ಪರಿಶೀಲನೆ ನಡೆಸಿದರು.

ತಹಶೀಲ್ದಾರ ಚಿಂದಬರ ಕುಲಕರ್ಣಿ, ಗ್ರೇಡ್-2 ತಹಶೀಲ್ದಾರ ಆರ್.ರೇವಡಿಗಾರ,ತಾಪಂ ಇಒ ಸಂಜಯ ಖಡಗೇಕರ,ಕಂದಾಯ ನಿರೀಕ್ಷಕ ಬಸವರಾಜ ರಾವೂರ,ಗ್ರಾಪಂ ಅಧ್ಯಕ್ಷ ಹಣಮಂತ ಗುಡ್ಲ,ಉಪಾಧ್ಯಕ್ಷೆ ಸುರೇಕಾ ಬಾರಾಣೆ,ತೋಟಗಾರಿಕೆ ಅ„ಕಾರಿ ಆರ್.ಟಿ.ಹಿರೇಮಠ, ಕೃಷಿ ಅ„ಕಾರಿ ಮಹಾದೇವಪ್ಪ ಏವುರ,ಡಾ.ಕುಂಬಾರ ಸೇರಿದಂತೆ ತಾಲೂಕ ಮಟ್ಟದ ಅ„ಕಾರಿಗಳು ಈ ಸಂದರ್ಭದಲ್ಲಿ ಇದ್ದರು.