ಆ. 4 ಹಾಗೂ 5 ರಂದು ಕಲಬುರಗಿ ನಗರಕ್ಕೆ ನೀರು ಸರಬರಾಜಿನಲ್ಲಿ ವ್ಯತ್ಯಯ

ಕಲಬುರಗಿ.ಆ.03: ನಗರಕ್ಕೆ ನೀರು ಸರಬರಾಜು ಮಾಡುವ ಬೆಣ್ಣೆತೋರಾ ನದಿಯ ಮೇಲ್ಭಾಗದಲ್ಲಿ ಸತತವಾಗಿ ಮಳೆಯಾಗುತ್ತಿರುವುದರಿಂದ ನದಿಗೆ ಮಣ್ಣು ಹಾಗೂ ಕಲ್ಮಶ್ ಮಿಶ್ರಿತ ನೀರು ಹರಿದು ಬರುತ್ತಿರುವ ಹಿನ್ನೆಲೆಯಲ್ಲಿ ತಾತ್ಕಾಲಿಕವಾಗಿ ಬೆಣ್ಣೆತೋರಾದಲ್ಲಿರುವ (ಕುರಿಕೋಟಾ) ಪಂಪ್‍ಗಳನ್ನು ಸ್ಥಗಿತಗೊಳಿಸಲಾಗಿದೆ. ಆದ್ದರಿಂದ ಇದೇ ಆಗಸ್ಟ್ 4 ಹಾಗೂ 5 ರಂದು ಕಲಬುರಗಿ ನಗರದ ಈ ಕೆಳಕಂಡ ಬಡಾವಣೆಗಳಲ್ಲಿ ನೀರು ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದ್ದು, ಆದ್ದರಿಂದ ಸಾರ್ವಜನಿಕರು ಇದಕ್ಕೆ ಸಹಕರಿಸಬೇಕೆಂದು ಕಲಬುರಗಿ ಕೆಯುಡಬ್ಲ್ಯೂಎಸ್‍ಎಂಪಿ-ಕೆಯುಐಡಿಎಫ್‍ಸಿ ಯೋಜನಾ ಅನುಷ್ಠಾನ ಘಟಕದ ಕಾರ್ಯಪಾಲಕ ಅಭಿಯಂತರರು ತಿಳಿಸಿದ್ದಾರೆ.
ಗಾಜಿಪುರ, ಮಕ್ತಂಪುರ ಭಾಗಶಃ, ಹೋಳಿಕಟ್ಟಾ, ಜಗತ್(ಮೇಲಿನ ಮತ್ತು ಕೆಳಗಿನ ಬಡಾವಣೆ) ಸುಂದರ ನಗರ, ಬಾಪುನಗರ, ಜಯನಗರ, ಜಾಗೃತಿ ಕಾಲೋನಿ, ರಾಜಾಪುರ, ವೀರೇಂದ್ರ ಪಾಟೀಲ್ ಬಡಾವಣೆ, ಶಿವಾಜಿ ನಗರ, ಭವಾನಿನಗರ, ಗಾಂಧಿನಗರ, ಗಂಜ್ ಕಾಲೋನಿ, ಮಹಡಿ ಮೊಹಲ್ಲಾ, ಮೋಮಿನಪುರ (ಎ ಆಂಡ್ ಬಿ), ಸದರ ಮೊಹಲ್ಲಾ, ಐವಾನ್–ಇ- ಶಾಹಿ, ಗುಲ್ಲಾಬಾವಡಿ, ಪೋಲಿಸ್ ಕಾಲೋನಿ, ಪ್ರಶಾಂತ ನಗರ (ಎ&ಬಿ) ಶಹಬಜಾರ, ತಾಜನಗರ, ಸುವರ್ಣನಗರ, ಆಶ್ರಯ ಕಾಲೋನಿ, ಚನ್ನವೀರ ನಗರ ಹಾಗೂ ಇನ್ನೀತರ ಬಡಾವಣೆಗಳಲ್ಲಿ ನೀರು ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ.