ಆ. 19 ರಂದು ನನ್ನ ಮಣ್ಣು ನನ್ನ ದೇಶ ಅಭಿಯಾನ

ಕಲಬುರಗಿ,ಆ.18: ಆಜಾದಿ ಈ ಅಮೃತ ಮಹೋತ್ಸವದ ಅಂಗವಾಗಿ ದೇಶಕ್ಕಾಗಿ ತ್ಯಾಗ ಮಾಡಿದ ವೀರರಿಗೆ ಗೌರವ ಸಲ್ಲಿಸುವ “ನನ್ನ ಮಣ್ಣು ನನ್ನ ದೇಶ” ಆಭಿಯಾನದಡಿ ಕಲಬುರಗಿ ಮಹಾನಗರ ಪಾಲಿಕೆಯಿಂದ ಆಗಸ್ಟ್ 19 ರಂದು ಬೆಳಿಗ್ಗೆ 11 ಗಂಟೆಗೆ ಕಲಬುರಗಿ ನಗರದ ಗುಲಶನ್ ಉದ್ಯಾನವನದಲ್ಲಿ ಶಿಲಾಫಲಕ ಆನಾವರಣ ಮತ್ತು ಸಸಿಗಳು ನೆಡುವ ಕಾರ್ಯಕ್ರಮನ್ನು ಹಮ್ಮಿಕೊಳ್ಳಲಾಗಿದೆ ಎಂದು ಪಾಲಿಕೆ ಆಯುಕ್ತ‌ ಭುವನೇಶ ಪಾಟೀಲ ದೇವಿದಾಸ್ ತಿಳಿಸಿದ್ದಾರೆ.