ಆ.17 ರಂದು ಡಾ.ನಾಗರೆಡ್ಡಿ ಪಾಟೀಲರ ಅಮೃತ ಮಹೋತ್ಸವ

ಕಲಬುರಗಿ,ಜು.17: ಶ್ರೀ ಕೊತ್ತಲ ಬಸವೇಶ್ವರ ಭಾರತೀಯ ಶಿಕ್ಷಣ ಸಮಿತಿ ಸಂಸ್ಥಾಪಕ ಕಾರ್ಯದರ್ಶಿಗಳು ಮತ್ತು ಮಾಜಿ ಶಾಸಕರಾದ ಡಾ.ನಾಗರೆಡ್ಡಿ ಪಾಟೀಲ ಅವರಿಗೆ 75 ವರ್ಷ ತುಂಬುತ್ತಿರುವ ಹಿನ್ನೆಲೆಯಲ್ಲಿ ಅಮೃತ ಮಹೋತ್ಸವ ಆಯೋಜಿಸಲು ನಿರ್ಧರಿಸಲಾಯಿತು.
ಈ ನಿಮಿತ್ತ ಸೇಡಂನ ಶ್ರೀ ಕೊತ್ತಲ ಬಸವೇಶ್ವರ ದೇವಾಲಯದಲ್ಲಿ ಕರೆಯಲಾದ ಪೂರ್ವಭಾವಿ ಸಭೆಯಲ್ಲಿ ಸಾನಿಧ್ಯ ವಹಿಸಿದ್ದ ಪೂಜ್ಯ ಶ್ರೀ ಸದಾಶಿವ ಮಹಾಸ್ವಾಮಿಗಳು ಮಾತನಾಡಿ, ಶೈಕ್ಷಣಿಕ, ರಾಜಕೀಯ ಮತ್ತು ಸಾಮಾಜಿಕವಾಗಿ ಅಹರ್ನಿಶಿ ಶ್ರಮಿಸಿ, ಸೇಡಂ ನೆಲದ ಏಳಿಗೆಯಲ್ಲಿ ಕೊಡುಗೆ ನೀಡಿದ ಡಾ.ನಾಗರೆಡ್ಡಿ ಪಾಟೀಲ ಅವರಿಗೆ ಅಭಿನಂದನೆ ಸಲ್ಲಿಸುವ ನಿಟ್ಟಿನಲ್ಲಿ ಅರ್ಥಪೂರ್ಣವಾಗಿ ಕಾರ್ಯಕ್ರಮವನ್ನು ಆಗಸ್ಟ್ 17 ರಂದು ಆಯೋಜಿಸಲಾಗುವುದು. ಇದಕ್ಕಾಗಿ ಅಭಿನಂದನಾ ಸಮಿತಿಯನ್ನು ರಚಿಸಿ, ಸಮಸ್ತರು ಕಾರ್ಯಕ್ರಮದ ಯಶಸ್ವಿಗಾಗಿ ಸಹಕಾರ ನೀಡವಂತೆ ಕೋರಿದರು.
ಸಭೆಯಲ್ಲಿದ್ದ ಮಾಜಿ ಸಚಿವರಾದ ಡಾ.ಶರಣಪ್ರಕಾಶ ಪಾಟೀಲ ಮಾತನಾಡಿ, ಜಾತ್ಯತೀತ ಮತ್ತು ಪಕ್ಷಾತೀತವಾಗಿ ಎಲ್ಲರಿಗೂ ಬೇಕಾದ ವ್ಯಕ್ತಿತ್ವವನ್ನು ಹೊಂದಿರುವ ಡಾ.ನಾಗರೆಡ್ಡಿ ಪಾಟೀಲ ಅವರ ಅಭಿನಂದನಾ ಸಮಾರಂಭದಲ್ಲಿ ಅವರು ಕುರಿತಾದ ಅಭಿನಂದನಾ ಗ್ರಂಥವನ್ನು ಬಿಡುಗಡೆ ಮಾಡಲಾಗುವುದು. ಇದರ ಸಂಪಾದಕತ್ವದ ಜವಾಬ್ದಾರಿಯನ್ನು ಪತ್ರಕರ್ತ-ಲೇಖಕರಾದ ಮಹಿಪಾಲರೆಡ್ಡಿ ಮುನ್ನೂರ್ ಅವರು ಸೊಗಸಾಗಿ ಗ್ರಂಥವನ್ನು ಸಿದ್ದಮಾಡಿದ್ದಾರೆ. ಸಮಾರಂಭದ ಯಶಸ್ವಿಗಾಗಿ ಎಲ್ಲಾ ರೀತಿಯಿಂದ ಸಹಕಾರ ನೀಡುವುದಾಗಿ ಹೇಳಿದರು.
ಮಾಜಿ ಉಪಸಭಾಪತಿಗಳಾದ ಚಂದ್ರಶೇಖರರೆಡ್ಡಿ ದೇಶಮುಖ ಮದನಾ ಹಾಗೂ ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷರಾದ ನಾಗೇಶ್ವರರಾವ ಮಾಲಿಪಾಟೀಲ ಇದ್ದರು. ಅಭಿನಂದನಾ ಗ್ರಂಥದ ಸಂಪಾದಕರಾದ ಮಹಿಪಾಲರೆಡ್ಡಿ ಮುನ್ನೂರ್ ಪ್ರಾಸ್ತಾವಿಕ ಮಾತನಾಡಿದರು.
ಅನಂತರೆಡ್ಡಿ ಪಾಟೀಲ, ವೆಂಕಟರೆಡ್ಡಿ ಮಾಧವಾರ, ಕಲ್ಯಾಣಪ್ಪ ಪಾಟೀಲ ಮಳಖೇಡ, ಸುದರ್ಶನರೆಡ್ಡಿ ಪಾಟೀಲ, ವಿಶ್ವನಾಥ ಪಾಟೀಲ ಬೊಮ್ನಳ್ಳಿ, ಹಾಶರೆಡ್ಡಿ ಮನ್ನೆ, ಜಯಶ್ರೀ ಐನಾಪುರ, ಭಾಗ್ಯಶ್ರೀ ಕುಲಕರ್ಣಿ, ಆರೀಫ್ ಸೇಟ್, ಪರ್ವತರೆಡ್ಡಿ ಪಾಟೀಲ ನಾಮವಾರ, ನಾಗಭೂಷಣರೆಡ್ಡಿ ಪಾಟೀಲ, ವೀರಾರೆಡ್ಡಿ ಹೂವಿನಬಾವಿ, ಮುರಿಗೆಪ್ಪ ಕೊಳಕೂರ, ಪಿ.ಭೀಮರೆಡ್ಡಿ, ಅನಂತಯ್ಯ ಮುಸ್ತಾಜರ, ನಾರಾಯಣರೆಡ್ಡಿ ಮಾಧವಾರ, ಶರಣಪ್ಪ ತುಳೇರ, ಮಹಾದೇವಪ್ಪ ಮೇದಾರ, ಭೀಮಾಶಂಕರ ಕೊಳ್ಳಿ, ಜಗನ್ನಾಥ ಚಿಂತಪಳ್ಳಿ ಸೇರಿದಂತೆ ಅನೇಕರು ಇದ್ದರು.
ಅಭಿನಂದನಾ ಸಮಿತಿ ರಚನೆ :
ಡಾ.ನಾಗರೆಡ್ಡಿ ಪಾಟೀಲ ಅವರ ಅಭಿನಂದನಾ ಸಮಿತಿಗೆ ಪೂಜ್ಯ ಶ್ರೀ ಸದಾಶಿವ ಮಹಾಸ್ವಾಮಿಜಿ (ಗೌರವಾಧ್ಯಕ್ಷರು), ಡಾ.ಬಸವರಾಜ ಪಾಟೀಲ ಸೇಡಂ (ಅಧ್ಯಕ್ಷರು), ರಾಜಕುಮಾರ ಪಾಟೀಲ ತೆಲ್ಕೂರ ಮತ್ತು ಡಾ.ಶರಣಪ್ರಕಾಶ ಪಾಟೀಲ (ಕಾರ್ಯಾಧ್ಯಕ್ಷರು), ನಾಗೇಶ್ವರರಾವ ಮಾಲಿಪಾಟೀಲ, ಡಾ.ಸದಾನಂದ ಬೂದಿ, ಡಾ.ಶಶಿಶೇಖರರೆಡ್ಡಿ, ದತ್ತಾತ್ರೇಯ ಐನಾಪುರ (ಪ್ರಧಾನ ಕಾರ್ಯದರ್ಶಿಗಳು), ಸಿದ್ದಪ್ಪ ತಳ್ಳಳ್ಳಿ, ಮದನಗೋಪಾಲ ಹೆಡ್ಡಾ (ಕೋಶಾಧ್ಯಕ್ಷರು), ಮಹಿಪಾಲರೆಡ್ಡಿ-ಶರಣಗೌಡ ಎಸ್.ಪಾಟೀಲ (ಸಂಚಾಲಕರು), ಉಪಾಧ್ಯಕ್ಷರು, ಕಾರ್ಯದರ್ಶಿಗಳು, ಸಂಘಟನಾ ಕಾರ್ಯದರ್ಶಿಗಳು ಮತ್ತು ಸದಸ್ಯರನ್ನು ನೇಮಕ ಮಾಡಲಾಗಿದೆ.