ಆ. 6 ರಂದು ಎಲ್ಲಾ ಶಾಲೆಗಳಲ್ಲಿ ಸಾಮೂಹಿಕ ಕೈ ಸ್ವಚ್ಚತಾ ಅಭಿಯಾನ

ದಾವಣಗೆರೆ ಜು.28: ಶುದ್ದ ಕುಡಿಯುವ ನೀರು, ಶುದ್ದ ಆಹಾರ, ಶುದ್ದ ಪರಿಸರ ಹಾಗೂ ಶುದ್ದ ಕೈಗಳಿಂದ ಆರೋಗ್ಯವಂತರಾಗಿರಲು ಸಾಧ್ಯವಾಗಿದ್ದು ಈ ನಿಟ್ಟಿನಲ್ಲಿ ಎಲ್ಲಾ ಶಾಲೆಗಳಲ್ಲಿ ಮಕ್ಕಳಿಗೆ ಶುದ್ದ ಕೈಗಳಿಂದ ಆರೋಗ್ಯ ವೃದ್ದಿ ಅಭಿಯಾನದಡಿ ಆಗಸ್ಟ್ 6 ರಂದು ಎಲ್ಲಾ ಶಾಲೆಗಳಲ್ಲಿ ಮಕ್ಕಳಿಂದ ಕೈ ಸ್ವಚ್ಚಗೊಳಿಸಿಕೊಳ್ಳುವ ಕಾರ್ಯಕ್ರಮವನ್ನು ಜಿಲ್ಲೆಯಾದ್ಯಂತ ಹಮ್ಮಿಕೊಳ್ಳಲಾಗುತ್ತದೆ ಎಂದು ಜಿಲ್ಲಾಧಿಕಾರಿ ಶಿವಾನಂದ ಕಾಪಶಿ ತಿಳಿಸಿದರು. ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಏರ್ಪಡಿಸಲಾದ ಆರೋಗ್ಯ ಇಲಾಖೆಯ ಜಿಲ್ಲಾ ಮಟ್ಟದ ಸಮನ್ವಯ ಸಮಿತಿ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಐದು ವರ್ಷದೊಳಗಿನ ಮಕ್ಕಳು ಯಾವುದೇ ಕಾರಣಕ್ಕೂ ತೀವ್ರ ಅತಿಸಾರ ಭೇದಿಯಿಂದ ಮರಣ ಹೊಂದಬಾರದೆAದು ಆಗಸ್ಟ್ 1 ರಿಂದ 15 ರ ವರೆಗೆ ಪಾಕ್ಷಿಕವನ್ನಾಗಿ ಆಚರಣೆ ಮಾಡಲಾಗುತ್ತದೆ. ಈ ವೇಳೆ ಅತಿಸಾರ ಭೇದಿಯಾಗದಂತೆ ಹಾಗೂ ಭೇದಿಯಾದಾಗ ಯಾವ ರೀತಿ ನಿಯಂತ್ರಣ ಮಾಡಬೇಕೆಂದು ಪಾಕ್ಷಿಕದ ವೇಳೆ ಸಾರ್ವಜನಿಕರು ಸೇರಿದಂತೆ ತಾಯಂದಿರುಗಳಿಗೆ ಜಾಗೃತಿ ಮೂಡಿಸಲಾಗುತ್ತದೆ.ಪಾಕ್ಷಿಕದ ಅಂಗವಾಗಿ ಆಗಸ್ಟ್ 6 ರಂದು ಕೈಯನ್ನು ಯಾವ ರೀತಿ ತೊಳೆದುಕೊಳ್ಳಬೇಕೆಂಬ ಬಗ್ಗೆ ಮಕ್ಕಳಲ್ಲಿ ಅರಿವು ಮೂಡಿಸಲು ಸರ್ಕಾರಿ ಸೇರಿದಂತೆ ಎಲ್ಲಾ ಖಾಸಗಿ ಶಾಲೆಗಳಲ್ಲಿಯು ಈ ಅಭಿಯಾನವನ್ನು ಕೈಗೊಳ್ಳಲಾಗುತ್ತಿದ್ದು ಎಲ್ಲಾ ಶಾಲೆಗಳಲ್ಲಿ ಪ್ರಾತ್ಯಕ್ಷತೆಯನ್ನು ಏರ್ಪಡಿಸಲು ಸೂಚನೆ ನೀಡಿದರು.
 ಅದೇ ರೀತಿ ರಾಷ್ಟಿçÃಯ ಜಂತುಹುಳು ನಿವಾರಣಾ ದಿನವನ್ನು ಆಗಸ್ಟ್ 10 ರಂದು ಆಚರಿಸಲಾಗುತ್ತಿದ್ದು ಇದರ ಅಂಗವಾಗಿ ಎಲ್ಲಾ ಮಕ್ಕಳಿಗೂ ಜಂತುಹುಳು ನಿವಾರಣೆ ಮಾಡಲು ಸಾಮೂಹಿಕವಾಗಿ ಅಲ್ಬೆಂಡಝೋಲ್ ಮಾತ್ರೆಗಳನ್ನು 19 ವರ್ಷದೊಳಗಿನ ಎಲ್ಲರಿಗೂ ನುಂಗಿಸಲಾಗುತ್ತದೆ. ಈ ಕಾರ್ಯಕ್ರಮವನ್ನು ಎಲ್ಲಾ ಶಾಲಾ, ಕಾಲೇಜುಗಳು ಹಾಗೂ ಹಾಸ್ಟೆಲ್‌ಗಳಲ್ಲಿ ಹಮ್ಮಿಕೊಳ್ಳಲು ಸೂಚನೆ ನೀಡಿದರು.ಅತಿಸಾರ ಭೇದಿ ನಿಯಂತ್ರಣ ಹಾಗೂ ಜಂತುಹುಳು ನಿವಾರಣಾ ಕಾರ್ಯಕ್ರಮಗಳಿಂದ ಅಲೆಮಾರಿ, ಕಾರ್ಮಿಕರಾಗಿ ವಲಸೆ ಬಂದವರ ಮಕ್ಕಳು ಸಹ ಇದರಿಂದ ವಂಚಿತರಾಗದAತೆ ನೋಡಿಕೊಳ್ಳಬೇಕೆಂದು ಸೂಚನೆ ನೀಡಿದರು.