ಆ.4ರಂದು ಖ್ಯಾತ ಹಿನ್ನೆಲೆ ಗಾಯಕ ಕಿಶೋರ ಕುಮಾರ 94ನೇ ಹುಟ್ಟುಹಬ್ಬ

ಕಲಬುರಗಿ,ಆ.2: ನಗರದ ಕಲಾಮಂಡಲದಲ್ಲಿ ಹಿಂದಿ ಚಿತ್ರರಂಗದ ಖ್ಯಾತ ಹಿನ್ನೆಲೆ ಗಾಯಕ ಕಿಶೋರ ಕುಮಾರ ಅವರ 94ನೇ ಹುಟ್ಟುಹಬ್ಬವನ್ನು ಸುಕಿ ಸಾಂಸ್ಕೃತಿಕ ಸಂಸ್ಥೆಯು ಕಲಬುರಗಿಯ ಕಿಶೋರ್ ಕುಮಾರ ಎಂದೆ ಪ್ರಖ್ಯಾತಿ ಪಡೆದಿರುವ ರಮೇಶ ಜೋಷಿ ಅವರೊಂದಿಗೆ ಸುಕಿ ತಂಡದ ಗಾಯಕರು ಕಿಶೋರ್ ಕುಮಾರ ಹಾಡುಗಳನ್ನು ಹಾಡುವುದರ ಮೂಲಕ ಅವರ ಹುಟ್ಟುಹಬ್ಬವನ್ನು ಆಚರಿಸುತ್ತಿದ್ದಾರೆ.
4.8.2023ರ ಸಂಜೆ 5.30ಕ್ಕೆ ಕಿಶೋರ್ ಅವರ ಹುಟ್ಟುಹಬ್ಬವನ್ನು ಕೇಕ್ ಕತ್ತರಿಸುವ ಮೂಲಕ ಸತ್ಯಕಾಮ ಪತ್ರಿಕೆಯ ಸಂಪಾದಕರಾದ ಪಿ ಎಂ ಮಣ್ಣೂರು ಅವರು ಕಾರ್ಯಕ್ರಮಕ್ಕೆ ಚಾಲನೆ ಕೊಡುತ್ತಾರೆ.
ಮುಖ್ಯ ಅತಿಥಿಯಾಗಿ ಕಲ್ಬುರ್ಗಿ ಕಿಶೋರ ಕುಮಾರ ಎಂದೆ ಖ್ಯಾತಿ ಹೊಂದಿರುವ ರಮೇಶ ಜೋಷಿ ಕಿಶೋರ ಅವರ ಸುಮದುರ ಹಿಂದಿ ಗೀತೆಗಳನ್ನು ಹಾಡಲಿದ್ದಾರೆ. ಖ್ಯಾತ ಉದ್ಯಮಿ ಹಾಗೂ ಪರಿಸರವಾದಿ ವಿನೋದ ಪಂಡಿತ ಆಗಮಿಸಲಿದ್ದಾರೆ. ಜೊತೆಗೆ ವಿವೇಕಾನಂದ ವಿದ್ಯಾನಿಕೇತನದ ಪ್ರಾಚಾರ್ಯರಾದ ಸಿದ್ದಪ್ಪ ಭಗವತಿ ಅವರು ಆಗಮಿಸಳಿದ್ದು
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸುಕಿ ಸಾಂಸ್ಕೃತಿಕ ಸಂಸ್ಥೆಯ ಅಧ್ಯಕ್ಷರಾದ ಕಿರಣ್ ಪಾಟೀಲ್ ವಹಿಸುವರು.
ನಂತರ ಎ ಶಾಮ ಮಸ್ತಾನಿ ಹಾಡುಗಳ ಸಂಭ್ರಮಾಚರಣೆಯಲ್ಲಿ ಆಹ್ವಾನಿತಾ ಗಾಯಕರಾಗಿ ಗಾನಲಹರಿಯ ಲಷ್ಮಿಕಾಂತ ಸೀತನೂರ. ಕಾವೇರಿ ಹಿರೇಮಠ. ಅನ್ನಪೂರ್ಣ ಚವಾಣ್ ಹಾಗೂ ಸಂಜೆಯ ಎಂ ಅವರೊಂದಿಗೆ ಸುಕಿ ತಂಡದಿಂದ ಕಿರಣ್ ಪಾಟೀಲ್ ಆನಂದ ಪಾಟೀಲ್ ಪ್ರಕಾಶ ದಂಡೋತಿ. ವಿಠ್ಠಲ್ ಮೇತ್ರೆ ಕವಿರಾಜ ನಿಂಬಾಳ ವಾಣಿಶ್ರೀ ಜೋಷಿ ಮಹೇಶ ಕುಮಾರ ನಿಪ್ಪಾಣಿಎಂ ಸಂಜೀವ ಸಿದ್ದಣ್ಣ ಡಿಗ್ಗಾವಿ ಸಂಗಯ್ಯ ಹಳ್ಳದಮಠ ಅಂಬರೀಷ ಕುಲಕರ್ಣಿ ಹಾಡಲಿದ್ದಾರೆ ಎಂದು ಸುಕಿ ತಂಡದ ಪ್ರದಾನ ಕಾರ್ಯಕ್ರಮದರ್ಶಿ ಶರಣು ಪಟ್ಟಣಶೆಟ್ಟಿ ತಿಳಿದ್ದಾರೆ.