
ಕಲಬುರಗಿ,ಆ.16:ದೃಶ್ಯಬೆಳಕು ಸಾಂಸ್ಕøತಿಕ ಸಂಸ್ಥೆ ಮತ್ತು ಕೃತ್ತಿಕ ಸಾಂಸ್ಕøತಿಕ ಸಂಸ್ಥೆಯ ಸಂಯುಕ್ತಾಶ್ರಯದಲ್ಲಿ ವಿಶ್ವ ಛಾಯಾಚಿತ್ರ ದಿನಾಚರಣೆ ಅಂಗವಾಗಿ ಸಮೂಹ ಛಾಯಾಚಿತ್ರ ಪ್ರದರ್ಶನ ಮತ್ತು ವಿಶೇಷ ಉಪನ್ಯಾಸ ಕಾರ್ಯಕ್ರಮವನ್ನು ನಗರದ ಬಿದ್ದಾಪೂರ್ ಕಾಲೋನಿಯಲ್ಲಿರುವ ಜಾನೆ ಆರ್ಟ್ ಗ್ಯಾಲರಿಯಲ್ಲಿ ಅಗಸ್ಟ್ 19ರಿಂದ 24ರವರೆಗೆ ಆಯೋಜಿಸಲಾಗಿದೆ ಎಂದು ಸಂಸ್ಥೆಯ ಕಾರ್ಯದರ್ಶಿಗಳಾದ ಮಂಜುಳಾ ಎಸ್. ಜಾನೆ, ನಯನಾ ಬಿ., ಅವರು ತಿಳಿಸಿದ್ದಾರೆ.
ಸಮೂಹ ಛಾಯಾಚಿತ್ರ ಪ್ರದರ್ಶನದಲ್ಲಿ ಯುವ ಛಾಯಾಗ್ರಾಹಕರಾದ ಮೋಹನ್ ಚಿಂಚೋಳಿ, ತಾಜುದ್ದೀನ್ ಆಜಾದ್, ಡಾ. ಪರಶುರಾಮ್ ಪಿ, ವೀರಶೆಟ್ಟಿ ಎಂ. ಪಾಟೀಲ್, ಶಿವಶರಣ್ ಬೆಣ್ಣೂರ್, ಶಿವಶರಣ್ ಡೊಣ್ಣೂರಕರ್, ಸೋಮಶೇಖರ್ ಪಾಟೀಲ್, ಮಲ್ಲಿಕಾರ್ಜುನ್ ವಿಭೂತಿ ಅವರ ಕಲಾತ್ಮಕ ಛಾಯಚಿತ್ರಗಳು ಪ್ರದರ್ಶನಗೊಳ್ಳಲಿವೆ. ಇದೇ ಸಂದರ್ಭದಲ್ಲಿ ಹಿರಿಯ ಛಾಯಾಗ್ರಾಹಕ ತಾಜುದ್ದೀನ್ ಆಜಾದ್ ಅವರು ‘ಪತ್ರಿಕಾ ಛಾಯಾಗ್ರಾಹಕರ ಜವಾಬ್ದಾರಿ, ಸವಾಲುಗಳು ಮತ್ತು ಸಾಧ್ಯತೆಗಳು’ ಕುರಿತು ವಿಶೇಷ ಉಪನ್ಯಾಸ ನೀಡಲಿದ್ದಾರೆ ಎಂದು ಅವರು ಜಂಟಿ ಹೇಳಿಕೆಯಲ್ಲಿ ವಿವರಿಸಿದ್ದಾರೆ.
ಅಗಸ್ಟ್ 19 ರಂದು ಸಂಜೆ 5 ಘಂಟೆಗೆ ನಗರದ ಹಿರಿಯ ಪತ್ರಿಕಾ ಛಾಯಾಗ್ರಾಹಕ ಆನಂದ್ ಬಕ್ಷಿ ಅವರು ಛಾಯಾಚಿತ್ರ ಪ್ರದರ್ಶನ ಉದ್ಘಾಟಿಸಲಿದ್ದಾರೆ. ಅಧ್ಯಕ್ಷತೆಯನ್ನು ಹಿರಿಯ ಚಿತ್ರಕಲಾವಿದ ಬಸವರಾಜ್ ಎಲ್, ಜಾನೆ ವಹಿಸುವರು. ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಉಪಾಧ್ಯಕ್ಷ ಭವಾನಿಸಿಂಗ್ ಠಾಕೂgರ್‍ಅವರು ಮುಖ್ಯ ಅತಿಥಿಯಾಗಿ ಆಗಮಿಸುವರು. ಸಮೂಹ ಛಾಯಾಚಿತ್ರ ಪ್ರದರ್ಶನದಲ್ಲಿ ಒಟ್ಟು 80ಕ್ಕೂ ಹೆಚ್ಚು ವಿಭಿನ್ನ ಕಲಾತ್ಮಕ ಛಾಯಚಿತ್ರಗಳು ಪ್ರದರ್ಶನಗೊಳ್ಳಲಿವೆ. ಛಾಯಾಚಿತ್ರ ಪ್ರದರ್ಶನವು ಸಾರ್ವಜನಿಕರಿಗಾಗಿ ಆಗಸ್ಟ್ 19ರಿಂದ ಆಗಸ್ಟ್ 24ರವರೆಗೆ ಬೆಳಿಗ್ಗೆ 11-30ರಿಂದ ಸಂಜೆ 7 ಗಂಟೆಯವರೆಗೆ ಇರುತ್ತದೆ ಎಂದು ಅವರು ತಿಳಿಸಿದ್ದಾರೆ.