ಆ 2 ರಿಂದ ಧುತ್ತರಗಾಂವದಲ್ಲಿ ವೀರೇಶ್ವರ ಪುರಾಣ ಪ್ರಾರಂಭ

ಕಲಬುರಗಿ ಜು 30: ಅಳಂದ ತಾಲೂಕಿನ ಧುತ್ತರಗಾಂವ ಗ್ರಾಮದ 700 ವರ್ಷ ಇತಿಹಾಸ ಹೊಂದಿರುವ ಗ್ರಾಮದ ಆರಾಧ್ಯದೈವ ವೀರೇಶ್ವರರ ಶ್ರಾವಣಮಾಸದ ಮಹಾಪುರಾಣ ಆಗಸ್ಟ್ 2 ರಿಂದ ಪ್ರಾರಂಭಗೊಳ್ಳಲಿದೆ.
ಉಜ್ಜಯಿನಿ ಪೀಠದ ಜಗದ್ಗುರು ಸಿದ್ಧಲಿಂಗ ಶಿವಾಚಾರ್ಯ ಭಗವತ್ಪಾದರು,ಕಡಗಂಚಿ ಮಠದ ವೀರಭದ್ರ ಶಿವಾಚಾರ್ಯರು, ಚಿನ್ಮಯಗಿರಿ ಮಠದ ಮಹಾಂತ ಶಿವಾಚಾರ್ಯರು ಇವರ ಕೃಪಾಶೀರ್ವಾದದೊಂದಿಗೆ ಪುರಾಣ ಪ್ರಾರಂಭಗೊಳ್ಳಲಿದೆ.ಪುರಾಣ ಕಾರ್ಯಕ್ರಮವನ್ನು ಪುರಾಣಿಕರಾದ ವೇದಮೂರ್ತಿ ಶಿವಕವಿ ಜೋಗೂರ,ವಾಚಕರಾದ ಶರಣಯ್ಯ ವಿಶ್ವನಾಥಮಠ ಧುತ್ತರಗಾಂವ,ಸಂಗೀತಸೇವೆ ಶಿವಕುಮಾರ ಹಿರೇಮಠ ಜಾಲಹಳ್ಳಿ,ತಬಲಾವಾದನ ಮಲ್ಲಿಕಾರ್ಜುನ ವರನಾಳ,ಬಸವಣ್ಣನ ಸೇವೆಯನ್ನು ಶ್ರೀಮಂತ ಭೇರ್ಜಿ ನಡೆಸಿಕೊಡುವರು ಎಂದು ಧುತ್ತರಗಾಂವ ವೀರೇಶ್ವರ ದೇವಸ್ಥಾನದ ಸೇವಾಸಮಿತಿಯವರು ತಿಳಿಸಿದ್ದಾರೆ .