
ಚಿಂಚೋಳಿ,ಆ.10- ತಾಲೂಕಿನ ರಟಕಲ್ ಗ್ರಾಮದ ಶ್ರೀ ಮ.ನಿ.ಪ್ರ ಸಿದ್ದರಾಮ ಮಹಾದೇವರು ಅನುಷ್ಠಾನ ಮೂರ್ತಿಗಳಾದಂತಹ ಚಿಂಚೋಳಿ ತಾಲೂಕಿನಲ್ಲಿ ಭೋಗ ಲಿಂಗೇಶ್ವರ, ಅಂಬುರಾಮೇಶ್ವರ ಹಾಗೂ ಅನೇಕ ಸ್ಥಳಗಳಲ್ಲಿ ಪ್ರತಿವರ್ಷದಂತೆ ಈ ವರ್ಷವೂ ಕೂಡ ಚಿಂಚೋಳಿ ತಾಲೂಕಿನ ಹಲಕೋಡ ಗ್ರಾಮದ ದೇವಸ್ಥಾನದಲ್ಲಿ 30 ದಿನಗಳ ಕಾಲ ಮೌನವೃತ ಅನುಷ್ಠಾನವನ್ನು ಕುಳಿತಿರುವ ಶ್ರೀಗಳ ಅನುಷ್ಠಾನ ಮಹಾಮಂಗಳ ಇದೇ ದಿನಾಂಕ: 16/8/2023 ರಂದು ಜರುಗಲಿದೆ.
ಅನುಷ್ಠಾನ ಮಹಾಮಂಗಳ ಮಹಾ ಕಾರ್ಯಕ್ರಮ ದಲ್ಲಿ ಸದ್ಭಕ್ತರು ಪಾಲ್ಗೊಂಡು ಶ್ರೀಗಳ ಕೃಪೆಗೆ ಪಾತ್ರರಾಗುವಂತೆ ಶ್ರೀಗಳ ಭಕ್ತರಾದ ಬಸವರಾಜ ಕುಂಬಾರ, ಮತ್ತು ಚೇತನ ಅಣವಾರ ಅವರು ಪ್ರಕಟಣೆಯಲ್ಲಿ ಮನವಿ ಮಾಡಿದ್ದಾರೆ.