ಆ.23 ರಂದು ಗ್ರಾಮದೇವತೆ ಕಾರ್ಯ


ಸಂಜೆವಾಣಿ ವಾರ್ತೆ
ಕೊಟ್ಟೂರು, ಜು.19- ಪಟ್ಟಣದ ಗ್ರಾಮದೇವತೆ ಊರಮ್ಮ ದೇವಿಯನ್ನು ಹೊಳೆಗೆ ಹೊರಡಿಸುವ ಕಾರ್ಯಕ್ರಮವು ಆ-23ಕ್ಕೆ ಅದ್ದೂರಿಯಾಗಿ ನಡೆಯಲಿದೆ.
ಊರಮ್ಮ ದೇವಿಯ ಹೊಳೆಗೊಣಿಸುವ (ಗದ್ದಿಗಲಿಸುವ) ಕಾರ್ಯಕ್ರಮ ಹಮ್ಮಿಕೊಳ್ಳುವ ನಿಮಿತ್ತ ಪೂರ್ವ ಭಾವಿಯಾಗಿ ಸೋಮವಾರ ದೇವಿಯ ಪ್ರಾಂಗಣದಲ್ಲಿ ಊರಿನ ದೈವದವರು ಸರ್ವ ಜನಾಂಗದವರು ಕೂಡಿ ಕರದೆ ಸಭೆಯಲ್ಲಿ ಪರಸ್ಪರರು ಸೌಹಾರ್ದಯುತವಾಗಿ ಚರ್ಚಿಸಿ ಒಮ್ಮತ ಅಭಿಪ್ರಾಯದೊಂದಿಗೆ ಆಗಸ್ಟ್-23 ಕ್ಕೆ ಕಾರ್ಯಕ್ರಮ ಅದ್ದೂರಿಯಾಗಿ ನಡೆಸಲು ತೀರ್ಮಾನಿಸಿದ್ದಾರೆ.

Attachments area