ಆ.31, ಸೆ.1 ರಂದು ಇಂಡಿಯಾ ಮೈತ್ರಿಕೂಟದ ಮಹತ್ವದ ಸಭೆ

ಮುಂಬೈ,ಆ.28- ಮುಂಬರುವ ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಕಾರ್ಯತಂತ್ರ ರೂಪಿಸಲು ವಿರೋದ ಪಕ್ಷಗಳ ಮೈತ್ರಿಕೂಟ’ ಇಂಡಿಯಾ”ದ ಮಹತ್ವದ ಸಭೆ ಮುಂಬೈನಲ್ಲಿ ಇದೇ 31 ಮತ್ತು ಸೆಪ್ಟಂಬರ್ 1 ರಂದು ನಡೆಯಲಿದ್ದು ದೇಶದ ರಾಜಕಾರಣದಲ್ಲಿ ಕುತೂಹಲ ಕೆರಳಿಸಿದೆ.

ಪಾಟ್ನಾ, ಬೆಂಗಳೂರು ಸಭೆಯ ಬಳಿಕ ಮುಂಬೈನಲ್ಲಿ ಇಂಡಿಯಾ ಮೈತ್ರಿಕೂಟದ ಸಭೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಮಹತ್ವ ಪಡೆದುಕೊಂಡಿದ್ದು ಎರಡು ದಿನಗಳ ಸಭೆಯಲ್ಲಿ ಇನ್ನಷ್ಟು ರಾಜಕೀಯ ಪಕ್ಷಗಳು ಸೇರ್ಪಡೆಯಾಗುವ ಸಾಧ್ಯತೆಗಳಿವೆ.

ಮುಂಬರುವ ಲೋಕಸಭೆ ಚುನಾವಣೆಯನ್ನು ಎದುರಿಸಲು ಅನುಸರಿಸಬೇಕಾದ ಕಾರ್ಯತಂತ್ರಗಳು ಸೇರಿದಂತೆ ಹಲವು ಮಹತ್ವದ ನಿರ್ಧಾರ ಕೈಗೊಳ್ಳುವ ಸಾಧ್ಯತೆಗಳಿವೆ.

ಎರಡು ದಿನಗಳ ಕಾಲ ನಡೆಯಲಿರುವ ಸಭೆಯಲ್ಲಿ ಇಂಡಿಯಾ ಮೈತ್ರಿಕೂಟದ ಅಧ್ಯಕ್ಷರಾಗಿ ಸೋನಿಯಾ ಗಾಂಧಿ ಹಾಗು ಸಂಚಾಲಕರನ್ನಾಗಿ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರನ್ನು ಸಂಚಾಲಕರನ್ನಾಗಿ ನೇಮಕ ಮಾಡುವ ಸಾದ್ಯತೆಗಳಿವೆ.

ಇದಲ್ಲದೆ ಚುನಾವಣೆ ಎದುರಿಸಲು ಅನುಸರಿಸಬೇಕಾ ರಣತಂತ್ರಗಳ ಕುರಿತು ಸಮನ್ವಯ ಸಮಿತಿ ರಚಿಸುವ ಸಾಧ್ಯತೆಗಳು ಇವೆ.

ಜಿತೇಗಾ ಇಂಡಿಯಾ:

ಮುಂಬೈನ ವಿವಿಧ ಭಾಗಗಳಲ್ಲಿ ಜಿತೇಗಾ ಇಂಡಿಯಾ ಎನ್ನುವ ಬ್ಯಾನರ್ ಬಂಟಿಂಗ್ ಎಲ್ಲೆಡೆ ರಾಜಾಜಿಸುತ್ತಿದ್ದು ಗಮನ ಸೆಳೆಯುತ್ತಿದೆ.

ಆ.31 ಮತ್ತು ಸೆಪ್ಟಂಬರ್ 1 ರಂದು ನಡೆಯಲಿದ್ದು ಮಹತ್ವ ಪಡೆದುಕೊಂಡಿದ್ದು ಇಂಡಿಯಾ ಮೈತ್ರಿಕೂಟದ ಎಲ್ಲಾ ನಾಯಕರು ಭಾಗಿಯಾಗಲಿದ್ದಾರೆ.